ಕಾಮಾಕ್ಷಿ ದೀಪವನ್ನು ಹಚ್ಚುವಾಗ ಯಾವ ನಿಯಮಗಳನ್ನ ಅನುಸರಿಸಬೇಕು ಅನ್ನೋದರ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಕಾಮಾಕ್ಷಿ ದೀಪವನ್ನ ಗಜಲಕ್ಷ್ಮೀ ದೀಪ ಅಂತಾನೂ ಕರೀತಾರೆ. ಈ ದೀಪವನ್ನ ಹಚ್ಚಿದಾಗ ದೀಪಕ್ಕೆ ಕುಂಕುಮ ಹೂವು ಇಟ್ಟು ಪೂಜೆ ಮಾಡಬೇಕು. ಆದ್ರೆ ಈ ದೀಪವು ಅಪ್ಪಿ ತಪ್ಪಿಯೂ ಕೂಡ ನೆಲಕ್ಕೆ ತಾಗದಂತೆ ನೋಡಿಕೊಳ್ಳಬೇಕು.
ಈ ದೀಪ ಹಚ್ಚುವಾಗ ತಾಮ್ರದ ತಟ್ಟೆ ಅಥವಾ ಬೆಳ್ಳಿಯ ತಟ್ಟೆ ಇಟ್ಟು ಅದರ ಮೇಲೆ ಕಾಮಾಕ್ಷೀ ದೀಪವಿಟ್ಟು, ದೇವರ ಮುಂದಿಡಬೇಕು. ಆದ್ರೆ ಯಾವುದೇ ಕಾರಣಕ್ಕೂ ಸ್ಟೀಲ್ ತಟ್ಟೆ ಮೇಲೆ ಕಾಮಾಕ್ಷಿ ದೀಪವನ್ನಿಡಬಾರದು.
ಇನ್ನು ಈ ಕಾಮಾಕ್ಷಿ ದೀಪವನ್ನ ಬೆಳಗುವಾಗ ಯಾವ ಎಣ್ಣೆ ಬಳಸಬಹುದು ಎಂಬ ಪ್ರಶ್ನೆ ನಿಮ್ಮದಾದರೆ, ಹಸುವಿನ ತುಪ್ಪ, ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆ ಹಾಕಿ ಕಾಮಾಕ್ಷೀ ದೀಪ ಬೆಳಗಬಹುದು. ಇನ್ನು ಕಾಮಾಕ್ಷಿಯಷ್ಟೇ ಅಲ್ಲ ಯಾವುದೇ ದೀಪವನ್ನು ಬೆಳಗುವಾಗಲೂ ಕೂಡ ಒಂಟಿ ಬತ್ತಿ ಹಚ್ಚಿ ಪೂಜೆ ಮಾಡಬಾರದು. ಎರಡು ಬತ್ತಿಯನ್ನ ಸೇರಿಸಿ ದೀಪ ಹಚ್ಚಬೇಕು. ಈ ದೀಪ ಹೇಗೆ ನಿಧಾನಕ್ಕೆ ಉರಿಯುತ್ತದೆಯೋ ಅದೇ ರೀತಿ ಆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಕೂಡ ಉರಿದು ಹೋಗುತ್ತೆ.
ಇನ್ನು ಕಾಮಾಕ್ಷಿ ದೀಪವನ್ನು ಉತ್ತರ ಮತ್ತು ಪೂರ್ವ ದಿಕ್ಕನ್ನು ನೋಡುವಂತೆ ಇಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ದೀಪಾರಾಧನೆ ಮಾಡಬಾರದು. ಅಲ್ಲದೇ ಶುಕ್ರವಾರ ಮತ್ತು ಮಂಗಳವಾರ ಯಾವುದೇ ಕಾರಣಕ್ಕೂ ಕಾಮಾಕ್ಷಿ ದೀಪವನ್ನ ತೊಳಿಯಬಾರದು. ಹೀಗೆ ಮಾಡಿದ್ದಲ್ಲಿ ದಟ್ಟ ದಾರಿದ್ರ್ಯ ಸಂಭವಿಸುತ್ತದೆ.

ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..




