Health Tips: ಬೇಸಿಗೆ ಶುರುವಾಗಿದೆ. ಈ ಸಮಯದಲ್ಲಿ ನಾವು ನಮ್ಮ ದೇಹವನ್ನು ಚೆನ್ನಾಗಿ ಹೈಡ್ರೇಟ್ ಮಾಡಬೇಕು. ಅದಕ್ಕಾಗಿ ನೀರು, ಎಳನೀರು, ದೇಹಕ್ಕೆ ತಂಪು ನೀಡುವ ಹಣ್ಣು, ತರಕಾರಿ ಸೇವನೆ ಮಾಡಬೇಕು. ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಬೇಕು. ಇಲ್ಲದಿದ್ದರೆ, ನಮಗೆ ಬೇಸಿಗೆಯಲ್ಲಿ ಹಲವು ಆರೋಗ್ಯ ಸಮಸ್ಯೆ ಕಾಡಲಾರಂಭಿಸುತ್ತದೆ. ಇಂಥ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರಾದ ಡಾ.ಅಶೋಕ್ ಅವರು ವಿವರಣೆ ನೀಡಿದ್ದಾರೆ.
ಬಿಸಿಲು ಜಾಸ್ತಿಯಾದಾಗಲೂ ಖಾಯಿಲೆ ಕಾಣಿಸಿಕೊಳ್ಳುತ್ತದೆ. ಆಹಾರಗಳ ಸೇವನೆಯಲ್ಲಿ ಏರುಪೇರಾದರೂ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಮತ್ತೆ ಚರ್ಮದಲ್ಲಿ ಇನ್‌ಫೆಕ್ಷನ್ ಕಾಣಿಸಿಕೊಳ್ಳುತ್ತದೆ. ನಾವು ಬಿಸಿಲಿಗೆ ಹೋಗಿ ಕೆಲಸ ಮಾಡಿದಾಗ, ನಮ್ಮ ದೇಹ ಡಿಹೈಡ್ರೇಟ್ ಆಗುತ್ತದೆ. ಆಗಲೂ ನಮ್ಮ ಆರೋಗ್ಯ ಹಾಳಾಗುತ್ತದೆ. ಇನ್ನು ಬಿಸಿಲಿನಲ್ಲಿ ಇದ್ದರೆ, ಹಲವರಿಗೆ ಸ್ಕಿನ್ ಅಲರ್ಜಿಯಾಗುತ್ತದೆ. ಹಾಗಾಗಿ ಇಂಥ ಕಡೆ ನಾವು ಗಮನ ನೀಡಿ, ಅದಕ್ಕೆ ಸರಿಯಾದ ಚಿಕಿತ್ಸೆ ಪಡೆಯಬೇಕು.
ಬೇಸಿಗೆಯಲ್ಲಿ ಹೆಚ್ಚಾಗಿ ಕಂಂಡು ಬರುವ ಆರೋಗ್ಯ ಸಮಸ್ಯೆ ಅಂದ್ರೆ, ಲೂಸ್ ಮೋಷನ್ ಮತ್ತು ಡೈಫೈಯ್ಡ್. ಹಾಗಾಗಿ ನಮ್ಮ ದೇಹದಲ್ಲಿ ನಾವು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಹೀಗಾಗಿ ಶುದ್ಧವಾದ, ಕಾಯಿಸಿ ತಣಿಸಿದ ನೀರು, ಬಿಸಿ ಬಿಸಿ ಆಹಾರ ಪದಾರ್ಥ ಸೇರಿ ಆರೋಗ್ಯಕರ ಆಹಾರಗಳನ್ನೇ ನಾವು ಸೇವಿಸಬೇಕು.