Haveri News: ಹಾವೇರಿ: ಹಾವೇರಿಯಲ್ಲಿ ಕಂಟ್ರಾಕ್ಟರ್ ಶಿವಾನಂದ ಬರ್ಬರವಾಗಿ ಹತ್ಯೆಯಾದ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕೊಲೆಯ ಆರೋಪಿ ಆಡಿಯೋ ವೈರಲ್ ಆಗಿದೆ.
ಈ ಆಡಿಯೋದಲ್ಲಿ, ಆರೋಪಿ ಅಶ್ರಫ್ ಹತ್ಯೆಯ ಕಥೆ ಹೇಳಿದ್ದಾನೆ. ಶಿವಾನಂದ ನನ್ನ ಹತ್ಯೆಗೆ ಸುಪಾರಿ ನೀಡಿದ್ದ, 10 ಲಕ್ಷ ರೂಪಾಯಿಗೆ ನನ್ನನ್ನು ಹತ್ಯೆ ಮಾಡಲು ಹುಬ್ಬಳ್ಳಿ ಹುಡುಗರಿಗೆ ಸುಪಾರಿ ನೀಡಿದ್ದ. ಮುಂಜಾನೆ ನನ್ನ ಮನೆಗೆ ಬಂದು ಎತ್ತಾಕೊಂಡು ಹೋಗಿ ಬೆತ್ತಲೆ ಮಾಡಿ ಥಳಿಸಿದ್ದರು. ನಾನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದಿದ್ದೇನೆ. ಮತ್ತೆ ನನ್ನ ಹುಡುಕಿಕೊಂಡು ಶಿವಾನಂದ ಒಬ್ಬನೆ ಬಂದಿದ್ದ. ನಾನು ನನ್ನ ಸ್ನೇಹಿತರ ಜತೆ ಸೇರಿ ಅವನ ಕತ್ತು ಕತ್ತರಿಸಿದ್ದೇನೆ. ನನ್ನ ಫ್ಯಾಮಿಲಿಯನ್ನು ಚೆನ್ನಾಗಿ ನೋಡಿಕೋ. ನಾನು ಸೆರೆಂಡರ್ ಆಗುತ್ತೇನೆ ಎಂದು ಹೇಳಿದ್ದ ಆಡಿಯೋ ರಿವೀಲ್ ಆಗಿದೆ.
ಇನ್ನು ಯಾಕೆ ಅಶ್ರಫ್ ಹತ್ಯೆಗೆ ಶಿವಾನಂದ್ ಸುಪಾರಿ ನೀಡಿದ್ದ ಎಂಬುದರ ಬಗ್ಗೆ ಮಾತನಾಡಿರು ಆರೋಪಿ, ತನ್ನ ಬಳಿ ಶಿವಾಂದ ಬೇರೆ ಹೆಣ್ಣು ಮಕ್ಕಳ ಜತೆ ಇರುವ ಫೋಟೋ ಇತ್ತು. ಅದನ್ನುಕಸಿದುಕ“ಳ್ಳಲು ಅವನು ನನ್ನ ಹತ್ಯೆಗೆ ಸುಪಾರಿ ನೀಡಿದ್ದನೆಂದು ಅಶ್ರಫ್ ಹೇಳಿದ್ದಾನೆ.
ಇನ್ನು ಹತ್ಯೆ ಆರೋಪಿಗಳ ಮೇಲೆ ಫೈರಿಂಗ್ ನಡೆದಿದ್ದು, ಹಾವೇರಿಯ ಹಾನಗಲ್ ತಾಲ್ಲೂಕಿನ ಕೊಂಡೋಜಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಆರೋಪಿಗಳಾದ ಅಶ್ರಫ್ ಮತ್ತು ನಾಗರಾಜ ಕಾಲಿಗೆ ಗುಂಡೇಟು ತಾಕಿದ್ದು, ಗಾಯಾಳು ಆರೋಪಿಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿ ಎಸ್ಪಿ ಅಂಶುಕುಮಾರ ನೇತ್ರತ್ವದಲ್ಲಿ ಆರೋಪಿಗಳನ್ನು ಹುಬ್ಬಳ್ಳಿಗೆ ರವಾನೆ ಮಾಡಲಾಗಿದ್ದು,
ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.