Wednesday, February 5, 2025

Latest Posts

ರಾಜೀನಾಮೆ ಕೊಡಿ, ಇಲ್ಲವೇ ಉಸ್ತುವಾರಿ ಬದಲಿಸಿ: ಸಚಿವ ರಾಜಣ್ಣ ವಿರುದ್ಧ ಆಕ್ರೋಶ

- Advertisement -

Hassan News: ಹಾಸನ ಜಿಲ್ಲಾ ಉಸ್ತುವಾರಿಯಾಗಿರುವ ರಾಜಣ್ಣ ಅವರು ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿದ್ದು, ರಾಜ್ಯ ಸರ್ಕಾರ ಉಸ್ತುವಾರಿ ಸಚಿವರನ್ನು ಬದಲಾಯಿಸಲಿ ಎಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ರಾಜಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದು 2 ವರ್ಷವಾಗಿದೆ. ಆದರೆ ಅವರ ಕಾರ್ಯವೈಖರಿ ಸರಿ ಇಲ್ಲ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ರಾಜ್ಯದ ವರಿಷ್ಠರು ರಾಜಣ್ಣನವರ ಮೇಲೆ ನಂಬಿಕೆ ಇಟ್ಟು, ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದಾರೆ. ಇವರು ಉಸ್ತುವಾರಿ ಆಗಿ ಬಂದಾಗ, ಜಿಲ್ಲೆಯ ಜೆಡಿಎಸ್- ಬಿಜೆಪಿ ಕಾರ್ಯಕರ್ತರಿಂದ ತುಳಿತಕ್ಕೆ ಒಳಗಾಗಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ, ಇನ್ನು ಮುಂದೆ ತಮಗೇನೂ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ಇತ್ತು. ಆದರೆ ರಾಜಣ್ಣ ಅವರ ಉಸ್ತುವಾರಿಯಲ್ಲಿ ಎಲ್ಲವೂ ಸುಳ್ಳಾಗಿದೆ ಎಂದು ರಂಗಸ್ವಾಮಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಹುದ್ದೆ ಕೊಡಿಸಲು ರಾಜಣ್ಣ ಪ್ರಯತ್ನಿಸಿಲ್ಲ. ಜಾತಿ ಹೆಸರು ತೆಗೆದುಕೊಳ್ಳುತ್ತ ಹಾಸನ ಜಿಲ್ಲೆಗೆ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಾರೆ. ಪಕ್ಷಕ್ಕಾಗಿ ದುಡಿದಿರುವ ಅಲ್ಪಸಂಖ್ಯಾತ ಮುಖಂಡರಿಗೆ ರಾಜ್ಯಮಟ್ಟದಲ್ಲಿ ಹುದ್ದೆ ಕೊಡಿಸುವಲ್ಲಿ ರಾಜಣ್ಣ ವಿಫಲರಾಗಿದ್ದಾರೆಂದು ಬನವಾಸೆ ರಂಗಸ್ವಾಮಿ ಆರೋಪಿಸಿದ್ದಾರೆ.

 

- Advertisement -

Latest Posts

Don't Miss