Hubli News: ದೇಶದ ಗುಜರಾತ್ ನಲ್ಲಿ ನಡೆದ ಬ್ರಿಡ್ಜ್ ಅನಾಹುತ ಹಸಿಯಾಗಿರುವಾಗಲೇ ರಾಜ್ಯದಲ್ಲಿ ನಡೆಯಬೇಕಿದ್ದ ದೊಡ್ಡದೊಂದು ಅನಾಹುತ ತಪ್ಪಿದೆ. ಅಧಿಕಾರಿಗಳ ನಿರ್ಲಕ್ಷ್ಯ ಗುತ್ತಿಗೆದಾರ ಯಡವಟ್ಟಿನಿಂದ ಪ್ರತಿಷ್ಠಿತ ಮತ್ತು ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿನ ಬ್ರಿಡ್ಜ್ ಶಕ್ತಿ ಕುಂದುತ್ತಿದ್ದು, ಇದಕ್ಕೆ ತೆಪೆ ಹಚ್ಚುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ..
ರಾಷ್ಟ್ರೀಯ ಹೆದ್ದಾರಿ 67 ದೊಡ್ಡ ಯಡವಟ್ಟು..
ರಸ್ತೆ ಲೋಕಾಪಾರ್ಣೆಗೊಂಡು ಐದು ವರ್ಷಗಳಲ್ಲೆ ಬ್ರಿಡ್ಜ್ ನಲ್ಲಿ ಕಾಣಿಸಿಕೊಂಡ ವಿಕ್ ಸ್ಟ್ರೆಂತ್ ಸಮಸ್ಯೆ..
ಸದ್ದಿಲ್ಲದೆ ಹೈಟೆಕ್ ತಂತ್ರಜ್ಞಾನ ಮೂಲಕ ಬ್ರಿಡ್ಜ್ ಗೆ ತೆಪೆ ಹಚ್ಚುವ ಕಾರ್ಯ
ಶೀಘ್ರ ಸಂಪರ್ಕ ಮತ್ತು ಬೃಹತ್ ಪ್ರಮಾಣದಲ್ಲಿ ಸರಕು ಸಾಗಾಣಿಕೆಗಾಗಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಬರುವ ಪ್ರಮುಖ ಸೇತುವೆಗಳಲ್ಲಿ ಸ್ಟ್ರೆಂತ್ ಸಮಸ್ಯೆ ಕಾಣಿಸಿಕೊಂಡಿದೆ. 2020ರಲ್ಲಿ ಆಂಧ್ರಾ ಮೂಲದ BSE KNR ಕಂಪನಿ ಗುತ್ತಿಗೆ ಪಡೆದು ರಸ್ತೆ ನಿರ್ಮಾಣ ಮಾಡಿತ್ತು. ಲೋಕಾಪಾರ್ಣೆಗೊಂಡಿರುವ ಹುಬ್ಬಳ್ಳಿ ಟು ಹೊಸಪೇಟೆ ಮಾರ್ಗದಲ್ಲಿ,ಐದೇ ವರ್ಷದಲ್ಲಿ ಪ್ರಮುಖ ಎರಡು ಸೇತುವೆಗಳಲ್ಲಿ ಈ ಸಮಸ್ಯೆ ಎದುರಾಗಿದ್ದು ಅಕ್ಕಪಕ್ಕದ ಜನ ಸೇರಿದಂತೆ, ನಿತ್ಯ ಸಂಚಾರ ಮಾಡುವ ಲಕ್ಷಾಂತರ ವಾಹನ ಸವಾರರಿಗೆ ಆಂತಕ ಹೆಚ್ಚಿದೆ..
