ಚಾಮರಾಜಪೇಟೆ ಕೇಸ್ ಮಾಸುವ ಮುನ್ನ ಮೈಸೂರಿನಲ್ಲಿ ಕರುವಿನ ಮೇಲೆ ದಾಳಿ ಮಾಡಿ ಬಾಲ ಕತ್ತರಿಸಿದ ಪಾಪಿಗಳು

Mysuru News: ಕೆಲ ದಿನಗಳ ಹಿಂದಷ್ಟೇ ಚಾಾಮರಾಾಜ ಪೇಟೆಯಲ್ಲಿ ಶಫಿ ಎಂಬ ಪಾಪಿ ಕುಡಿದ ನಶೆಯಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದ. ಈ ಘಟನೆ ಮಾಸುವ ಮುನ್ನವೇ, ಇನ್ನು ಕೆಲವು ಪಾಪಿಗಳು ಮೈಸೂರಿನಲ್ಲಿ ಕರುವೊಂದರ ಮೇಲೆ ದಾಳಿ ಮಾಡಿ, ಅದರ ಬಾಲ ಕತ್ತರಿಸಿ, ಪರಾರಿಯಾಗಿದ್ದಾರೆ.

ಮೈಸೂರಿನ ನಂಜನಗೂಡು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಹರಕೆಗಾಗಿ ಬಿಟ್ಟ ಕರುವಿನ ಬಾಲವನ್ನು ಮಾರಕಾಸ್ತ್ರಗಳಿಂದ ಕತ್ತರಿಸಲಾಗಿದೆ. ಈ ಕರುವನ್ನು ಭಕ್ತರು ನಂಂಜನಗೂಡಿನ ನಂಜುಂಡೇಶ್ವರನಿಗೆ ಹರಕೆಯಾಗಿ ಅರ್ಪಿಸಿದ್ದರು. ಇದೇ ರೀೀತಿ ಹಲವು ಹಸು, ಕರುಗಳನ್ನು ಇಲ್ಲಿ ದೇವರಿಗೆ ಅರ್ಪಿಸುವ ಪದ್ಧತಿ ಇದೆ. ಆದರೆ ಈ ಕರು ಬೆಳಿಗ್ಗೆ ರಸ್ತೆಯಲ್ಲಿ ಓಡಾಡುತ್ತಿದ್ದಾಗ, ಅಪರಿಚಿತರು ದಾಳಿ ಮಾಡಿ, ಪರಾರಿಯಾಗಿದ್ದಾರೆ.

ಬಳಿಕ ಕರುವನ್ನು ನೋಡಿರುವ ಸ್ಥಳೀಯರು , ಕರುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ದೇವಸ್ಥಾನದ ಬಳಿ ತಂದು ಬಿಟ್ಚಿದ್ದಾರೆ. ವಿಷಯ ತಿಳಿದ ದೇವಸ್ಥಾನದ ಆಡಳಿತ ಮಂಡಳಿಯವರು ಸ್ಥಳಕ್ಕೆ ಆಗಮಿಸಿ, ಗೋಶಾಲೆ ನಿರ್ಮಿಸುವುದಾಾಗಿ ಜನರಿಗೆ ಭರವಸೆ ನೀಡಿದೆ. ಈ ಮೊದಲು ಹರಕೆ ಕರುಗಳ ಮೇಲೆ ಶಿವಲಿಂಗದಮುದ್ರೆ ಹಾಕಲಾಗುತ್ತಿತ್ತು. ಆದರೆ ಈಗ ಹಾಗೆ ಮಾಡದ ಕಾರಣ, ದುರುಳರ ದುಷ್ಕ್ರೃತ್ಯ ಜೋರಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಇಂಥ ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

About The Author