Health Tips: ಬೀಡಿಗಿಂತ ಸಿಗರೇಟ್ ಒಳ್ಳೆಯದಂತೆ ಹೌದಾ? ಅಪಾಯಗಳು ಏನೇನು?

Health Tips: ಕೆಲವು ಸ್ಮೋಕಿಂಗ್ ಚಟ ಇದ್ದವರು, ಬೀಡಿಗಿಂತ, ಸಿಗರೇಟ್ ಉತ್ತಮ ಅಂತಾ ವಾದಿಸುತ್ತಾರೆ. ಹಾಗಾದರೆ ಬೀಡಿ, ಸಿಗರೇಟ್ ಎರಡರಲ್ಲಿ ಯಾವುದು ಉತ್ತಮ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.

ಬೀಡಿ, ಸಿಗರೇಟ್ ಎರಡರಲ್ಲೂ ನಿಕೋಟಿನ್ ಇರುತ್ತದೆ. ವೈದ್ಯರು ಹೇಳುವ ಪ್ರಕಾರ, ಎರಡೂ ಕೂಡ ನಮ್ಮ ಜೀವಕ್ಕೆ ಮಾರಕವೇ. ಬೀಡಿಗಿಂತ ಸಿಗಾರ್ ಉತ್ತಮ ಅನ್ನೋ ಮಾತು ಸುಳ್ಳು. ಇನ್ನು ಕೆಲವರು ಹಲವು ನೆಪಗಳನ್ನು ಹೇಳುತ್ತಾರೆ. ನಾವು ಸ್ಮೋಕ್ ಮಾಡಿದ್ರೂ, ಬಾಯಿಗೆ ತೆಗೆದುಕ“ಳ್ಳಲ್ಲ, ಹಾಗೆ ಹೊರಗೆ ಹೊಗೆ ಬಿಟ್ಟು ಬಿಡ್ತೀವಿ ಅಂತಾ. ನೀವು ಹೇಗೆ ಸ್ಮೋಕ್ ಮಾಡಿದ್ರೂ, ನಿಮ್ಮ ಜೀವಕ್ಕೆ ಅಪಾಯ ಆಗೋದಂತೂ ಖಂಡಿತ ಅಂತಾರೆ ವೈದ್ಯರು.

ಸ್ಮೋಕ್ ಮಾಡುವುದರಿಂದ ಲಂಗ್ಸ್, ಬಾಯಿ ಕ್ಯಾನ್ಸರ್ ಬರುವ ಎಲ್ಲ ಸಾಧ್ಯತೆ ಇರುತ್ತದೆ. ಹಾಗಾಗಿ ಬೀಡಿಯಾಗಲಿ, ಸಿಗಾರ್ ಆಗಲಿ ಎಲ್ಲ ಒಂದೇ. ಅಲ್ಲದೇ ಹಾಗೆ ಸ್ಮೋಕ್ ಮಾಡುವವರ ಹತ್ತಿರ ನಿಂತರೂ ನಿಮಗೂ ಶ್ವಾಸಕೋಶದ ಸಮಸ್ಯೆ ಆಗಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author