Monday, October 6, 2025

Latest Posts

Hubli News: ಬಾಲಕಿ ಹಂತಕನ ಎನ್‌ಕೌಂಟರ್ ಪ್ರಕರಣ, ಹುಬ್ಬಳ್ಳಿಗೆ ಆಗಮಿಸಿದ CID ಎಡಿಜಿಪಿ ಬಿ.ಕೆ.ಸಿಂಗ್

- Advertisement -

Hubli News: ಹುಬ್ಬಳ್ಳಿ: ಬಾಲಕಿ ಹತ್ಯೆಗೈದ ಆರೋಪಿ ಎನ್ ಕೌಂಟರ್ ಪ್ರಕರಣದ ಹಿನ್ನೆಲೆಯಲ್ಲಿ, ಪ್ರಕರಣದ ಮಾಹಿತಿ ಪಡೆಯಲು ಹುಬ್ಬಳ್ಳಿಗೆ ಆಗಮಿಸಿದ್ದಾರೆ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್. ಈಗಾಗಲೇ ಪ್ರಕರಣದ ತನಿಖೆಯನ್ನು ಆರಂಭಿಸಿರುವ ಸಿಐಡಿ ಅಧಿಕಾರಿಗಳು. ಇದರ ಬೆನ್ನಲ್ಲೇ ಈ ಕುರಿತು ಮತ್ತಷ್ಟು ಮಾಹಿತಿ ಪಡೆಯಲು CID ಎಡಿಜಿಪಿ ಬಿ.ಕೆ.ಸಿಂಗ್ ಅವರು ಹುಬ್ಬಳ್ಳಿಗೆ ಆಗಮಿಸಿದ್ದಾರೆ.

ಇದೇ ಎಪ್ರಿಲ್ 13 ರಂದು ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ಕೃತ್ಯ ಎಸಗಿದ ಘಟನಾ ಸ್ಥಳಕ್ಕೆ ಮತ್ತು ಎಂಟರ್ ನಡೆದ ಸ್ಥಳಕ್ಕೆ ಬಿ.ಕೆ.ಸಿಂಗ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಸಿಐಡಿ ಎಸ್ಪಿ ವೆಂಕಟೇಶ ಮತ್ತು ಎಸಿಪಿ ಶಿವಪ್ರಕಾಶ್ ನಾಯಕ್ ರಿಂದ ಮಾಹಿತಿ ಪಡೆದರು.

- Advertisement -

Latest Posts

Don't Miss