ಟ್ರಂಪ್ ಮಾತಿಗೆ ಸಿಗಲಿಲ್ಲ ಮೂರು ಕಾಸಿನ ಕಿಮ್ಮತ್ತು: ಮತ್ತೆ ತನ್ನ ಕಂತ್ರಿ ಬುದ್ಧ ತೋರಿಸಿದ ಪಾಕ್

International News: ಇಂದು ಸಂಜೆಯಷ್ಟೇ ಪಾಕಿಸ್ತಾನ ಭಾರತದ ಹೊಡೆತ ಸಹಿಸಿಕ“ಳ್ಳಲಾಗದೇ, ಅಮೆರಿಕದ ಮಧ್ಯಸ್ತಿಕೆ ವಹಿಸಿ, ಕದನ ವಿರಾಮಕ್ಕಾಗಿ ಅಂಗಲಾಚಿತ್ತು. ಭಾರತದ ಬಳಿ ಜೀವ ಭಿಕ್ಷೆ ಬೇಡಿತ್ತು. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಮಾತು ಕೇಳಿ, ಭಾರತ ಕೂಡ ಕದನ ವಿರಾಮಕ್ಕೆ ಓಕೆ ಎಂದಿತ್ತು. ಆದರೆ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿ, ಕೆಲ ಸಮಯವೂ ಕಳೆದಿಲ್ಲ. ಆಗಲೇ ಪಾಕ್ ತನ್ನ ನರಿ ಬುದ್ಧಿ ತೋರಿಸಿಯೇಬಿಟ್ಟಿದೆ.

ಜಮ್ಮುವಿನಲ್ಲಿ ಡ್ರೋಣ್ ದಾಳಿ ನಡೆಸಿ, ಮತ್ತೆ ಸೋತು ಸುಣ್ಣವಾಗಿದೆ. ಪಾಕಿಸ್ತಾನದ ಛತ್ರಿ ಬುದ್ಧಿಯನ್ನು ಮುನನ್ನವೇ ಅರಿತಿದ್ದ ಭಾರತೀಯ ಸೇನೆ, ಪಾಕಿ ಡ್ರೋನ್‌ನ್ನು ಹೋಡೆದುರುಳಿಸಿದೆ. ಆದರೆ ಬಿಎಸ್ಎಫ್ ಯೋಧ ಇಮ್ತಿಯಾಜ್ ಸಾವನ್ನಪ್ಪಿದ್ದಾರೆ. ಇನ್ನು 7 ಸೈನಿಕರಿಗೆ ಗಾಯಗಳಾಗಿದೆ. ಈ ದಾಳಿ ಅನಿರೀಕ್ಷಿತವಾಗಿದ್ದು, ಬೆನ್ನಿಗೆ ಚೂರಿ ಹಾಕುವ ಪ್ರಯತ್ನ ಮಾಡಿದ ಪಾಕಿಗಳ ಕೆಲಸ ವಿಫಲವಾದರೂ, ಶೆಲ್ ದಾಳಿಯಿಂದ ಭಾರತೀಯ ಓರ್ವ ಯೋಧನ ಜೀವ ಹೋಗಿದೆ.

ಇನ್ನು ಮಧ್ಯವಸ್ತಿಕೆ ವಹಿಸಿ, ವಿಶ್ವದ ದೊಡ್ಡಣ್ಣ ದೊಡಸ್ತಿಕೆ ತೋರಿಸಲು ಹೋಗಿ, ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಮರ್ಯಾದೆಯನ್ನು ಕಳೆದುಕ“ಂಡಿದೆ. ಡೋನಾಲ್ಡ್ ಟ್ರಂಪ್ ಮಧ್ಯಸ್ತಿಕೆ ವಹಿಸಿ, ಪಾಕಿಸ್ತಾನದ ಪರ ಮಾತನಾಡಿದ ಭಾರತದ ಬಳಿ ಕದನ ವಿರಾಮಕ್ಕಾಗಿ ಮನವಿ ಮಾಡಿದ್ದರು. ಭಾರತ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದರೂ ಕೂಡ, ಡೋನಾಲ್ಡ್ ಮಾತಿಗೆ ಮೂರು ಕಾಸಿನ ಕಿಮ್ಮತ್ತು ನೀಡದ ಪಾಕ್ ಕದನ ವಿರಾಮ ಉಲ್ಲಂಘಿಸಿದೆ.

About The Author