Horoscope: ಖ್ಯಾತ ಜ್ಯೋತಿಷಿ ವೇಣುಗೋಪಾಲ ಶರ್ಮಾರಿಂದ ಮಿಥುನ ರಾಶಿ ಯುಗಾದಿ ಭವಿಷ್ಯ

Horoscope: ಈ ಬಾರಿಯ ಯುಗಾದಿ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ ಶರ್ಮ ಅವರು ಹೇಳಿದ್ದು, 12 ರಾಶಿಗಳ ಫಲಾಫಲ ಹೇಗಿದೆ ಎಂದು ವಿವರಿಸಿದ್ದಾರೆ. ಅದರಲ್ಲಿ ಮಿಥುನ ರಾಶಿಯವರಿಗೆ ಈ ವರ್ಷ ಹೇಗಿರಲಿದೆ. ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿದೆ ಅಂತಾ ತಿಳಿಯೋಣ ಬನ್ನಿ.

ಮಿಥುನ ರಾಶಿಯವರಿಗೆ ಉದ್ಯೋಗ, ಮನೆ ವಿಷಯದಲ್ಲಿ ಸ್ಥಾನ ಪಲ್ಲಟವಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ವಾಕ್‌ಸ್ಥಾನದಲ್ಲಿ ಕುಜ ಬಂದ ಕಾರಣ, ಮಾತು ಮಿತಿಮೀರಿ, ಮನಸ್ತಾಪ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಿಥುನ ರಾಶಿಯವರು ತುಂಬ ಸಹನೆಯಿಂದ ಇರಬೇಕು.

ಇನ್ನು ಕೊಲೆಸ್ಟ್ರಾಲ್‌ನಿಂದ ರೋಗ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆರೋಗ್ಯಕರ ಆಹಾರ ಸೇವನೆಗೆ ಆದಷ್ಟು ಪ್ರಾಮುಖ್ಯತೆ ನೀಡಿ. ಇನ್ನು ಭೂವಿವಾದವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆ ವಿಷಯ, ಭೂಮಿ ವಿಷಯ, ಸಂಸಾರದ ವಿಷಯ ಮಾತನಾಡುವಾಗ ತಾಳ್ಮೆಯಿಂದ ಇರುವುದನ್ನು ಕಲಿತುಕೊಳ್ಳಿ. ಸಂಬಂಧಗಳು ಹಾಳಾಗುವ ಸಾಧ್ಯತೆ ಇರುತ್ತದೆ.

ಇದಕ್ಕೆಲ್ಲ ನೀವು ಪರಿಹಾರ ಮಾಡಿಕೊಳ್ಳಬೇಕು ಅಂದ್ರೆ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಮಾಡಬೇಕು. ಇಲ್ಲವಾದಲ್ಲಿ ಓಂ ನಮೋ ಭಗವತೇ ನಾಗರಾಜಾಾಯ ನಮೋ ನಮಃ ಅನ್ನೋ ಶ್ಲೋಕವನ್ನು ಮಂಗಳವಾರದ ದಿನ ಬೆಳಿಗ್ಗೆ, ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತು 21 ಬಾರಿ ಪಠಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author