Sandalwood News: ಸ್ಯಾಂಡಲ್‌್ವುಡ್ ನಟ ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ಹೊರಬಂದ ಬಳಿಕ, ಮೊದಲ ಬಾರಿ ವೀಡಿಯೋ ಮಾಡಿ, ಸಾಕಷ್ಟು ಮಾತನಾಡಿದ್ದಾರೆ.
ಎಲ್ಲಾ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ನಮಸ್ಕಾರ ಹೇಳಲಾ ಇಲ್ಲಾ ಥ್ಯಾಂಕ್ಸ್ ಹೇಳಲಾ,..? ಏನೇ ಪದ ಬಳಸಿದರೂ ಅದು ಕಡಿಮೆಯೇ. ಯಾಕಂದ್ರೆ ನೀವು ತೋರಿಸಿುವ ಪ್ರೀತಿ ಅಂಥದ್ದು. ಈ ವೀಡಿಯೋ ಮಾಡಲು ಕಾರಣ ಏನಂದ್ರೆ, ಅದು ನನ್ನ ಹುಟ್ಟುಹಬ್ಬ. ನೀವುಗಳು ತುಂಬಾ ಪ್ರೀತಿಯಿಂದ ಆಚರಿಸುತ್ತೀರಿ. ಪ್ರತೀ ಸಲವೂ ನಾನು ಅದೇ ಖುಷಿಯಿಂದ ನಿಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸುತ್ತಿದ್ದೆ. ಆದರೆ ಈ ಬಾರಿ ನನ್ನ ಆರೋಗ್ಯ ಸಮಸ್ಯೆ ಇರುವ ಕಾರಣಕ್ಕೆ, ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲವೆಂದು ದರ್ಶನ್ ಹೇಳಿದ್ದಾರೆ.
ಯಾಕಂದ್ರೆ ತುಂಂಬ ಹೊತ್ತು ನಿಲ್ಲಲು ಸಾಧ್ಯವಿಲ್ಲ. ಇಂಜೆಕ್ಷನ್ ತೆಗೆದುಕೊಂಡ 15ರಿಂದ 20 ದಿನ ಆರಾಮವಾಗಿ ಇರುತ್ತೇನೆ. ಅದರ ಪವರ್ ಕಡಿಮೆಯಾಗುತ್ತಿದ್ದಂತೆ, ನನ್ನ ಪವರ್ ಕಡಿಮೆಯಾಗುತ್ತದೆ. ಹಾಗಾಗಿ ತುಂಬಾ ಹೊತ್ತು ನಿಂತು ಮಾತನಾಡಲು ಅಸಾಧ್ಯವಾಗುತ್ತದೆ. ಹಾಗಾಗಿ ಎಲ್ಲಾ ನನ್ನ ಪ್ರೀತಿಯ ಸೆಲೆಬ್ರಿಟಿಗಳು ಇದು ಒಂದು ಸರಿ ನನ್ನನ್ನು ಕ್ಷಮಿಸಿ ಎಂದು ದರ್ಶನ್ ಹೇಳಿದ್ದಾರೆ. ದರ್ಶನ್ ಇನ್ನೂ ಏನೇನು ಮಾತನಾಡಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ.