Sandalwood News: ಈ ಮೊದಲು ರಿಲೀಸ್ ಆಗಿದ್ದ ಕನ್ನಡ ಸಿನಿಮಾ ಸಿದ್ಲಿಂಗು ಸಖತ್ ಹಿಟ್ ಆಗಿತ್ತು. ಲೂಸ್ ಮಾದ ಯೋಗಿ ಮತ್ತು ರಮ್ಯಾ ನಟನೆ ಎಲ್ಲರ ಗಮನ ಸೆಳೆದಿತ್ತು. ಜೊತೆ ಈ ಸಿನಿಮಾದ ಹಾಡು ಕೂಡ ಕೇಳುಗರ ಮನಸ್ಸಿಗೆ ಮುದ ಕೊಟ್ಟಿತ್ತು. ಇದೀಗ ಸಿದ್ಲಿಂಗು ಪಾರ್ಟ್ 2 ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು, ಯೋಗಿ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಬರುತ್ತಿದ್ದಾರೆ. ಯೋಗಿಗೆ ಜೋಡಿಯಾಗಿ ಸೋನು ಗೌಡ ನಟಿಸಿದ್ದು, ಕರ್ನಾಟಕ ಟಿವಿ ಜೊತೆ ಈ ಇಬ್ಬರೂ ತಾರೆಯರು ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾ ಬಗ್ಗೆ ಮಾತನಾಡಿರುವ ನಟ ಯೋಗಿ, ಈ ಸಿನಿಮಾ ಮಾಡಬೇಕು ಅಂತಾ ಕೆಲ ವರ್ಷಗಳ ಹಿಂದೆಯೇ ನಿರ್ಧರಿಸಲಾಗಿತ್ತು. ಟ್ರೈಲರ್ ಕೂಡ ಬಿಟ್ಟಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಆದರೆ ಇದು ಸರಿಯಾದ ಸಮಯ ಶೂಟಿಂಗ್ ಪೂರ್ಣಗೊಳಿಸಬೇಕು ಎಂದು ಡೈರೆಕ್ಟರ್ ಕಾಲ್ ಮಾಡಿ, ಯೋಗಿ ರೆಡಿ ಇದ್ದೀರಾ ಎಂದು ಕೇಳಿದಾಗ, ನಾನು ಕಾರಣ ಕೇಳಿದೆ. ಅದಕ್ಕೆ ಅವರು ಸಿದ್ಲಿಂಗು ಪಾರ್ಟ್ 2 ರೆಡಿಯಾಗಿದೆ. ಶೂಟಿಂಗ್ ಶುರು ಮಾಡೋಣವೆಂದು. ಸ್ನೇಹಿತರೊಂದಿಗೆ ಕಲಸ ಮಾಡುವ ಮಜವೇ ಬೇರೆ. ಖುಷಿಯಾಗಿದೆ ಎಂದು ಲೂಸ್ ಮಾದ ಯೋಗಿ ಹೇಳಿದ್ದಾರೆ.
ಇನ್ನು ನಟಿ ಸೋನು ಕೂಡ ಸಿನಿಮಾ ಬಗ್ಗೆ ಮಾತನಾಡಿದ್ದು, ಮೊದಲು ಈ ಸಿನಿಮಾದಲ್ಲಿ ನಟಿಸಲು ಅವಕಾಶ ಬಂದಾಗ, ಯಾವ ಪಾತ್ರ ಅಂತಾ ಗೊತ್ತಿಲ್ಲದಿದ್ದರೂ ನಾನು ಒಪ್ಪಿಕೊಂಡಿದ್ದೆ. ಮತ್ತು ನಟಿಯಾಗಿ ರಮ್ಯಾ ಮೇಡಂ ನಟಿಸುತ್ತಿರಬಹುದು. ನನಗೆ ಯಾವುದಾದರೂ ಸೈಡ್ ರೋಲ್ ಇರಬಹುದು ಅಂದುಕೊಂಡಿದ್ದೆ. ಆದ್ರೆ ನಾನೇ ನಟಿ ಅಂತಾ ಗೊತ್ತಾದಾಗ ನನಗೆ ಆಶ್ಚರ್ಯವಾಯ್ತು ಅಂತಾ ಹೇಳಿದ್ದಾರೆ. ಸಂದರ್ಶನ ಪೂರ್ತಿ ನೋಡಲು ವೀಡಿಯೋ ಕ್ಲಿಕ್ಕಿಸಿ.