Wednesday, February 5, 2025

Latest Posts

Sandalwood News: ಗಜರಾಮ ಸಿನಿಮಾ ಜರ್ನಿಯ ಬಗ್ಗೆ ನಟಿ ತಪಸ್ವಿನಿ ಮಾತು

- Advertisement -

Sandalwood News: ಇದೇ ತಿಂಗಳು 7ನೇ ತಾರೀಖಿನಂದು ಬಿಡುಗಡೆಯಾಗಲಿರುವ ಗಜರಾಮ ಸಿನಿಮಾ ತಂಡ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ಸಿನಿ ಜರ್ನಿ ಬಗ್ಗೆ ಅನುಭವ ಹೇಳಿಕೊಂಡಿದ್ದಾರೆ. ನಟಿ ತಪಸ್ವಿನಿ ಈ ಮೊದಲು ರಿಷಬ್ ಶೆಟ್ಟಿ ನಿರ್ದೇಶನದ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ರು. ಇದೀಗ ಗಜರಾಮ ಸಿನಿಮಾದಲ್ಲಿ ಮೋಡಿ ಮಾಡಲು ಬರುತ್ತಿದ್ದಾರೆ.

ಸಿನಿಮಾ ಬಗ್ಗೆ ಮಾತನಾಡಿರುವ ತಪಸ್ವಿನಿ, ಸಿನಿಮಾದಲ್ಲಿ ಎಲ್ಲರ ನಟನೆ, ಪಾತ್ರ ಅರ್ಥಪೂರ್ಣವಾಗಿ, ವಿಭಿನ್ನವಾಗಿ ಅತ್ಯುತ್ತಮವಾಗಿದೆ. ಮಂಡ್ಯದಲ್ಲಿ ಶೂಟಿಂಗ್ ನಡೆದಿದ್ದು, ತಪಸ್ವಿನಿ ಈ ಸಿನಿಮಾದಲ್ಲಿ ಮಂಡ್ಯ ಹುಡುಗಿಯ ಪಾತ್ರ ಮಾಡಿದ್ದಾರೆ. ಮಂಡ್ಯದಲ್ಲಿ ಶೂಟಿಂಗ್ ನಡೆಯುವಾಗ, ಅಲ್ಲಿನ ಹೆಣ್ಣು ಮಕ್ಕಳ ನಡೆ, ನುಡಿ, ಮಾತನಾಡುವ ಶೈಲಿ ಎಲ್ಲವನ್ನೂ ತಪಸ್ವಿನಿ ಫಾಲೋ ಮಾಡುತ್ತಿದ್ದರಂತೆ.

ಮೆಲೋಡಿ ಕಿಂಗ್ ಮನೋಮೂರ್ತಿಯವರು ಕೂಡ ಕರ್ನಾಟಕ ಟಿವಿಗೆ ಸಂದರ್ಶನ ನೀಡಿದ್ದು, ಸಿನಿಮಾ ಕಮರ್ಷಿಯಲ್ ಇದ್ದರು ಕೂಡ, ಸಿನಿಮಾ ಸಾಂಗ್ ಬೇರೆ ಬೇರೆ ಸಿಚುವೇಷನ್‌ಗೆ ತಕ್ಕ ಹಾಗಿದೆ ಎಂದು ಮನೋಮೂರ್ತಿ ಹೇಳಿದ್ದಾರೆ. ಸಂದರ್ಶನ ಪೂರ್ತಿಯಾಗಿ ನೋಡಲು ಈ ವೀಡಿಯೋ ನೋಡಿ.

- Advertisement -

Latest Posts

Don't Miss