Wednesday, February 5, 2025

Latest Posts

ನಟ ವಿಶಾಲ್‌ಗೆ ಹೀಗಾಗಿದ್ದು ನೋಡಿ ಭಾರೀ ಖುಷಿಯಾಯಿತು: ಖ್ಯಾತ ಗಾಯಕಿ ಸುಚಿತ್ರಾ

- Advertisement -

Movie News: ತಮಿಳು ನಟ ವಿಶಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಮೈಕ್ ಹಿಡಿಯುವುದಕ್ಕೂ ಒದ್ದಾಡಿದ್ದು, ನಡುಗುವ ಸ್ಥಿತಿಯಲ್ಲಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ಕಂಡು ವಿಶಾಲ್ ಫ್ಯಾನ್ಸ್, ನಮ್ಮ ನೆಚ್ಚಿನ ನಟನಿಗೆ ಇದೇನಾಯಿತು..? ಮುಖವೆಲ್ಲ ಬಾತುಕೊಂಡು, ಮೈ ಕೈಯಲ್ಲಿ ಶಕ್ತಿ ಇಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರಕ್ಕೆ ಸದ್ಯ ಕ್ಲಾರಿಟಿ ಸಿಕ್ಕಿದ್ದು, ಇದು ವೈರಲ್ ಜ್ವರವಾಗಿದ್ದು, ದೇಹದಲ್ಲಿರುವ ಶಕ್ತಿಯನ್ನೆಲ್ಲ ಕಳೆದುಕೊಂಡು, ವಿಶಾಲ್ ಕಳಾಹೀನರಾಗಿದ್ದಾರೆ ಎನ್ನಲಾಗಿದೆ. ಆದರೆ ಅವರ ಈ ಪರಿಸ್ಥಿತಿ ಕಂಡು ಖ್ಯಾತ ಗಾಯಕಿ ಸುಚಿತ್ರಾ ವ್ಯಂಗ್ಯವಾಡಿದ್ದಾರೆ. ವಿಶಾಲ್‌ನನ್ನು ಈ ರೀತಿ ನೋಡಲು ಖುಷಿಯಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸುಚಿತ್ರಾ ಗಾಯಕಿಯ ಸ್ಥಾನದಲ್ಲಿದ್ದು, ಈ ರೀತಿ ಹೇಳಿಕೆ ಕೊಟ್ಟಿದ್ದಾದ್ರೂ ಯಾಕೆ ಅನ್ನೋ ಪ್ರಶ್ನೆಗೆ ಉತ್ತರ, ಒಮ್ಮೆ ಸುಚಿತ್ರಾ ಕಾರ್ತಿ ಕುಮಾರ್ ಜೊತೆ ವಾಸವಿದ್ದಾಗ, ಮನೆಯಲ್ಲಿ ಕಾರ್ತಿಕ್ ಕುಮಾರ್ ಇಲ್ಲದ ಸಮಯದಲ್ಲಿ, ನಟ ವಿಶಾಲ್, ಅವರ ಮನೆಗೆ ವೈನ್ ಬಾಟಲ್ ಹಿಡಿದು ಬಂದಿದ್ದರಂತೆ. ಒಳಗೆ ಬನ್ನಿ ಎಂದು ಹೇಳಿದಾಗ, ಬೇಡ ನಾನು ಬರುವುದಿಲ್ಲ, ಈ ವೈನ್ ಬಾಟಲಿ ಕೊಟ್ಟು ಹೋಗಲು ಬಂದೆ ಎಂದರಂತೆ. ಆದರೆ, ತನಗೆ ಈ ವೈನ್ ಬಾಟಲಿ ಬೇಡ, ಕಾರ್ತಿಕ್ ಗೌತಮ್ ಮೆನನ್ ಅವರ ಕಚೇರಿಯಲ್ಲಿ ಇದ್ದಾರೆಂದು ಹೇಳಿದರಂತೆ.

ನಡೆದಿದ್ದು ಇಷ್ಟೇ. ಆದರೆ ವಿಶಾಲ್ ಕುಡಿದು, ವೈನ್ ಬಾಟಲಿ ಹಿಡಿದು ಬಂದಿದ್ದಕ್ಕೆ ಸುಚಿತ್ರಾ ಅವರಿಗೆ ಕೋಪ ಬಂದಿದ್ದು, ಅವರು ನಟ ವಿಶಾಲ್ ಪರಿಸ್ಥಿತಿ ಕಂಡು ಖುಷಿಯಾಗಿದೆ ಎಂದು ವಿವಾದಕ್ಕೀಡಾಗಿದ್ದಾರೆ. ಯಾರು ಏನೇ ಹೇಳಲಿ ನೆಚ್ಚಿನ ನಟ ಬೇಗ ಗುಣಮುಖರಾಗಿ, ಮುಂದೆಯೂ ಈ ಹಿಂದಿನಂತೆ ಮಾಸ್ ಸಿನಿಮಾ ಕೊಡಲಿ ಎಂದು ಅವರ ಫ್ಯಾನ್ಸ್ ದೇವರಲ್ಲಿ ಪ್ರಾರ್ಥಿಸಿದ್ದಾರೆ.

- Advertisement -

Latest Posts

Don't Miss