International Political News: ಬಿಹಾರದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಿಹಾರವನ್ನು ನಾಶ ಮಾಡಿದ್ದಾರೆ. ಅಲ್ಲದೆ ಲಾಲು ಅವಧಿಯಲ್ಲಿ ಬಿಹಾರ ಜಂಗಲ್ ರಾಜ್ಯವಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.
ಗೋಪಾಲ್‌ಗಂಜ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಆರ್‌ಜೆಡಿ ಹಾಗೂ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬಿಹಾರವು ಅಕ್ಷರಶಃ ಜಂಗಲ್ ರಾಜ್ಯದಂತಿತ್ತು. ಅಲ್ಲದೆ ಇಲ್ಲಿ ಯಾವುದೇ ಅಭಿವೃದ್ದಿಯು ಆಗಿರಲಿಲ್ಲ ಕೇವಲ ಇಲ್ಲಿನ ನಾಯಕರು ತಮ್ಮ ತಮ್ಮ ಅಭಿವೃದ್ದಿಯಾಗಿದ್ದಾರೆ. ಅಲ್ಲದೆ ಇಲ್ಲಿ ಇದ್ದ ಲಾಲು ರಾಬ್ರಿ ಆಡಳಿತವು ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸೋನಿಯಾ-ಮನಮೋಹನ್ ಸಿಂಗ್ ಸರ್ಕಾರಗಳು ಬಿಹಾರಕ್ಕೆ ಏನೂ ಮಾಡಿಲ್ಲ. ಈಗ ಲಾಲು ಮಕ್ಕಳು ಮುಖ್ಯಮಂತ್ರಿ ಹುದ್ದೆಯ ಸಿದ್ದತೆ ನಡೆಸುತ್ತಿದ್ದಾರೆ ಎಂದು ತಮ್ಮ ವಾಗ್ಬಾಣಗಳನ್ನು ಬಿಟ್ಟಿದ್ದಾರೆ.
ದನಗಳ ಮೇವು ತಿಂದವ್ರು ಜನ ಕಲ್ಯಾಣ ಬಯಸಲಾರರು..!
ಅಲ್ಲದೆ ಕೇವಲ ವಂಶವಾದವನ್ನು ಮಾಡುತ್ತಿರುವ ಇವರ ಮಗಳು ಮಿಸಾ ಭಾರತಿ ಸಂಸದೆಯಾಗಿದ್ದಾರೆ, ಪತ್ನಿ ರಾಬ್ರಿ ದೇವಿ ಶಾಸಕಿಯಾಗಿದ್ದಾರೆ ಹೀಗೆ ಆರ್‌ಜೆಡಿ ಮುಖ್ಯಸ್ಥ ತಮ್ಮ ಕುಟುಂಬ ಉದ್ಧಾರವನ್ಬು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರೆಲ್ಲ ಬಿಹಾರದಲ್ಲಿ ಯುವಕರನ್ನು ಬೆಳೆಸಲಿಲ್ಲ, ನಿರುದ್ಯೋಗ ದೂರ ಮಾಡಲಿಲ್ಲ’. ಆದರೆ ನರೇಂದ್ರ ಮೋದಿ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. ಹೀಗೆ ಮೇವು ತಿಂದವರು ಜನರ ಕಲ್ಯಾಣವನ್ನು ಬಯಸಲಾರರು ಎಂದು ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಜಂಗಲ್ ರಾಜ್‌ದಿಂದ ಮುಕ್ತಿ ಬೇಕಾದ್ರೆ ಎನ್‌ಡಿಎ ಬೆಂಬಲಿಸಿ..
