Sandalwood: ವೇದ ಪಾತ್ರ ಬದುಕಿಗೆ ತಿರುವು, ಎಲ್ಲೋದ್ರು ಬೇತಾಳ ಅಂತಿದ್ರು: ನಟಿ ಖುಷಿ

Sandalwood: ವೇದ ಪಾತ್ರದಲ್ಲಿ ನೀನಾದೆ ನಾ ಸಿರಿಯಲ್‌ನಲ್ಲಿ ಮಿಂಚಿರುವ ನಟಿ ಖುಷಿ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದಾರೆ.

ವೇದ ಪಾತ್ರದ ಬಗ್ಗೆ ಮಾತನಾಡಿರುವ ಖುಷಿ, ನಮ್ಮನೆ ಯುವರಾಣಿ ಸಿರಿಯಲ್ ಮುಗಿದ ಬಳಿಕ ನಾನು ಬ್ರೇಕ್ ತೆಗೆದುಕ“ಂಡೆ, ಎರಡ್ಮೂರು ಕೆಲಸ ಸಿಕ್ಕರೂ ಆ ಪಾತ್ರ ನಿಭಾಯಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ಬಳಿಕ ಸಿಕ್ಕ ವೇದ ಪಾತ್ರ, ನನ್ನ ಕೇರಿಯರ್‌ಗೆ ಬಿಗ್ ಸಕ್ಸಸ್ ನೀಡಿದೆ ಎಂದಿದ್ದಾರೆ.

ಈ ಕಥೆ ಕೇಳುವಾಗ, ಫಸ್ಟ್ ಲೈನ್ ಕೇಳ್ತಿದ್ದಂಗೆ ನಾನು ಓಕೆ ನಾನು ಈ ಪಾತ್ರವನ್ನು ಮಾಡ್ತೇನೆ ಅಂತಾ ಹೇಳಿದ್ದೆ. ಓರ್ವ ಹುಡುಗಿ ವಿದ್ಯಾವಂತೆ, ಬುದ್ಧಿವಂತೆ, ಶ್ರೀಮಂತೆಯಾದರೂ, ತಾಳಿ ಕಟ್ಟಿಸಿಕ“ಂಡಿದ್ದಕ್ಕಾಗಿ, ಆ ಜವಾಬ್ದಾರಿ ನೆರವೇರಿಸಲು ಯಾವ ರೀತಿ ಬಡವ ಮತ್ತು ರೌಡಿ ಮನೆಗೆ ಹೋಗುತ್ತಾಳೆ ಅನ್ನೋ ರೀತಿ ಕಥೆ ಹೇಳಲಾಗಿತ್ತು. ಹೀಗೆ ಈ ಲೈನ್ ಕೇಳಿದ ಬಳಿಕವೇ ನಾನು ಪಾತ್ರಕ್ಕಾಗಿ ತಕ್ಷಣ ಓಕೆ ಹೇಳಿದೆ ಅಂತಾರೆ ಖುಷಿ.

ಇನ್ನು ಆಡಿಷನ್ ಸಮಯದಲ್ಲಿ ನಟ ದಿಲೀಪ್ ಅವರನ್ನು ನೋಡಿ, ಖುಷಿ ಅವರ ಅಮ್ಮನಿಗೆ ಹೇಳಿದ್ರಂತೆ. ಬುರ್ಜ್ ಖಲೀಫಾ ಬಂದಿದಾನೆ ನೋಡು ಅಂತಾ. ಯಾಕಂದ್ರೆ ದಿಲೀಪ್ ಅವರ ಹೈಟ್ ಆ ರೀತಿ ಇತ್ತು. ಹೀಗೆ ವೇದ ಪಾಾತ್ರದ ಬಗ್ಗೆ ಸಾಕಷ್ಟು ವಿಚಾರವನ್ನು ಖುಷಿ ಹಂಚಿಕ“ಂಡಿದ್ದಾರೆ. ಆ ಎಲ್ಲ ಮಾಹಿತಿ ತಿಳಿಯಲು ಈ ವೀಡಿಯೋ ಕ್ಲಿಕ್ ಮಾಡಿ.

About The Author