Web News: ನಮ್ಮ ಸುತ್ತಮುತ್ತಲೇ ಹಲವರು ನಮಗೆ ಎಷ್ಟು ಹುಡುಕಿದರೂ ಕೆಲಸ ಸಿಗುತ್ತಿಲ್ಲವೆಂದು ಗೋಳಾಡುವುದನ್ನು, ಟೈಮ್ ವೇಸ್ಟ್ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಎಷ್ಟೋ ಜನ ಯಾರ ಕೈಕೆಳಗೂ ದುಡಿಯದೇ, ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಯಾಕಂದ್ರೆ ಅಂಥವರೆಲ್ಲ ಕೆಲಸ ಸಿಗುತ್ತಿಲ್ಲವೆಂದು ಕೈ ಕಟ್ಟಿ ಕುಳಿತವರಲ್ಲ. ಬದಲಾಗಿ ಉದ್ಯಮ ಮಾಡಲು ಆರಂಭಿಸಿದವರು. ಅಂಥವರಲ್ಲಿ ಒಬ್ಬರಾದ ಉತ್ತರಕರ್ನಾಟಕ ಮೂಲದ ಯೂಟ್ಯೂಬರ್ ಸಂದರ್ಶನವನ್ನು ಕರ್ನಾಟಕ ಟಿವಿಯಲ್ಲಿ ಮಾಡಲಾಗಿದೆ.
ಇವರು ಈ ಮೊದಲು 10 ಸಾವಿರ ಸಂಬಳಕ್ಕೆ ಕೆಲಸ ಮಾಡುತ್ತಿದ್ದವರು, ಆದರೆ ಯೂಟ್ಯೂಬ್ ಶುರು ಮಾಡಿ ಹತ್ತೇ ವರ್ಷದಲ್ಲಿ 4 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. ಹೀಗೆ ಸತತ ಪರಿಶ್ರಮದ ಫಲವಾಗಿ, ಪ್ರಸಿದ್ಧಿ ಪಡೆದಿರುವ ದತ್ತಾ ಬೇನೂರ್ ಎಂಬ ಯೂಟ್ಯೂಬರ್‌ರನ್ನು ಸಂದರ್ಶನ ಮಾಡಲಾಗಿದೆ.
ದತ್ತಾ ತಮ್ಮ ಯೂಟ್ಯೂಬ್ ಜರ್ನಿ ಬಗ್ಗೆ ಹೇಳಿಕೊಂಡಿದ್ದು, ಅವರ ಯೂಟ್ಯೂಬ್ ಜರ್ನಿ ಶುರುವಾಗಿದ್ದೆ ಪೇಪರ್ ಪ್ಲೇನಿಂದಲೇ. ಪೇಪರ್ ಪ್ಲೇನ್, ಪೇಪರ್ ರಾಕೇಟ್, ಪೇಪರ್ ಬೋಟ್ ನಿಂದ ಶುರುವಾಗಿ, ಪ್ರೊಫೆಷನಲ್ ಏರ್‌ಕ್ರಾಫ್ಟ್ ವರೆಗೂ ಬಂದಿದೆ ಎಂದು ತಮ್ಮ ಪಯಣವನ್ನು ನೆನೆಯುತ್ತಾರೆ ದತ್ತಾ. ಈ ಬಗ್ಗೆ ಮತ್ತಷ್ಟು ತಿಳಿಯಲು ಪೂರ್ತಿ ಸಂದರ್ಶನ ನೋಡಿ.