Life Lesson: ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ಇರುತ್ತದೆ. ಕೆಲವರು ಸಮಸ್ಯೆಗಳನ್ನು ಎದುರಿಸಿ, ಜೀವನದಲ್ಲಿ ಮುಂದೆ ಬರುತ್ತಾರೆ. ಇನ್ನು ಕೆಲವರು ಸಮಸ್ಯೆ ಎದುರಿಸಲು ಸಾಧ್ಯವಾಗದೇ, ಜೀವ ಬಲಿ ಕೊಡುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಕಂಡು ಬರುವವರು ಸಮಸ್ಯೆಗೆ ಪರಿಹಾರ ಹುಡುಕದೇ, ಅದನ್ನೇ ಯೋಚಿಸುತ್ತ ಕೂರುವವರು. ಹಾಗಾಗಿ ನಾವಿಂದು ನಕಾಾರಾತ್ಮಕ ಯೋಚನೆಯನ್ನು ಹೇಗೆ ದೂರ ಮಾಡಿ, ನೆಮ್ಮದಿಯಾಗಿ ಬದುಕಬೇಕು ಅಂತಾ ತಿಳಿಯೋಣ ಬನ್ನಿ.
ಯಾವುದೇ ಮನುಷ್ಯನಾಗಲಿ ನಕಾರಾತ್ಮಕ ಯೋಚನೆಯನ್ನು ಅಥವಾ ಚಿಂತೆಯನ್ನು ಹಿಡಿದಿಟ್ಟುಕೊಂಡಲ್ಲಿ, ಮಾನಸಿಕ ಹಿಂಸೆ ಅನುಭವಿಸುತ್ತಿದ್ದಲ್ಲಿ, ಅದು ಅವರ ಆರೋಗ್ಯದ ಬೇರೆ ದುಷ್ಪರಿಣಾಮ ಬೀರುತ್ತದೆ. ಏಕೆಂದರೆ, ಅದನ್ನೇ ಯೋಚನೆ ಮಾಡಿ ಮಾಡಿ, ನಮ್ಮ ಮೆದುಳಿನ ಶಕ್ತಿ ಕಡಿಮೆಯಾಗುತ್ತದೆ. ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ನಿಮ್ಮ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳ ಬಳಿ ನಿಮ್ಮ ಮನಸ್ಸಿನಲ್ಲಿರುವ ನೋವನ್ನು ಹೇಳಿಕೊಳ್ಳಿ. ಆಗ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಸಮಸ್ಯೆಯನ್ನು ಹಿಡಿದಿಟ್ಟುಕೊಳ್ಳುವವರಿಗೆ ಹೆಚ್ಚಿನದಾಗಿ ಬಿಪಿ ಸಮಸ್ಯೆ ಕಾಣುತ್ತದೆ. ಬಿಪಿ ಬರುವುದರಿಂದ ಶ್ವಾಸಕೋಶದ ಸಮಸ್ಯೆ, ಹೃದಯದ ಸಮಸ್ಯೆ ಇತ್ಯಾದಿ ಹುಟ್ಟಿಕೊಳ್ಳುತ್ತದೆ. ಹಾಗಾಗಿ ನೀವು ಆರೋಗ್ಯವಾಗಿರಬೇಕು ಅಂದ್ರೆ, ಜೀವನವನ್ನು ಹೆಚ್ಚು ಸಿರಿಯಸ್ ಆಗಿ ತೆಗೆದುಕೊಳ್ಳಬೇಡಿ. ನೆಮ್ಮದಿಯಾಗಿ ಕಣ್ತುಂಬ ನಿದ್ದೆ ಮಾಡಿ. ಹಾಾಸ್ಯ ಕಾಾರ್ಯಕ್ರಮಗಳನ್ನು, ಯೋಗ ಕ್ಲಾಸ್ ಅಟೆಂಡ್ ಮಾಡಿ, ಧ್ಯಾನ ಮಾಡಿ.
ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಾಡುವವರನ್ನು ನಿರ್ಲಕ್ಷಿಸಿ. ಸಾಧ್ಯವಾದರೆ, ಅವರಿಂದ ದೂರವಾಗಿ. ಇಲ್ಲವಾದಲ್ಲಿ, ಕೊಚ್ಚೆಗೆ ಕಲ್ಲು ಹಾಕಿದರೆ, ಅದು ನಮಗೆ ಸಿಡಿಯುತ್ತದೆ ಎಂದು ತಿಳಿದು ಅಂಥವರ ಮಾತನ್ನು ನಿರ್ಲಕ್ಷಿಸಿ. ಮಾತನಾಡುವುದನ್ನು ಕಡಿಮೆ ಮಾಡಿ. ಮಾತು ಮಿತವಾದಷ್ಟು, ಮಾನಸಿಕ ನೆಮ್ಮದಿ ಚೆನ್ನಾಗಿ ಆಗುತ್ತದೆ.