Friday, April 25, 2025

Latest Posts

ಸಿಎಂ ಸಿದ್ದರಾಮಯ್ಯ ಆ್ಯಂಡ್ ಅವರ ಮಗ ಯತೀಂದ್ರ ಎಕ್ಸ್ಟ್ರೀಮ್ ಲೆಫ್ಟಿಸ್ಟ್: ಶಾಸಕ ಬೆಲ್ಲದ್

- Advertisement -

Political News: ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಅವರಿಗೆ ಈ ದೇಶದ ಸಂಸ್ಕೃತಿ, ನಮ ಭಾಷೆ ನಮ್ಮತನ ಬಗ್ಗೆ ಗೊತ್ತಿಲ್ಲ. ಸಿದ್ದರಾಮಯ್ಯಯವರು ಹಾಗೂ ಅವರ ಪುತ್ರ ಯತೀಂದ್ರರವರು ಎಕ್ಸ್ಟ್ರೀಮ್ ಲೇಫ್ಟಿಸ್ಟರು ಎಂದು ಶಾಸಕ ಅರವಿಂದ ಬೆಲ್ಲದ ಕುಟುಕಿದರು.

ಹಿಂದೂ ಮೂಲಭೂತವಾದಿಗಳು ಉಗ್ರರು ಎಂದು ಡಾ.ಯತೀಂದ್ರ ನೀಡಿರುವ ಹೇಳಿಕೆ ವಿಚಾರವಾಗಿ ಧಾರವಾಡದಲ್ಲಿ ಪ್ರತಿಕ್ರೆಯಿಸಿದ ಬೆಲ್ಲದ, ಸಿದ್ದರಾಮಯ್ಯ ಹಾಗೂ ಯತೀಂದ್ರ ಅವರಿಗೆ ನಮ್ಮ ದೇಶದ ಭಾಷೆ ಗೊತ್ತಿಲ್ಲ. ಅವರಿಗೆ ನಮ್ಮತನ ಎನ್ನುವುದರ ಬಗ್ಗೆ ಗೌರವ ಇಲ್ಲ. ಉದಾಹರಣೆಗೆ ಸಿಎಂ ಸಿದ್ದರಾಮಯ್ಯ ಅವರನ್ನೇ ನೋಡಿ ಮೈಸೂರಿ ಮಹಾರಾಜರನ್ನು ಇಡೀ ಜಗತ್ತೇ ಗೌರವಿಸುತ್ತದೆ. ಆದರೆ, ಇವರು ಅವರ ಆಸ್ತಿ, ಮನೆ ಕಸಿದುಕೊಳ್ಳಲು ಬೆನ್ನು ಹತ್ತಿದ್ದಾರೆ. ತಾವು ಅಕ್ರಮವಾಗಿ ಕೋಟಿಗಟ್ಟಲೇ ಆಸ್ತಿ ಮಾಡಿದ್ದಾರೆ. ಆದರೆ, ರಾಜರ ಮನೆಯನ್ನು ಕಸಿದುಕೊಳ್ಳಲು ಹೊರಟಿದ್ದಾರೆ. ಇಷ್ಟೊಂದು ಕೆಟ್ಟ, ವಿಕೃತ ಸ್ವಭಾವ ಇವರಲ್ಲಿದೆ. ದೇವರು ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಬೆಲ್ಲದ ಹೇಳಿದರು..

- Advertisement -

Latest Posts

Don't Miss