Sunday, October 26, 2025

Latest Posts

Kannada Fact Check: 9 ವರ್ಷದ ಮಗು ಗರ್ಭಿಣಿ..? ಇದು ನಿಜಾನಾ…?

- Advertisement -

Kannada Fact Check: 9 ವರ್ಷದ ಬಾಲಕಿ ಗರ್ಭಿಣಿಯಾಗಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ಹಲವರು ಈ ವೀಡಿಯೋವನ್ನು ಸತ್ಯವೆಂದು ನಂಬಿದ್ದಾರೆ. ಆದರೆ ಇದು ಸತ್ಯವಲ್ಲ.

ಹಾಾಗಾದ್ರೆ ಸತ್ಯವೇನು..?

9 ವರ್ಷದ ಬಾಲಕಿ ಇರನ್ ಮೂಲದವಳು. ಈಕೆಯ ಇನ್‌ಸ್ಟಾಗ್ರಾಮ್ ಖಾತೆ ಇದೆ. ಈಕೆ ಸ್ಥಳೀಯ ಪ್ಲೇಸ್ಕೂಲ್‌ಗೆ ಹೋಗುತ್ತಾಳೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈಕೆ ಬಾಗ್ದಾದ್‌ನ ಜಹೀರಾ ಎಂದು ಹೇಳಲಾಗಿದೆ. ಅಲ್ಲದೇ, ಈಕೆ ಗರ್ಭಿಣಿಯಾಗಿದ್ದಾಳೆ. ಮುಸ್ಲಿಂ ಆಗಿ ಹುಟ್ಟಿದ್ದಕ್ಕೆ ಈಕೆಗೆ ಈ ಶಿಕ್ಷೆ ಅಂತೆಲ್ಲ ಹೇಳಲಾಗಿದೆ. ಇಷ್ಟೇ ಅಲ್ಲದೇ, ಮುಸ್ಲಿಂ ಧರ್ಮ ಅನ್ನೋದು ಶಾಂತಿದೂತರ ಧರ್ಮ ಹಾಾಗಾಗಿಯೇ ಈ ಧರ್ಮದವರಿಗೆ ಈ ಶಿಕ್ಷೆ ಅಂತೆಲ್ಲ ಸುಳ್ಳು ಸುಳ್ಳು ಪೋಸ್ಟ್ ಮಾಡಲಾಗುತ್ತಿದೆ.

ಆದರೆ ಇದು ಸತ್ಯವಲ್ಲ. ಬದಲಾಾಗಿ ಈಕೆ ಒಬ್ಬ ನಟನಾ ತರಬೇತಿ ಪಡೆಯುವ ಬಾಾಲಕಿಯಾಗಿದ್ದು, ರೀಲ್ಸ್‌ಗಾಗಿ ಈ ರೀತಿ ವೀಡಿಯೋ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈಕೆಯ ಇನ್‌ಸ್ಚಾ ಖಾತೆ ತೆಗೆದು ನೋಡಿದಾಗ, ಒಂದೆರಡು ರೀಲ್ಸ್‌ನಲ್ಲಿ ಮಾತ್ರ ಈಕೆ ಈ ರೀತಿ ಹೊಟ್ಟೆ ಬರಿಸಿಕೊಂಡಂತೆ ವೀಡಿಯೋ ಮಾಡಿದ್ದು, ಉಳಿದ ಫೋಟೋ, ರೀಲ್ಸ್‌ನಲ್ಲಿ ನಾರ್ಮಲ್ ಆಗಿದ್ದಾಳೆ. ಹಾಗಾಗಿ ಇದು ಫೇಕ್ ವೀಡಯೋ, ಮಗು ನಾರ್ಮಲ್ ಆಗಿದ್ದು, ಗರ್ಭಿಣಿಯಲ್ಲ ಎಂದು ತಿಳಿದು ಬಂದಿದೆ.

ನಹಲ್ ಅಬ್ಬರಿನ್ ಎಂಬುದು ಈಕೆಯ ನಿಜವಾಾದ ಹೆಸರಾಗಿದ್ದು, ಈಕೆಗೆ 10 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಖಾತೆಯಲ್ಲಿ ಇನ್ನೂರಕ್ಕೂ ಹೆಚ್ಚು ವಿಷಯಗಳನ್ನು ಪೋಸ್ಟ್ ಮಾಡಲಾಗಿದೆ. ಇನ್ನು ಗರ್ಭಿಣಿಯರು ಯಾವ ರೀತಿ ತಮ್ಮ ಮಗು ಗಂಡೋ ಹೆಣ್ಣೋ ಎಂಬ ವಿಚಾರವನ್ನು ರಿವೀಲ್ ಮಾಡಿ, ಖುಷಿ ಪಡುತ್ತಾರೆ ಅನ್ನೋ ರೀತಿ ರೀಲ್ಸ್ ಮಾಡಲಾಗಿದೆ. 2024ರ ಜುಲೈ 20ರಂದು ಈ ವೀಡಿಯೋ ಮಾಡಿ, ಹರಿಬಿಡಲಾಗಿದ್ದು. ಆ ವೀಡಯೋ ಈಗ ಹೆಚ್ಚು ವೈರಲ್ ಆಗುತ್ತಿದೆ.  ಹೀಗೆ ವೈರಲ್ ಆಗಿರುವ ಕಾರಣಕ್ಕೆ ಈ ವೀಡಿಯೋ ಮಿಲಿಯನ್‌ಗಟ್ಟಲೇ ವೀವ್ಸ್ ಪಡೆದುಕೊಂಡಿದೆ.

ಈಕೆಯ ವೀಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ..

- Advertisement -

Latest Posts

Don't Miss