Life Lesson: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಕೇಸ್ ಹೆಚ್ಚಾಗುತ್ತಿದೆ. ಅದರಲ್ಲೂ ಡಿವೋರ್ಸ್ ಪಡೆದ ಎಷ್ಟೋ ಹೆಣ್ಣು ಮಕ್ಕಳು, ಮಾಜಿ ಪತಿಯಿಂದ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಹಾಗಾಗಿ ಈ ಬಗ್ಗೆ ಮನೋವೈದ್ಯರು ಹೇಳೋದೇನು ಕೇಳೋಣ ಬನ್ನಿ.
ವೈದ್ಯರ ಪ್ರಕಾರ, ಪ್ರತೀ 10 ಡಿವೋರ್ಸ್ ಕೇಸ್ನಲ್ಲಿ 7 ಕೇಸ್ನಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆದಿರುತ್ತದೆ. 3 ಕೇಸ್ನಲ್ಲಿ ಗಂಡಿನ ಮೇಲೆ ದೌರ್ಜನ್ಯ ನಡೆಯುತ್ತದೆ. ಸಂಸಾರ ಅಂದಾಗ ಜಗಳ ಆಗೋದು ಸಹಜ. ಆದರೆ ಅದನ್ನೇ ಸಿರಿಯಸ್ ಆಗಿ ತೆಗೆದುಕ“ಂಡು, ಹಗೆ ಸಾಧಿಸಿದಾಗಲೇ, ಜಗಳ ಬೀದಿಗೆ ಬರೋದು. ಅದರಲ್ಲೂ ಪತಿ- ಪತ್ನಿ ಮಧ್ಯೆ ನಡೆಯುವ ಜಗಳವನ್ನು ಅವರವರೇ ಸಾಲ್ವ ಮಾಡಿಕ“ಂಡಾಗ, ಮದುವೆ ಮುರಿದು ಬೀಳೋದು ಅಪರೂಪ. ಆದರೆ ಗಂಡಿನ ಅಪ್ಪ ಅಮ್ಮ ಮಗನಿಗೆ, ಹೆಣ್ಣಿನ ಅಪ್ಪ ಅಮ್ಮ ಮಗಳಿಗೆ ಸಪೋರ್ಟ್ ಮಾಡಿಕ“ಂಡು ಬಂದಾಗಲೇ, ಜಗಳ ಜೋರಾಗುತ್ತದೆ.
ಇನ್ನು ಹೆಣ್ಣಿನ ಕಡೆ ಲಾಯರ್ ಇದ್ದರೆ, ಹೆಚ್ಚಿನ ಕಡೆ, ಮದುವೆ ಮುರಿಯಲು ತುಂಬಾ ಇಂಟ್ರೆಸ್ಟ್ ತೋರಿಸುತ್ತಾರೆ. ಕೇಸ್ ಹಾಕಿದರೆ ಇಂತಿಷ್ಟು ಬರುತ್ತದೆ. ಮತ್ತೆ ಬೇರೆ ಮದುವೆಯಾಗಬಹುದು ಅಂತಾ ತಪ್ಪು ಸಲಹೆಗಳನ್ನು ನೀಡುತ್ತಾರೆ. ಇಂಥ ಮೂಗು ತೂರಿಸುವ ಕೆಲಸವಾದಾಗಲೇ, ಮದುವೆ ಮುರಿದು ಬೀಳೋದು, ಡಿವೋರ್ಸ್ ಆಗೋದು.
ಆದರೆ ಪತಿ- ಪತ್ನಿ ಬುದ್ಧಿವಂತಿಕೆ ಉಪಯೋಗಿಸಿ, ಜಗಳವನ್ನು ನಾಲ್ಕು ಗೋಡೆ ಮಧ್ಯೆ ಸಾಲ್ವ ಮಾಡಿಕೋೋಳ್ಳೋದು ಉತ್ತಮ. ಇದಕ್ಕಿರುವ ಸುಲಭ ಮಾರ್ಗ ಎಂದರೆ, ಈಗೋ ಬಿಡುವುದು. ಅಹಂ ಬಿಟ್ಟು ಪತಿ-ಪತ್ನಿ ಉತ್ತಮವಾಗಿದ್ದರೆ, ಅವರನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.