Friday, August 29, 2025

Latest Posts

Health Tips: ನಿಮಗೆ ಪ್ರತೀ ದಿನ ತಲೆ ನೋವತ್ತಾ..? ಹಾಗಾದ್ರೆ ಅದಕ್ಕೆ ಕಾರಣವೇನು..?

- Advertisement -

Health Tips: ಕೆಲವರಿಗೆ ಪ್ರತೀ ದಿನ ತಲೆ ನೋವತ್ತೆ. ಕೆಲವರು ಅದನ್ನು ಲೆಕ್ಕಿಸದೇ, ತಮ್ಮ ಪಾಡಿಗೆ ತಾವಿರುತ್ತಾರೆ. ಇನ್ನು ಕೆಲವರು ಪ್ರತೀದಿನ ಜೆಂಡುಬಾಮ್, ಆ ಬಾಮ್ ಈ ಬಾಮ್ ಅಂತಾ, ಕೈಗೆ ಸಿಕ್ಕಿದ್ದನ್ನು ಹಣೆಗೆ ಹಚ್ಚಿಕ“ಳ್ಳುತ್ತಾರೆ. ಆದರೆ ಈ ತಲೆನೋವಿಗೆ ಕಾರಣವೇನು ಅಂತಾ ತಿಳಿದು, ಅದಕ್ಕೆ ಪರಿಹಾರ ಹುಡುಕುವವರು ತುಂಬಾ ಕಡಿಮೆ. ಹಾಗಾದ್ರೆ ಪ್ರತೀ ದಿನ ತಲೆನೋವಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಸಾಮಾನ್ಯವಾಗಿ ಮೇಗ್ರೇನ್ ಸಮಸ್ಯೆ ಇದ್ದವರಿಗೆ ತಲೆಯ 1 ಭಾಗ ನೋವಾಗುತ್ತದೆ. ಲೈಟ್ ನೋಡಿದಾಗ, ಸೌಂಡ್ ಕೇಳಿದಾಗ ತಲೆ ನೋವು ಹೆಚ್ಚಾಗುತ್ತದೆ. ಮತ್ತು ಈ ತಲೆನೋವು ಬೆಳಗ್ಗಿನ ಜಾವ ಹೆಚ್ಚಾಗುತ್ತದೆ. ಇದಕ್ಕೆ ಕಾರಣ, ಜೆನೆಟಿಕ್ ಅಥವಾ ಹಾರ್ಮೋನಲ್ ಸಮಸ್ಯೆ ಇದ್ದಾಗ ಈ ತಲೆನೋವು ಉದ್ಭವಿಸುತ್ತದೆ.

ಇನ್ನು ಮೂಗಿನ ಬಳಿ, ಅಥವಾ ಐಬ್ರೋಸ್‌ ಬಳಿ ತಲೆನೋವಾದ್ರೆ, ಅದು ಸೈನಸ್ ತಲೆನೋವು. ಈ ತಲೆನೋವು ಬರಲು ಕಾರಣವೇನು ಎಂದರೆ, ಇದು ನೆಗಡಿ, ಜ್ವರವಿದ್ದಾಗ, ಅಥವಾ ಅಲರ್ಜಿಯಿಂದ ತಲೆನೋವು ಬರಬಹುದು.

ಇನ್ನು ಕೆಫೆನ್ ತಲೆನೋವು. ಇದು ಕಾಫಿ, ಟೀ ಕುಡಿಯುವ ಅಭ್ಯಾಸ ಹೆಚ್ಚಾಗಿರುವವರಿಗೆ ಈ ತಲೆನೋವು ಬರುತ್ತದೆ. ಅವರು ಕಾಫಿ, ಚಾ ಸೇವನೆ ಮಾಡುವ ಸಮಯಕ್ಕೆ ಸ್ಕಿಪ್ ಮಾಡಿದಾಗ, ತಲೆನೋವು ಬರುತ್ತದೆ. ಮತ್ತು ಅಂಥವರು ಕಾಫಿ, ಚಾ ಸೇವನೆ ಮಾಡಿದ ಬಳಿಕ ಆ ತಲೆನೋವು ಹೋಗುತ್ತದೆ.

ಆದರೆ ಮುಖ್ಯವಾದ ವಿಷಯ ಅಂದ್ರೆ, ಸಾಮಾನ್ಯ ತಲೆನೋವು, ಅಥವಾ ಈ ಕೆಫೆನ್ ತಲೆನೋವು ಬಂದಾಗ, ನೀವು ಮಾತ್ರೆ, ಕಾಫಿ, ಚಾ ಸೇವನೆ ಮಾಡಲೇಬೇಕು ಎಂದೇನಿಲ್ಲ. ನೀವು ಹೆಚ್ಚು ಬಿಸಿ ನೀರು ಅಥವಾ ಉಗುರು ಬೆಚ್ಚಗಿನ ನೀರಿನ ಸೇವನೆ ಮಾಡಿಯೂ, ನಿಮ್ಮ ತಲೆನೋವನ್ನು ಶಮನ ಮಾಡಬಹುದು.

ಏಕೆಂದರೆ ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದಲ್ಲಿ, ದೇಹದಲ್ಲಿ ಗ್ಯಾಸ್ಟಿಕ್ ಹೆಚ್ಚಾಗಿದ್ದಲ್ಲಿಯೂ, ತಲೆನೋವು ಬರುತ್ತದೆ. ಬಿಸಿ ನೀರು ಕುಡಿದಾಗ, ತೇಗಿನ ಮೂಲಕ ಗ್ಯಾಸ್‌ ಪಾಸ್ ಆಗಿ, ನಿಮ್ಮ ತಲೆನೋವು ಹೋಗುತ್ತದೆ. ಅಲ್ಲದೇ ಮಲಬದ್ಧತೆ ಸಮಸ್ಯೆ ಇದ್ದಾಗಲೂ ಈ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇರುತ್ತದೆ.

ಆದರೆ ನಿಮಗೆ ಮೈಗ್ರೇನ್ ಅಥವಾ ಸೈನಸ್ ಸಮಸ್ಯೆ ಇದ್ದಲ್ಲಿ, vೀವು ವೈದ್ಯರ ಬಳಿ ಹೋಗಿಯೇ ಅದಕ್ಕೆ ಪರಿಹಾರ ಕಂಡುಕ“ಳ್ಳಬೇಕು.

- Advertisement -

Latest Posts

Don't Miss