Kerala News: ಕೇರಳದ ಕೊಚ್ಚಿಯ ತ್ರಿಪುಣಿತರಾದಲ್ಲಿ ಜನವರಿ 15 ರಂದು ಮಿಹಿರ್ ಎಂಬ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ.. ಈ ಪ್ರಕರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮಲಯಾಳಂ ಸ್ಟಾರ್ ನಟರು ಸೇರಿದಂತೆ ಗಣ್ಯರು, ಜನಸಾಮಾನ್ಯರು ಮೃತ ಬಾಲಕನ ಪರ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಮಿಹಿರ್ ಶಾಲೆಯಿಂದ ಮರಳಿದ ಕೇವಲ ಒಂದು ಗಂಟೆಯಲ್ಲೇ ತಾನು ವಾಸವಿದ್ದ ಅಪಾರ್ಟ್ ಮೆಂಟ್ ನ 26ನೇ ಮಹಡಿಯಿಂದ ಜಿಗಿದು ಮಿಹಿರ್ ಅಹ್ಮದ್ ಆತ್ಮಹತ್ಯೆ ಮಾಡಿಕೊಂಡಿದ್ದ.
ಮಗನ ದಾರುಣ ಸಾವಿನಿಂದ ತಾಯಿ ಹಾಗೂ ಕುಟುಂಬಸ್ಥರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ತನ್ನ ಮಗನ ಸಾವಿನ ನಂತರ, ಮಿಹಿರ್ ಏಕೆ ಆ ಕಠಿಣ ಹೆಜ್ಜೆಯನ್ನು ತೆಗೆದುಕೊಂಡಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪೋಷಕರು ಮುಂದಾದಾಗಾ ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ. ಮಹಿರ್ ಅಹ್ಮದ್ ತಂದೆ ತಾಯಿ ಮಗನ ಸ್ನೇಹಿತರು ಹಾಗೂ ಸಹಪಾಠಿಗಳ ಸಾಮಾಜಿಕ ಮಾಧ್ಯಮ ಸಂದೇಶಗಳನ್ನ ಹಾಗೂ ಮಹಿರ್ ನ ಸೋಷಿಯಲ್ ಮೀಡಿಯಾ ಚಾಟ್ ಪರಿಶೀಲನೆ ಮಾಡಿದ್ದಾರೆ. ಆ ವೇಳೆ ಮಹಿರ್ ನ ಕೆಲವು ಸಹಪಾಠಿಗಳು ಅವಾಚ್ಯವಾಗಿ ನಿಂದಿಸಿರೋದು ಬಯಲಾಗಿದೆ. ಅವನ ಕೊನೆಯ ದಿನವೂ ಹೇಳಲಾಗದ ಅವಮಾನವನ್ನು ಎದುರಿಸಿದ್ದ. ಅವನನ್ನು ಬಲವಂತವಾಗಿ ವಾಶ್ ರೂಂಗೆ ಕರೆದೊಯ್ದು, ಟಾಯ್ಲೆಟ್ ಸೀಟನ್ನು ನೆಕ್ಕುವಂತೆ ಮಾಡಿದ್ದರು. ಟಾಯ್ಲೆಟ್ ಫ್ಲಶ್ ಮಾಡುವಾಗ ತಲೆಯನ್ನು ಟಾಯ್ಲೆಟ್ ಕಮೋಡ್ ಒಳಕ್ಕೆ ತಳ್ಳಲಾಗಿತ್ತು ಅನ್ನೋದು ಮಹಿರ್ ನ ಕೆಲವು ಸಹಪಾಠಿಗಳ ಪೋಸ್ಟ್ ಹಾಗೂ ಸಂದೇಶದಿಂದ ಬಯಲಾಗಿದೆ.
ಈ ಕ್ರೌರ್ಯದ ಕೃತ್ಯಗಳು ಮಹಿರ್ ನನ್ನ ಸಾಕಷ್ಟು ಕುಗ್ಗಿಸಿತ್ತು. ಈ ಎಲ್ಲಾ ಕಾರಣದಿಂದ ಅವನು ಈ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಮಹಿರ್ ನ ತಾಯಿ ತಿಳಿಸಿದ್ದಾರೆ. ಅಲ್ಲದೆ ತನ್ನ ಮಗನ ಸಾವಿನ ಬಳಿಕವೂ ಆತನ ಇನ್ಸಾಗ್ರಾಮ್ ಖಾತೆಗೆ ಆಶ್ಲೀಲ ಮೆಸೇಜ್ ಕಳುಹಿಸಿ ಕೆಲವರು ಸಾವನ್ನು ಸಂಭ್ರಮಿಸಿದ್ದಾರೆ. ಅವನು ಶಾಲೆಯಲ್ಲಿ ಮತ್ತು ಶಾಲಾ ಬಸ್‌ನಲ್ಲಿನ ವಿದ್ಯಾರ್ಥಿಗಳ ಗುಂಪಿನಿಂದ ಕ್ರೂರವಾಗಿ ರ್ಯಾಗಿಂಗ್, ಬೆದರಿಸುವಿಕೆ ಮತ್ತು ದೈಹಿಕ ಹಲ್ಲೆಗೆ ಒಳಗಾಗಿದ್ದ ಎಂದು ಮಿಹಿರ್ ಪೋಷಕರು ಆರೋಪಿಸಿದ್ದಾರೆ. ಇದೀಷ್ಟೆ ಅಲ್ಲ ಶಾಲೆಯ ಉಪ ಪ್ರಾಂಶುಪಾಲರು ಸಹ ಮಿಹಿರ್‌ಗೆ ಕಿರುಕುಳ ನೀಡಿರುವ ಚಾಟ್ ನೋಡಿ ಂತ್ತಷ್ಟು ಆಘಾತಕ್ಕೆ ಒಳಗಾಗಿದ್ದಾರೆ. ಮಿಹಿರ್ ಕೇಔಲ ಸಹಪಾಠಿಯಷ್ಟೇ ಅಲ್ಲ. ಶಾಲೆಯ ಉಪ ಪ್ರಾಂಶುಪಾಲರು ಸಹ ಕಿರುಕುಳ ನೀಡಿರುವ ಚಾಟಿಂಗ್‌ನ ಸ್ಕಿನ್ ಶಾಟ್ ಹಂಚಿಕೊಂಡಿದ್ದಾರೆ.
