Sandalwood News: ನಟ ಶ್ರೀಧರ್ ನಾಯಕ್ ನಿನ್ನೆ ನಿಧನರಾಗಿದ್ದು, ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಚಿಕಿತ್ಸೆ ಫಲಿಸದೇ ಶ್ರೀಧರ್ ಸಾವನ್ನಪ್ಪಿದ್ದಾರೆ. ಅನಾರೋಗ್ಯದ ಕಾರಣ ಕೇಳಿದಾಗ ಶ್ರೀಧರ್, ನನಗೆ ಇನ್ಫೆಕ್ಷನ್ ಆಗಿ, ಅಚಾನಕ್ ಆಗಿ ಈ ರೀತಿ ಆರೋಗ್ಯ ಹಾಳಾಯ್ತು ಎಂದು ಹೇಳಿದ್ದರು.
ಆದರೆ ಇದೀಗ ಅವರ ಪತ್ನಿ ಜ್ಯೋತಿಯವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಶ್ರೀಧರ್ನನ್ನು ಬಿಟ್ಟು ನಾನಾಗಿಯೇ ಯಾರ“ಂದಿಗೂ ಓಡಿ ಹೋಗಿಲ್ಲ. ನಾನು ನನ್ನ ಮಗ ಇಬ್ಬರೇ ನಮ್ಮಷ್ಟಕ್ಕೆ ನಾವು ಬದುಕುತ್ತಿದ್ದೇವೆ.
ಶ್ರೀಧರ್ಗೆ ಅಹಂಕಾರವಿತ್ತು. ಆ ಅಹಂಕಾರದಿಂದಲೇ ಅವನು ತನ್ನೆಲ್ಲವನ್ನೂ ಕಳೆದುಕ“ಂಡ. ಅವನಿಗೆ ಏಡ್ಸ್ ಮತ್ತು ಕ್ಯಾನ್ಸರ್ ಬಂದಿತ್ತು. ಹಾಗಾಗಿಯೇ ನಾನು ಆತನನ್ನು ಬಿಟ್ಟು ಬಂದಿದ್ದು. ಏಡ್ಸ್ ಕೂಡ ಅವನಾಗಿಯೇ ಬರಿಸಿಕ“ಂಡಿದ್ದು ಎಂದು ಜ್ಯೋತಿ ಹೇಳಿದ್ದಾರೆ.
ನಾನು ಬಡ ಕುಟುಂಬದಿಂದಲೇ ಬಂದವಳು. ಧಾರವಾಡದಲ್ಲಿ ಓದುತ್ತಿದ್ದಾಗ, ನಮ್ಮಿಬ್ಬರಿಗೂ ಮ“ಬೈಲ್ ಮೂಲಕವೇ ಪರಿಚಯವಾಗಿತ್ತು. ನಾವಿಬ್ಬರೂ ಭೇಟಿಯೇ ಆಗಿರಲಿಲ್ಲ. ಎಲ್ಲವೂ ಕಾಲ್ನಲ್ಲಿಯೇ ಮಾತನಾಡುತ್ತಿದ್ವಿ. ಹೀಗಿರುವಾಗ ಶ್ರೀಧರ್ ಧಾರವಾಡಕ್ಕೆ ಬಂದು, ನನಗೆ ಪ್ರಪೋಸ್ ಮಾಡಿದರು. ಬಳಿಕ ಮನೆಯವರನ್ನು `~ಪ್ಪಿಸಿಯೇ ನಾವು ಮದುವೆಯಾಗಿದ್ದು.
ಮನೆಯಲ್ಲಿ oಪ್ಪಿಗೆ ಸಿಗದಿದ್ದರೂನು, ಜಾತಕ ಹ“ಂದಾಣಿಕೆಯಾಗದಿದ್ದರೂನು, ನಾನು ಅವನನ್ನು ಪ್ರೀತಿಸುತ್ತಿದ್ದೆ ಎಂಬ ಕಾರಣಕ್ಕೆ ನಮ್ಮ ಮದುವೆಯಾಯ್ತು. ಆದರೆ ಮದುವೆಯಾಗಿ 1 ತಿಂಗಳಿಗೆನೇ ಶ್ರೀಧರ ನೇಚರ್ನಲ್ಲಿ ಬದಲಾವಣೆಯಾಯ್ತು. ಆದರೆ ಇದೀಗ ಶ್ರೀಧರ್ ನನ್ನ ಬಗ್ಗೆ ನೀಡುತ್ತಿರುವ ಹೇಳಿಕೆಗಳೆಲ್ಲವೂ, ನನ್ನ ತಂದೆ ತಾಯಿ ಆಣೆಗೂ, ನನ್ನ ಮಗನಾಣೆಗೂ, ದೇವರಾಣೆಗೂ ಸುಳ್ಳು ಅಂತಾ ಜ್ಯೋತಿ ಕೆಲ ತಿಂಗಳ ಹಿಂದೆ ನೀಡಿದ ಹೇಳಿಕೆಯಲ್ಲಿ ಕಣ್ಣೀರು ಹಾಕಿದ್ದಳು.
