Evening Snacks: ಕಾರ್ನ್ ಕಟ್ಲೇಟ್ ರೆಸಿಪಿ

Evening Snacks: ಸಂಜೆ ಹೊತ್ತು ಚಹಾ ಕುಡಿಯುವ ಸಮಯದಲ್ಲಿ ಏನಾದರೂ ಕ್ರಿಸ್ಪಿಯಾಗಿ ತಿಂಡಿ ತಿನ್ನಬೇಕು ಅಂತಾ ಅನ್ನಿಸೋದು ಸಹಜ. ಆದೆರ ಅದು ಕ್ರಿಸ್ಪಿಯಾಗಿಯೂ, ಖಾರ ಖಾರವಾಗಿಯೂ, ಆರೋಗ್ಯವಾಗಿಯೂ ಇರಬೇಕು ಅಂದ್ರೆ, ಆ ತಿಂಡಿಯನ್ನು ನೀವು ಮನೆಯಲ್ಲೇ ತಯಾಾರಿಸಿ ತಿನ್ನಬೇಕು. ಅಂಥದ್ದೇ ಒಂದು ರೆಸಿಪಿ ಬಗ್ಗೆ ನಾವಿಂದು ಹೇಳಲಿದ್ದೇವೆ.

1 ಕಪ್ ಸ್ವೀಟ್ ಕಾರ್ನ್, 1 ಕ್ಯಾರೆಟ್ ತುರಿ, 1 ಕ್ಯಾಪ್ಸಿಕಂ, 1 ಈರುಳ್ಳಿ, ಕೊಂಚ ಕೊತ್ತೊಂಬರಿ ಸೊಪ್ಪು, ಕೊಂಚ ಅರಿಶಿನ, 1 ಸ್ಪೂನ್ ಖಾರದ ಪುಡಿ, ಧನಿಯಾಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಉಪ್ಪು, 2 ಬೇಯಿಸಿದ ಆಲೂಗಡ್ಡೆ, ಕಾಲು ಕಪ್ ಬ್ರೆಡ್‌ ಕ್ರಂಬ್ಸ್, 2 ಟೇಬಲ್ ಸ್ಪೂನ್‌ ಕಾರ್ನ್ ಫ್ಲೋರ್, ಕರಿಯಲು ಎಣ್ಣೆ. ಇವಿಷ್ಟು ಕಾರ್ನ್ ಕಟ್ಲೇಟ್ ಮಾಡಲು ಬೇಕಾದ ಸಾಮಗ್ರಿ.

ಮಾಡುವ ವಿಧಾನ: ಮೊದಲು ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ ಇದಕ್ಕೆ ಹೆಚ್ಚಿದ ಕ್ಯಾಪ್ಸಿಂ, ಈರುಳ್ಳಿ, ಕ್ಯಾರೆಟ್ ತುರಿ, ತರಿ ತರಿಯಾಗಿ ರುಬ್ಬಿಕೊಂಡ ಕಾರ್ನ್, ಕೊತ್ತೊಂಬರಿ ಸೊಪ್ಪು, ಅರಿಶಿನ, ಖಾರ, ಧನಿಯಾಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಉಪ್ಪು, ಮ್ಯಾಶ್ ಮಾಡಿದ ಆಲೂಗಡ್ಡೆ, ಬ್ರೆಡ್ ಕ್ರಂಬ್ಸ್, ಕಾರ್ನ್‌ ಫ್ಲೋರ್ ಸೇರಿಸಿ ಮಿಕ್ಸ್ ಮಾಡಿ.

ಬಳಿಕ ಇದಕ್ಕೆ ಕಟ್ಲೇಟ್ ಶೇಪ್ ಕೊಟ್ಟು ಕಾದ ಎಣ್ಣೆಯಲ್ಲಿ ಕರಿದರೆ ಕಾರ್ನ್ ಕಟ್ಲೇಟ್ ರೆಡಿ. ಇದನ್ನು ಟೊಮೆಟೋ ಸಾಸ್‌ನೊಂದಿಗೆ ತಿಂದರೆ, ರುಚಿಯಾಗಿರುತ್ತದೆ.

About The Author