Friday, February 7, 2025

Latest Posts

ಬರೀ ಯೂಟ್ಯೂಬರ್ ಅಷ್ಟೇ ಅಲ್ಲ, ಟೆರೆಸ್ ಗಾರ್ಡೆನಿಂಗ್ ಕೂಡ ಮಾಡ್ತಾರೆ ದತ್ತಾ ಬೇನೂರ್

- Advertisement -

Web News: ಪ್ರಸಿದ್ಧ ಯೂಟ್ಯೂಬರ್ ದತ್ತಾ ಬೇನೂರ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಯೂಟ್ಯೂಬ್ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ.

ದತ್ತಾ ಅವರು ತಮ್ಮ ಮನೆಯಲ್ಲಿ ಟೆರೆಸ್ ಗಾರ್ಡೆನಿಂಗ್ ಮಾಡಿದ್ದು, ಆರೋಗ್ಯಕರವಾದ ಜೀವನ ನಡೆಸುತ್ತಿದ್ದಾರೆ. ಇವರು ಪೇರಲೆ ಗಿಡ, ಸ್ಟಾರ್ ಫ್ರೂಟ್ಸ್ ಸೇರಿ ಹಲವು ಹಣ್ಣುಗಳನ್ನು ಮನೆಯಲ್ಲೇ ಬೆಳೆಯುತ್ತಾರೆ. ದತ್ತಾ ಹೇಳುವುದೇನೆಂದರೆ, ಎಲ್ಲೆಡೆ ಆರ್ಗ್ಯಾನಿಕ್ ಎನ್ನುವ ಹೆಸರಿಟ್ಟುಕೊಂಡು ಹಣ್ಣು, ತರಕಾರಿ ಮಾರಾಟ ಮಾಡುತ್ತಾರೆ. ಆದರೆ ಎಲ್ಲವೂ ಆರ್ಗ್ಯಾನಿಕ್ ಆಗಿರುವುದಿಲ್ಲ.

ಹಣ್ಣುಗಳಿಗೆ ಕೆಮಿಕಲ್ ಹಾಕಿರುತ್ತಾರೆ ತೊಳೆದು ತಿನ್ನಬೇಕು ಅಂತಾ ಹೇಳುತ್ತಾರೆ. ಆದರೆ ಕೆಮಿಕಲ್ ಹಣ್ಣುಗಳ ಮೇಲಿರುವುದಿಲ್ಲ. ಬದಲಾಗಿ ಹಣ್ಣುಗಳ ಒಳಗೆ ಹೋಗಿರುತ್ತದೆ. ಹಾಗಾಗಿ ಹಣ್ಣುಗಳನ್ನು ಬೆಳೆದು ಸವಿಯಿರಿ ಎಂದು ದತ್ತಾ ಸಲಹೆ ನೀಡಿದ್ದಾರೆ. ಅಲ್ಲದೇ ಇವರ ಮನೆಯಲ್ಲಿರುವ ಹಣ್ಣುಗಳನ್ನು ಇವರು ಮಾರಾಟ ಮಾಡುವುದಿಲ್ಲ. ಬದಲಾಗಿ, ಮನೆಯ ಬಳಕೆಗೆ ಬೆಳೆದಿದ್ದಾಗಿದೆ.

ದತ್ತಾ ಅವರ ಮನೆಯಲ್ಲಿರುವ ಸ್ಟಾರ್ ಫ್ರೂಟ್ ಗಿಡದಲ್ಲಿ 25 ಕೆಜಿ ಸ್ಟಾರ್ ಫ್ರೂಟ್ ಬೆಳೆದಿತ್ತೆಂದು ಖುದ್ದು ಅವರೇ ವಿವರಿಸಿದ್ದಾರೆ. ದತ್ತಾ ಅವರು ಯಾವ ರೀತಿ ಹೋಮ್ ಗಾರ್ಡೆನಿಂಗ್ ಮಾಡುತ್ತಾರೆ..? ಯಾವ ಯಾವ ಹಣ್ಣುಗಳನ್ನು ಬೆಳೆದಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ.

- Advertisement -

Latest Posts

Don't Miss