ಮಿಹಿರ್ ಆತ್ಮಹತ್ಯೆ ಸುದ್ದಿಯು ಎಲ್ಲೆಡೆ ವ್ಯಾಪಕವಾಗಿ ಹಬ್ಬಿದೆ.. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಈ ಘಟನೆಯ ಸಂಬಂಧ ನಾನಾ ರೀತಿಯ ಚರ್ಚೆಗಳು ನಡೆದಿದ್ದವು. ಇದೀಗ ಪುತ್ರ ಮಿಹಿರ್ ಸಾವಿಗೆ ನ್ಯಾಯಬೇಕೆಂದು ತಾಯಿ ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಕೇರಳಾ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಘಟನೆ ಹಿಂದಿನ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. ತನ್ನ ಮಗನ ಸಾವಿಗೆ ಕಾರಣವೇನು ಎನ್ನುವುದನ್ನು ತಾಯಿ ರಜ್ಞಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡು ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇನ್ನೂ ಈ ಕುರಿತು ಮೃತ ಮಿಹಿರ್‌ನ ತಾಯಿ ನ್ಯಾಯಕ್ಕಾಗಿ ಪೋಸ್ಟ್ ಮಾಡಿದ ಮರುಕ್ಷಣದಿಂದಲೇ ಕೇರಳಾದಾದ್ಯಂತ ಸಾಕಷ್ಟು ಆಕ್ರೋಶ ವ್ಯಕ್ತವಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ#JusticeforMihir ಎನ್ನುವ ಕ್ಯಾಂಪೇನ್ ಶುರುವಾಗಿದೆ. ಖ್ಯಾತ ಸೆಲೆಬ್ರಿಟಿಗಳಾದ ಸಮಂತಾ, ಕೀರ್ತಿ ಸುರೇಶ್, ನಟ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ನೂರಾರು ಮಂದಿ ಮಿಹಿರ್ ಸಾವಿಗೆ ನ್ಯಾಯಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ..
ಈ ಘಟನೆಯಿಂದ ರ್ಯಾಗಿಂಗ್ ಕೇವಲ ಕಾಲೇಜು ಮಟ್ಟದಲ್ಲಿ ಮಾತ್ರವನ್ನ ಶಾಲೆಗಳ ಅಂಗಳಕ್ಕೂ ಕಾಲಿಟ್ಟಿದೆ ಅನ್ನೋದು ಬಯಲಾಗಿದೆ. ಈ ಹಿನ್ನೆಲೆ ಶಾಲೆಗಳು ಸಹ ಈ ಕುರಿತು ಎಚ್ಚೆತ್ತುಕೊಂಡು ರ್ಯಾಗಿಂಗ್ ತಡೆಗಟ್ಟಲು ಕಟ್ಟನಿಟ್ಟಿನ ಕ್ರಮವಹಿಸಬೇಕಿದೆ. ಈ ಘಟನೆಯಲ್ಲಿ ಮತ್ತೊಂದು ನಾಚಿಕೆಗೇಡಿನ ಸಂಗತಿ ಅಂದ್ರೆ ಉಪಪ್ರಾಂಶುಪಾಲನೂ ಸಹ ಮಹಿರ್ ಸಾವಿಗೆ ಕಾರಣವಾಗಿರೋದು ನೋಡಿದ್ರೆ, ಇತ್ತೀಚಿನ ದಿನಗಳಲ್ಲಿ ಕೆಲ ಶಿಕ್ಷಕರು ಸಹ ಸಣ್ಣತನ ತೋರುತಿರೋದು ದುರಂತವೇ ಸರಿ.. ಏನೇ ಆಗಲಿ ಪೋಷಕರು ಶಾಲಾ ದಿನಗಳಿಂದಲೂ ಮಕ್ಕಳ ಚಲನವಲನದ ಮೇಲೆ ನಿತ್ಯವೂ ಗಮನವಿಟ್ಟು ಕಾಳಜಿ ವಹಿಸೋದು ಸೂಕ್ತ..