Dharwad News: ಕುಡಿದು ಬಂದ ವ್ಯಕ್ತಿ ಪತ್ನಿ ಹಾಗೂ ಪತ್ನಿಯ ತಾಯಿಯ ಮೇಲೆ ಚಾಕುವಿನಿಂದ ಇರಿದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ ಧಾರವಾಡ ಬನಶ್ರೀ ನಗರದ ನಿವಾಸಿ ಬಸವರಾಜ ಅವ್ವನ್ನವರ ಪತ್ನಿ ರೂಪಾ ಹಾಗೂ ಪತ್ನಿಯ ತಾಯಿ ಯಲ್ಲವ್ವ ಮೇಲೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆಮಾಡಿದ್ದಾನೆ..
ಸದ್ಯ ಗಂಭೀರವಾಗಿ ಗಾಯಗೊಂಡ ರೂಪಾ ಹಾಗೂ ಯಲ್ಲವ್ವ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲು ತಂದಿದ್ದರು ಸದ್ಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿಕ್ಕೊಳ್ಳದ ಜಿಲ್ಲಾಆಸ್ಪತ್ರೆ ವೈದ್ಯರು ಬಳಿಕ ದಿಕ್ಕು ತೋಚದೆ ಇರೋ ಕುಟುಂಬದವರು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹೋದಾಗ ಅಲ್ಲಿಯೂ ಕೂಡಾ ಇಬ್ಬರನ್ನ ದಾಖಲಿಸಿಕ್ಕೊಳ್ಳದೆ ಇರೋ ಕಾರಣಕ್ಕೆ ಸದ್ಯ ಇಬ್ಬರನ್ನ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ.
ಯಲ್ಲವ್ವ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಧಾರವಾಡ ಗರಗ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಬಸವರಾಜನನ್ನ ಪೋಲಿಸರು ವಶಕ್ಕೆ ಪಡೆದುಕ್ಕೊಂಡಿದ್ದಾರೆ..




