- Advertisement -
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಕಲಿ ಅಧಿಕಾರಿಗಳ ಹಾವಳಿ ಹೆಚ್ಚಾಗಿದ್ದು, ಆಹಾರ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಬಂದು ಖದೀಮರು ವಸೂಲಿ ಮಾಡುವ ದಂಧೆ ಶುರು ಮಾಡಿದ್ದರು. ಆದರೆ ಇದೀಗ ಈ ದರೋಡೆಕೋರರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲಕ್ಷ್ಮಣ್ ರೋಖಾ ಮತ್ತು ಮಂಜುನಾಥ್ ಚೌಹಾಣ್ ನಕಲಿ ಅಧಿಕಾರಿಗಳಾಗಿದ್ದು, ಆಹಾರ ಇಲಾಖೆ ಅಧಿಕಾರಿಗಳೆಂದು ಅಂಗಡಿಗಳಿಗೆ ಬಂದು ಇವರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೇ ರೀತಿ ಹಲವು ಅಂಗಡಿಗಳಿಗೆ ಹೋಗಿ, ಬೇಡಿಕೆ ಇಟ್ಟಿದ್ದರೆಂದು ಇವರ ಮೇಲೆ ಆರೋಪವಿತ್ತು.
ಹೀಗಾಗಿ ಅನುಮಾನ ಬಂದು ಸ್ಥಳೀಯರೆಲ್ಲ ಸೇರಿ ನಕಲಿ ಅಧಿಕಾರಿಗಳನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಸದ್ಯ ಘಂಟಿಕೇರಿ ಪೊಲೀಸರು ಖದೀಮರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
- Advertisement -