Gujarat News: ಚಾಮರಾಜನಗರದಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ, ಗುಜರಾತ್‌ನಲ್ಲೂ ಅಂಥದ್ದೊಂದು ಘಟನೆ ನಡೆದಿದೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, 8 ವರ್ಷದ ಬಾಲಕಿ ಶಾಲೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಬಾಲಕಿ ಸ್ನೇಹಿತೆಯರೊಂದಿಗೆ ನಡೆದುಕೊಂಡು ಹೋಗುವಾಗ, ಸುಸ್ತಾಗಿ, ಅಲ್ಲೇ ಇದ್ದ ಬೆಂಚ್ ಮೇಲೆ ಕೂರುತ್ತಾಳೆ. ಬಳಿಕ ಅಲ್ಲೇ ಕುಸಿದು ಬೀಳುತ್ತಾಳೆ. ಸ್ಥಳದಲ್ಲೇ ಇದ್ದ ಶಿಕ್ಷಕಿಯರು ಆ ಮಗುವನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದರೂ, ವೈದ್ಯರು ಆ ಮಗು ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಹೇಳಿದ್ದಾರೆ.
ಇನ್ನು ಶಾಲೆಯ ಶಿಕ್ಷಕಿಯಾಗಿರು ಶರ್ಮಿಷ್ಠಾ ಎಂಬುವವರು ಮಾತನಾಡಿದ್ದು, ಅವಳಿಗೆ ಉಸಿರಾಟದ ತೊಂದರೆ ಇದ್ದು, ಆಕೆ ಅಸ್ವಸ್ಥಳಾಗಿ ಶಾಲೆಯ ಕಾರಿಡಾರ್‌ನಲ್ಲಿ ಬಿದ್ದಿದ್ದಳು. ತಕ್ಷಣ ಆಸ್ಪತ್ರೆಗೆ ಸೇರಿಸಿದರೂ, ಆಕೆಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲವೆಂದು ಹೇಳಿದರು.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬಾಲಕಿಯ ಪೋಷಕರು ಮುಂಬೈನಲ್ಲಿ ವಾಸಿಸುತ್ತಿದ್ದು, ಅಹಮದಾಾಬಾಾದ್‌ನಲ್ಲಿ ಅಜ್ಜಿಯೊಂದಿಗೆ ಮಗು ವಾಸಿಸುತ್ತಿತ್ತು.