International News: 1971ರಲ್ಲಿ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾರತದ ಸೇನೆ ನಡೆಸಿದ್ದ ಸಾಹಸದ ಸನ್ನಿವೇಶಗಳ ವಿವರಗಳನ್ನು ಹೊಂದಿದ್ದ ಪಠ್ಯಗಳನ್ನು ಬಾಂಗ್ಲಾ ಸರ್ಕಾರ ತೆಗೆದುಹಾಕಿದೆ. ಅಲ್ಲದೆ ಬಾಂಗ್ಲಾ ದೇಶದ ಅಸ್ತಿತ್ವಕ್ಕೆ ಕಾರಣವಾಗಿದ್ದ ಮುಜಿಬರ್ ರೆಹಮಾನ್ ಅವರ ಪಠ್ಯದ ಜೊತೆಗೆ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿರುವ ಫೋಟೊವನ್ನೂ ಸಹ ಪಠ್ಯ ಪುಸ್ತಕದಿಂದ ಹೊರಹಾಕಲಾಗಿದೆ.
ಅಲ್ಲದೆ ಇನ್ನೂ ಬಾಂಗ್ಲಾದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಶೇಖ್ ಹಸೀನಾ ಸರ್ಕಾರ ಪತನವಾದ ಬಳಿಕ ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಸೀನಾಗೆ ಭಾರತವು ಆಶ್ರಯ ನೀಡಿದ್ದನ್ನು ಟೀಕಿಸಿದ್ದ ಅಲ್ಲಿನ ಸರ್ಕಾರ ನಿರಂತರವಾಗಿ ಭಾರತದ ವಿರೋಧಿ ನಡೆಯನ್ನು ಅನುಸರಿಸುತ್ತಿದೆ. ಇದೀಗ ಅದರ ಮುಂದುವರೆದ ಭಾಗವಾಗಿ ರವೀಂದ್ರ ನಾಥ್ ಟ್ಯಾಗೋರ್ ರಚಿಸಿದ್ದ ಬಾಂಗ್ಲಾ ರಾಷ್ಟ್ರಗೀತೆಯನ್ನೂ ಸಹ ಕೊನೆಯ ಪುಟಕ್ಕೆ ಅಳವಡಿಸಲಾಗಿದೆ.
ಬಾಂಗ್ಲಾ ವಿಮೋಚನೆಯಲ್ಲಿ ಭಾರತ ಪಾತ್ರ ಕಡೆಗಣನೆ..
ಭಾರತೀಯ ಸೇನಾ ಸಾಹಸ ಮರೆಮಾಚಿದ ಯೂನಸ್ ಸರ್ಕಾರ..!
ಅಲ್ಲದೆ ಬಾಂಗ್ಲಾಗೆ ಮೊದಲು ಮಾನ್ಯತೆಯನ್ನು ಭಾರತ ನೀಡಿತ್ತು ಎಂದು ಈ ಹಿಂದೆ ಪಠ್ಯಗಳಲ್ಲಿ ಮುದ್ರಿಸಲಾಗಿತ್ತು. ಆದರೆ ಬಾಂಗ್ಲಾಗೆ ಮೊದಲನೆಯದಾಗಿ ಮಾನ್ಯತೆ ಕೊಟ್ಟಿದ್ದು ಭೂತಾನ್ ಎಂದು ನಮಗೆ ಅರಿವಿಗೆ ಬಂದಿದೆ ಹೀಗಾಗಿ ನಾವು ಭಾರತವನ್ನು ಆ ಪಠ್ಯದಿಂದ ಕೈ ಬಿಟ್ಟಿದ್ದೇವೆ ಎಂದು ಎನ್‌ಸಿಬಿಟಿ ಅಧ್ಯಕ್ಷ ರಿಯಾಜುಲ್ ಹಸನ್ ಹೇಳಿದ್ದಾರೆ.
ಹಸೀನಾ ಸರ್ಕಾರ ಪತನ ಬಳಿಕ ಭಾರತ ವಿರೋಧಿಯಾದ ಬಾಂಗ್ಲಾ..
ಮುಜಿಬರ್ ರೆಹಮಾನ್, ಇಂದಿರಾ ಗಾಂಧಿ ಫೋಟೊ ಪಠ್ಯದಿಂದ ಔಟ್..
ಈ ಹಿಂದೆ ಬಾಂಗ್ಲಾದ ಮಾಜಿ ಪ್ರಧಾನಿ ಶೇಕ್ ಹಸೀನಾ ಭಾರತದಿಂದ ವಿಡಿಯೋ ಮೂಲಕ ಮೊಹಮ್ಮದ್ ಯೂನಸ್ ಸರ್ಕಾರದ ವಿರುದ್ಧ ದಂಗೆಯೇಳುವಂತೆ ಊದ್ರೇಕಕಾರಿ ಭಾಷಣ ಮಾಡಿದ್ದರು. ಇದರಿಂದ ಬಾಂಗ್ಲಾದಲ್ಲಿ ರೊಚ್ಚಿಗೆದ್ದಿದ್ದ ಯೂನಸ್ ಬೆಂಬಲಿಗರು ಹಸೀನಾ ಮನೆ ಹಾಗೂ ಅವರ ತಂದೆಯ ಸಮಾಧಿಯನ್ನು ಧ್ವಂಸಗೊಳಿದ್ದರು.