Life Lesson: ವೈವಾಹಿಕ ಜೀವನ ಹೇಗಿರಬೇಕು..? ಇಲ್ಲಿ ಸಮಸ್ಯೆ ಬಂದಾಗ ಯಾವ ರೀತಿಯಾಗಿ, ಅದನ್ನ ಬಗೆಹರಿಸಿಕ“ಳ್ಳಬೇಕು. ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಇದೀಗ ಇತ್ತೀಚೆಗೆ ಮಹಿಳೆಯರು ಹೆಚ್ಚು ಕ್ರೈಮ್‌ನಲ್ಲಿ ಭಾಗವಹಿಸುತ್ತಿದ್ದಾರೆ ಅನ್ನೋ ವಿಷಯದ ಬಗ್ಗೆಯೂ ಡಾ.ರೂಪಾ ರಾವ್ ತಮ್ಮ ಅಭಿಪ್ರಾಯ ಹಂಚಿಕ“ಂಡಿದ್ದಾರೆ.
ಮನೋ ವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಈ ಬಗ್ಗೆ ವಿವರಿಸಿದ್ದು, ಹೆಣ್ಣು ಗಂಡನ್ನು ಮಹಿಳೆ ಪುರುಷ ಅನ್ನೋ ಬೇಧ ಭಾವದಿಂದ ನೋಡುವ ಬದಲು, ಅವರನ್ನು ಮನುಷ್ಯರು ಅಂತಾ ನೋಡುವುದು ತುಂಬಾ ಮುಖ್ಯ. ಮುಂಚೆ ಎಲ್ಲ ಹೆಣ್ಣು ಮಕ್ಕಳಲ್ಲಿ ಕೆಲವು ವಿಷಯಗಳನ್ನು ಹೇಳಿ, ಅದೇ ರೀತಿ ಬದುಕಬೇಕು ಎಂದು ಬೆಳೆಸುತ್ತಿದ್ದರು. ಆದರೆ ಇತ್ತೀಚೆಗೆ ಹೆಣ್ಣು ಮಕ್ಕಳಲ್ಲಿ ತಾಳ್ಮೆ ಕಡಿಮೆಯಾಗಿದೆ.
ಇದಕ್ಕೆ ಉದಾಹರಣೆ ಎಂಬಂತೆ, ಪತಿಯನ್ನು ಬೆಂಕಿಗೆ ಹಾಕುವುದು, ಕುಕ್ಕರ್‌ಗೆ ಹಾಕುವುದು, ಹನಿಮೂನ್‌ಗೆ ಹೋದಾಗ, ಅಲ್ಲಿ ಹತ್ಯೆ ಮಾಡುವುದು. ಈ ತೀರಿಯ ಕೃತ್ಯಗಳು ಬೆಳಕಿಗೆ ಬರುತ್ತಿದೆ. ಅಲ್ಲದೇ, ಮಗು ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂದು ಅದನ್ನು ಹತ್ಯೆ ಮಾಡುವುದು. ಇಂಥ ಘಟನೆಗಳು ಹೆಚ್ಚು ನಡೆಯುತ್ತಿದೆ.
ಇಂಥ ವಿಷಯಗಳಲ್ಲಿ ಹೆಣ್ಣು ಕ್ರೂರಿಯಾಗುತ್ತಿದ್ದಾಳೆಂದರೆ, ಇದಕ್ಕೆ ಕಾರಣವೇನಿರಬಹುದು ಅಂತಾ ನಾವು ಯೋಚಿಸಬೇಕು. ಸಿಕ್ಕ ಸ್ವಾತಂತ್ರ್ಯವನ್ನು ಹೆಣ್ಣು ತಪ್ಪಾಗಿ ಅರ್ಥ ಮಾಡಿಕ“ಂಡಿದ್ದಾಳೆ. ಮುಂಚೆ ಎಲ್ಲ ಹೆಣ್ಣು ಮಕ್ಕಳು ಯಾವ ಕೆಲಸ ಮಾಡುವುದಿದ್ದರೂ, ಯೋಚಿಸಿ, ನಾನು ಹೀಗೆ ಮಾಡಬಾರದು. ಇದರಿಂದ ಯಾರ ಮೇಲೆ ಎಂಥ ಪರಿಣಾಮ ಬೀರುತ್ತದೆ. ಸಮಾಜ ನನ್ನ ಬಗ್ಗೆ ಯಾವ ರೀತಿ ಮಾತನಾಡಿಕ“ಳ್ಳುತ್ತದೆ ಅಂತಾ ಯೋಚಿಸುತ್ತಿದ್ದಳು. ಆದರೆ ಇತ್ತೀಚೆಗೆ ಅಂಥ ಯೋಚನೆಗಳಿಗೆ ಜಾಗವೇ ಇಲ್ಲ ಎಂಬಂತೆ ಕೆಲವು ಹೆಣ್ಣು ಮಕ್ಕಳು ಸ್ವಾತಂತ್ರವನ್ನು ತಪ್ಪಾಗಿ ಅರ್ಥೈಸಿಕ“ಳ್ಳುತ್ತಿದ್ದಾರೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.