ಅಲ್ಲದೇ ಮದುವೆಯಾದ ಬಳಿಕ ನಿನ್ನ ಮೇಲೆ ನನಗೆ ಪ್ರೀತಿ ಇಲ್ಲವೆಂದು ಶ್ರೀಧರ್ ಹೇಳಿದ್ದರು. ಅಲ್ಲದೇ ನನಗೆ ಅವರು ಹ“ಡೆಯುತ್ತಿದ್ದರು. ಅಷ್ಟು ಪೆಟ್ಟು ತಿಂದರೂ, ಮರುದಿನ ನಾನು ಕಾಲೇಜಿಗೆ ಹೋಗುತ್ತಿದೆ. ನನಗೆ ಶ್ರೀಧರ್ ಪರಿಚಯವಾಗುವುದಕ್ಕೂ ಮುಂಚೆಯೇ ನಾನು ಕೆಲಸ ಮಾಡುತ್ತಿದ್ದೆ. ಶ್ರೀಧರ್ ಮದುವೆಯಾಗುವುದಕ್ಕೆ ಮುಂಚೆಯೇ ನಾನು ದುಡಿಯುತ್ತಿದ್ದೆ. ನನಗೆ ಅವನ ದುಡಿಮೆಯ ಮೇಲೆ ಯಾವ ಆಸೆಯೂ ಇರಲಿಲ್ಲ. ಈಗಲೂ ನಾನೇ ದುಡಿದು ನನ್ನ ಮಗನನ್ನು ಸಾಕುತ್ತಿದ್ದೇನೆ. ನಾನು ಯಾರ ಜತೆಯೂ ಇಲ್ಲ. ಶ್ರೀಧರ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆಂದು ಜ್ಯೋತಿ ಹೇಳಿದ್ದಾರೆ.
ಅಲ್ಲದೇ ಅವನಿಗೆ ಕ್ಯಾನ್ಸರ್ ಬಂದಾಗಲೂ ನಾನು ಅವನ ಜತೆ ಇದ್ದೆ. ಹಲವು ವೈದ್ಯರ ಬಳಿ ಹೋಗಿ, ಚಿಕಿತ್ಸೆ ಮಾಡಿ, ಕ್ಯೂರ್ ಮಾಡಬಹುದಾ ಎಂದು ವಿಚಾರಿಸಿದ್ದೆ. ಆದರೆ ಅವರ್ಯಾರೂ ಿದು ಸರಿಯಾಗುವ ರೋಗವಲ್ಲ, ಕ್ಯಾನ್ಸರ್ ಜತೆ ಏಡ್ಸ್ ಇದೆ ಎಂದರು. ಹಾಗಾಗಿ ನಾನು ಅವನಿಂದ ದೂರವಾದೆ ಎಂದು ಜ್ಯೋತಿ ಹೇಳಿದ್ದಾರೆ.
ಅಲ್ಲದೇ ಶ್ರೀಧರ್ಗೆ ಅಮ್ಮ, ಅಕ್ಕ, ಅಣ್ಣ, ತಮ್ಮ, ಹೆಂಡತಿ, ಮಗ, ಕೆಲಸ, ದುಡ್ಡು ಎಲ್ಲವೂ ಇತ್ತು. ಆದರೆ ಅವನ ಅಹಂಕಾರದಿಂದ ಅವನು ಎಲ್ಲರನ್ನೂ ಕಳೆದುಕ“ಂಡ ಎಂದು ಜ್ಯೋತಿ ಹೇಳಿದ್ದಾರೆ. ಈ ವೀಡಿಯೋ ಶ್ರೀಧರ್ ಅವರಿಗೆ ಅನಾರೋಗ್ಯವಾಗಿದ್ದಾಗ ರಿಲೀಸ್ ಮಾಡಿದ್ದ ವೀಡಿಯೋ. ಇದೀಗ ಶ್ರೀಧರ್ ಅವರು ನಿಧನರಾಗದ್ದಾರೆ.