Tuesday, February 4, 2025

Latest Posts

Sandalwood News: ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ನಟಿ ಶ್ರೀನಿಧಿ ಶೆಟ್ಟಿ, ಸಾನ್ಯಾ ಅಯ್ಯರ್‌

- Advertisement -

Sandalwood News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಇದು 144 ವರ್ಷಕ್ಕೆ ಒಮ್ಮೆ ಬರುವ ಕುಂಭ ಮೇಳವಾಗಿದೆ. ಹಾಗಾಗಿ ಹಲವರು ಈ ಕುಂಭ ಮೇಳದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಮಿಂದು ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಬಯಸಿದ್ದಾರೆ.

ಹಾಗಾಗಿ ಪ್ರಯಾಗ್‌ರಾಜ್‌ಗೆ ತೆರಳಿ, ಕುಂಭ ಮೇಳದಲ್ಲಿ ಭಾಗಿಯಾಗುತ್ತಾರೆ. ಇದಕ್ಕೆ ಸೆಲೆಬ್ರಿಟಿಗಳು, ಉದ್ಯಮಿಗಳೇನು ಹೊರತಲ್ಲ. ಕೆಲ ದಿನಗಳ ಹಿಂದಷ್ಟೇ ರಾಜಕಾರಣಿಗಳಾದ ಅಮಿತ್ ಶಾ, ಕರ್ನಾಟದ ಕಾಂಗ್ರೆಸ್ ನಾಯಕ ಯು.ಟಿ.ಖಾದರ್, ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಾದ ರಾಜ್. ಬಿ.ಶೆಟ್ಟಿ, ಡೈರೆಕ್ಟರ್ ಕಿರಣ್ ರಾಾಜ್, ನಿರೂಪಕಿ ಅನುಶ್ರೀ ಇವರೆಲ್ಲ ಹೋಗಿ, ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ.

ಇದೀಗ ಕೆಜಿಎಫ್ 2 ಕ್ವೀನ್ ಶ್ರೀನಿಧಿ ಶೆಟ್ಟಿ ಕೂಡ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಮಾಸ್ಕ್ ಧರಿಸಿ ಕುಂಭ ಮೇಳದಲ್ಲಿ ಭಾಗಿಯಾಗಿ, ಗಂಗಾಸ್ನಾನ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿರುವ ಶ್ರೀನಿಧಿ, ನಾನು ಮೌನಿ ಅಮಾವಾಸ್ಯೆಯ ದಿನ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿ, ಕುಂಭ ಮೇಳದಲ್ಲಿ ಭಾಗವಹಿಸುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಬದುಕು ಅಚ್ಚರಿಯ ಸಂತೆ. ಈ ದೈವಿಕ ಅನುಗ್ರಹ, ಆಶೀರ್ವಾಾದದಿಂದ ನನ್ನ ಹೃದಯ ತುಂಬಿ ಬಂದಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನೊಂದೆಡೆ ದೇವರಲ್ಲಿ ಅಪಾರ ಭಕ್ತಿ ಹೊಂದಿರುವ ನಟಿ ಸಾನ್ಯಾ ಅಯ್ಯರ್ ಕೂಡ ಕುಂಭಮೇಳದಲ್ಲಿ ಭಾಗಿಯಾಗಿದ್ದು, ನಾಗಾ ಸಾಧುಗಳ ಆಶೀರ್ವಾದ ಪಡೆದಿದ್ದಾರೆ. ಸಾನ್ಯಾ ಅಯ್ಯರ್ ಬೇರೆ ಬೇರೆ ದೇಶ, ಬೇರೆ ಬೇರೆ ದೇವಸ್ಥಾನಗಳಿಗೆ ಕುಟುಂಬಸ್ಥರೊಂದಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಸಾನ್ಯಾ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.

- Advertisement -

Latest Posts

Don't Miss