ಇನ್ನೂ ಇಷ್ಟು ದಿನಗಳ ಕಾಲ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟವು ಯಾರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತದೆ ಎಂಬ ಪ್ರಶ್ನೆಯು ಅಲ್ಲಿನ ರಾಜಕೀಯದಲ್ಲಿ ಭಾರೀ ಚರ್ಷೆಗೆ ಕಾರಣವಾಗಿತ್ತು. ಆದರೆ ಅದಕ್ಕೆ ಖುದ್ದು ಗೃಹ ಸಚಿವ ಅಮಿತ್ ಶಾ ಫುಲ್ ಸ್ಟಾಪ್ ಇಡುವ ಮೂಲಕ ಮುಂದಿನ ಚುನಾವಣೆ ನಿತೀಶ್ ಕುಮಾರ್ ನಾಯಕತ್ವದಲ್ಲಿ ನಡೆಯಲಿದೆ ಎಂದಿದ್ದಾರೆ. ಅಲ್ಲದೆ ನರೇಂದ್ರ ಮೋದಿ ಸರ್ಕಾರದ ಜೊತೆಯಾಗಿ ಈ ರಾಜ್ಯವು ಅಭಿವೃದ್ಧಿಯನ್ನು ಕಂಡಿದೆ. ನಿಮಗೆ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವೇ ಬೇಕೆಂದು ಹೇಳಿ. ಇನ್ನೂ ಲಾಲು-ರಾಬ್ರಿಯವರ ಜಂಗಲ್ ರಾಜ್ ಅಥವಾ ಮೋದಿಜಿ ಮತ್ತು ನಿತೀಶ್ ಕುಮಾರ್ ಅವರ ಅಭಿವೃದ್ಧಿ ಮಾರ್ಗ ಬೇಕಾ ಎಂದು ಬಿಹಾರ ನಿರ್ಧರಿಸಬೇಕು. ಕಾಂಗ್ರೆಸ್ 65 ವರ್ಷಗಳಲ್ಲಿ ಮಾಡಲು ಸಾಧ್ಯವಾಗದ್ದನ್ನು ನರೇಂದ್ರ ಮೋದಿ 10 ವರ್ಷಗಳಲ್ಲಿ ಮಾಡಿದ್ದಾರೆ. ದಯವಿಟ್ಟು ಎನ್‌ಡಿಎ ಸರ್ಕಾರಕ್ಕೆ ಮತ್ತೊಮ್ಮೆ ಮತ ಚಲಾಯಿಸಿ. ಐದು ವರ್ಷಗಳಲ್ಲಿ ನಾವು ಬಿಹಾರವನ್ನು ಪ್ರವಾಹ ಮುಕ್ತಗೊಳಿಸುತ್ತೇವೆ ಎಂದು ಶಾ ಭರವಸೆ ನೀಡಿದ್ದಾರೆ.
ಬಿಹಾರಕ್ಕೆ ಮೋದಿ ನೀಡಿದ್ದ ಭರ್ಜರಿ ಗಿಫ್ಟ್..!
ಅಲ್ಲದೆ ಬಿಹಾರದ ಜನರಿಗಾಗಿ ಅವರ ನೆಮ್ಮದಿಯ ಜೀವನಕ್ಕಾಗಿ ಮೋದಿ ಸರ್ಕಾರ ಅನೇಕ ಯೋಜನೆಗಳನ್ನು ತರುತ್ತಿದೆ. ಮುಖ್ಯವಾಗಿ ಇಲ್ಲಿನ ಛಠ್ ಹಬ್ಬಕ್ಕೆ ರಜಾ ದಿನ ಘೋಷಿಸಿದೆ. ಅಲ್ಲದೆ ಬಿಹಾರದ ಅಭಿವೃದ್ಧಿಗಾಗಿ ಕೇಂದ್ರವು 9 ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. ಹದಿಮೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೂ 8,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಏಳು ಸೇತುವೆಗಳನ್ನು ನಿರ್ಮಿಸಲಾಗುವುದು, ಕೇಂದ್ರವು ಬಿಹಾರದಲ್ಲಿ ಮಖಾನಾ ಮಂಡಳಿಯನ್ನು ಸಹ ಸ್ಥಾಪಿಸುತ್ತದೆ ಎಂದು ಅಮಿತ್ ಶಾ ಬಿಹಾರಕ್ಕಾಗಿ ತಮ್ಮ ಸರ್ಕಾರ ಬಜೆಟ್‌ನಲ್ಲಿ ಕೈಗೊಂಡಿರುವ ನಿರ್ಧಾರಗಳನ್ನು ವಿವರಿಸಿದ್ದಾರೆ. ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಹಲವು ತಿಂಗಳುಗಳು ಬಾಕಿ ಇರುವಾಗಲೇ ಕೇಸರಿ ಚುನಾವಣಾ ರಣಕಹಳೆಯನ್ನು ಶಾ ಮೊಳಗಿಸಿದ್ದಾರೆ. ಮತ್ತೊಮ್ಮೆ ಅಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ನಾಯಕರು ಈಗಿನಿಂದಲೇ ತಯಾರಿ ನಡೆಸಿದ್ದಾರೆ.

