Health Tips: ಕ್ರಿಸ್ಟೋಫರ್ ಕೊಲಂಬಸ್ ಪಪ್ಪಾಯಿ ಹಣ್ಣನ್ನು ಹಣ್ಣುಗಳ ರಾಣಿ ಅಂತಲೇ ಹೇಳುತ್ತಿದ್ದನಂತೆ. ಏಕೆಂದರೆ, ಪಪ್ಪಾಯಿ ಹಣ್ಣಿನಲ್ಲಿ ಅಷ್ಟು ಆರೋಗ್ಯಕರ ಗುಣಗಳಿದೆ. ಹಾಗಾದ್ರೆ ಪಪ್ಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.
ಪಪ್ಪಾಯಿಯಲ್ಲಿ ಪೆಪಿನ್ ಹೆಸರಿನ ಅಂಶವಿರುವುದರಿಂದ ಪಪ್ಪಾಯಿ ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂಡಿ ಸೇವನೆಗೂ ಮುನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಪೆಪಿನ್ ಎಂಬ ಅಂಶ ನಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ಸಹಕಾರಿಯಾಗಿದೆ. ಹಾಗಾಗಿ ನಿಮ್ಮ ಜೀರ್ಣಶಕ್ತಿ ಉತ್ತಮವಾಗಿರಬೇಕು ಅಂದ್ರೆ, ನೀವು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣಿನ ಸೇವನೆ ಮಾಡಬೇಕು.
ಪಪ್ಪಾಯಿಯಲ್ಲಿ ವಿಟಾಮಿನ್ ಸಿ ಇರುವ ಕಾರಣ, ಇದರ ಸೇವನೆಯಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪದೇ ಪದೇ ಜ್ವರ ಬರುವುದು, ನೆಗಡಿ, ಕೆಮ್ಮು ಬರುವ ಸಮಸ್ಯೆ ಇದ್ದಲ್ಲಿ ಅಂಥವರು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣಿನ ಸೇವನೆ ಮಾಡಿ.
ನಿಮ್ಮ ಸ್ಕಿನ್ ಚೆನ್ನಾಗಿರಬೇಕು, ಕೂದಲ ಬೆಳವಣಿಗೆ ಚೆನ್ನಾಗಿರಬೇಕು. ಮುಟ್ಟಿನ ಸಮಸ್ಯೆ ಬರಬಾರದು, ತಿಂಗಳಿಗೆ ಸರಿಯಾಗಿ ಮುಟ್ಟಾಗಬೇಕು. ದೇಹದಲ್ಲಿ ತೂಕ ಹೆಚ್ಚಬಾರದು ಅಂದ್ರೆ ನೀವು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣಿನ ಸೇವನೆ ಮಾಡಲು ಆರಂಭಿಸಿ. ಒಂದು ಬೌಲ್ ಪಪ್ಪಾಯಿ ತಿಂದರೂ ಸಾಕು. ನಿಮ್ಮ ಈ ಎಲ್ಲ ಆರೋಗ್ಯ ಮತ್ತು ಸೌಂದರ್ಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಇನ್ನು ಗರ್ಭ ಧರಿಸಿದ ಬಳಿಕ ಪಪ್ಪಾಯಿ ಹಣ್ಣನ್ನು ತಿನ್ನಬಾರದು ಅಂತಾ ಹೇಳಲಾಗುತ್ತದೆ. ಗರ್ಭ ಧರಿಸೋಕ್ಕೂ ಮುನ್ನ ಪಪ್ಪಾಯಿ ಹಣ್ಣಿನ ಸೇವನೆ ಮಾಡಿದ್ರೆ, ಇದರಲ್ಲಿರುವ ಆರೋಗ್ಯಕಾರಿ ಅಂಶಗಳು, ಗರ್ಭ ಧರಿಸಲು ಸಹಕಾರಿಯಾಗಿರುತ್ತದೆ. ಅಲ್ಲದೇ, ನೀವು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣಿನ ಸೇವನೆ ಮಾಡುವುದರಿಂದ ನಿಮ್ಮ ತ್ವಚೆಯ ಮೇಲೆ ರಿಂಕಲ್ಸ್ ಬರುವುದಿಲ್ಲ. ನೀವು ಹೆಚ್ಚು ಕಾಲ ಯಂಗ್ ಆಗಿ ಕಾಣಿಸುತ್ತೀರಿ.
ನೆನಪಿರಲಿ ಪ್ರತಿದಿನ ಪಪ್ಪಾಯಿ ತಿಂದರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ ಅಂತಾದಲ್ಲಿ, ವಾರದಲ್ಲಿ ಮೂರು ದಿನ ಪಪ್ಪಾಯಿ ಹಣ್ಣಿನ ಸೇವನೆ ಮಾಡಿ. ಪಪ್ಪಾಯಿ ಹಣ್ಣಿನ ಸೇವನೆ ಮಾಡಿದ್ದಲ್ಲಿ ನಿಮಗೆ ಅಲರ್ಜಿ ಎಂದಾದಲ್ಲಿ, ವೈದ್ಯರ ಬಳಿ ವಿಚಾರಿಸಿ, ಬಳಿಕ ಪಪ್ಪಾಯಿ ಹಣ್ಣಿನ ಸೇವನೆ ಮಾಡಿ.