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಭಂಡಿವಾಡ, ಶಿರಗುಪ್ಪಿ ಗ್ರಾಮದ ಬ್ರಿಡ್ಜ್ ಗಳು ಫುಲ್ ವಿಕ್ ಆಗಿವೆ.ರಸ್ತೆ ಲೋಕಾಪಾರ್ಣೆಗೊಂಡು ಐದು ವರ್ಷಗಳಲ್ಲೆ ಈ ಎರಡು ಬ್ರಿಡ್ಜ್ ನಲ್ಲಿ ವಿಕ್ ಸ್ಟ್ರೆಂತ್ ಸಮಸ್ಯೆ ಕಾಣಿಸಿಕೊಂಡಿದೆ.ಶಿರಗುಪ್ಪಿ ಗ್ರಾಮದ ಸಮೀಪದ ಬೆಣ್ಣೆ ಹಳ್ಳಕ್ಕೆ ಅಡ್ಡಲಾಗಿ ಮತ್ತು ಭಂಡಿವಾಡ ಸಂಪರ್ಕಕ್ಕೆ ನಿರ್ಮಾಣ ಮಾಡಿರುವ ಅಂಡರ್ ಗ್ರ್ಯಾಂಡ್ ಬ್ರಿಡ್ಜ್ ಶಕ್ತಿ ಪ್ರಮಾಣ ಕುಸಿದಿರುವುದು ಬೆಳಕಿಗೆ ಬಂದಿದೆ..ಹುಬ್ಬಳ್ಳಿ ಟು ಹೊಸಪೇಟೆ ಒಟ್ಟು 143 ಕಿಲೋಮೀಟರ್ ರಸ್ತೆಯಲ್ಲಿ 130 ಕ್ಕೂ ಅಧಿಕ ಬ್ರಿಡ್ಜ್ ಗಳಿವೆ..ಗುಜರಾತ್ ನಲ್ಲಿ ಸೇತುವೆ ಕುಸಿತದ ಬಳಿಕ ಅಧಿಕಾರಿಗಳು ಎನ್ ಎಚ್ 67 ರಲ್ಲಿ ಬರುವ ಎಲ್ಲಾ ಸೇತುವೆಗಳ ಸ್ಟ್ರೆಂತ್ ತಪಾಸಣೆ ಮಾಡಿದ್ದರು..
ಮದ್ರಾಸ್ ಐಐಟಿ ಇಂಜಿನಿಯರಿಂಗ್ ಹೆಚ್ ಓಡಿ ನೇತೃತ್ವದಲ್ಲಿ ತಂಡದಿಂದ ನಡೆದಿದ್ದ ಪರಿಶೀಲನೆ ವೇಳೆ,ಭಂಡಿವಾಡ ಮತ್ತು ಶಿರಗುಪ್ಪಿ ಬ್ರಿಡ್ಜ್ ನಲ್ಲಿ ಸ್ಟ್ರೆಂತ್ ಕಡಿಮೆಯಾಗಿರುವುದು ಕಂಡು ಬಂದಿದೆ..ಬ್ರಿಡ್ಜ್ ಗಳ ಸ್ಟ್ರೆಂತ್ ಕಡಿಮೆ ಅಂದ್ರೂ 45% ರಿಂದ 50% ಬರಬೇಕು..ಆದರೆ ಭಂಡಿವಾಡ ಮತ್ತು ಶಿರಗುಪ್ಪಿ ಬ್ರಿಡ್ಜ್ ನಲ್ಲಿ ಸ್ಟ್ರೆಂತ್ ಬರೀ 35% ಬಂದಿದೆ..ಹೀಗಾಗಿ ತಜ್ಞರು ಸೂಚಿಸಿರುವ ಹೈಟೆಕ್ ತಂತ್ರಜ್ಞಾನ ಮೂಲಕ ಬ್ರಿಡ್ಜ್ ಮುರು ನಿರ್ಮಾಣ ಕಾರ್ಯ ಆರಂಭವಾಗಿದ್ದು, ಮತ್ತೆ ಹೆಚ್ಚು ಸ್ಟ್ರೆಂತ್ ಹೆಚ್ವಿಸುವ ಕಾರ್ಯವಾಗುತ್ತಿದೆ.ನಿತ್ಯ ಲಕ್ಷಾಂತರ ಹೆವಿ ವಾಹನಗಳು ಸಂಚಾರ ಮಾಡುವ ರಸ್ತೆಯಲ್ಲಿ ಸಮಸ್ಯೆ ಹಿನ್ನೆಲೆ,ಅಕ್ಕ-ಪಕ್ಕದ ಗ್ರಾಮಸ್ಥರಲ್ಲಿ ಕಾಣಿಸಿಕೊಂಡ ಆತಂಕ ಹೆಚ್ಚಿಸಿದೆ. ಇಂತಹ ದೊಡ್ಡ ಯೋಜನೆ ಕೇವಲ ಐದೇ ವರ್ಷದಲ್ಲಿ ಹದಗೆಟ್ಟಿರುವುದಕ್ಕೆ, ಹಲವಾರು ಅನುಮಾನ ವ್ಯಕ್ತವಾಗುತ್ತಿವೆ..
ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ಖರ್ಚು ಮಾಡಿ, ರಸ್ತೆಗಳನ್ನು ನಿರ್ಮಾಣ ಮಾಡಿ, ದೇಶದ ಆರ್ಥಿಕ ಅಭಿವೃದ್ಧಿ ಹೆಚ್ಚಿಸುವ ಕಾರ್ಯ ಮಾಡುತ್ತಿವೆ. ಆದರೆ ಗುತ್ತಿಗೆದಾರನ ಲಾಭದಾಸೆ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ನೀತಿಯಿಂದ ಇಂತಹ ಯಡವಟ್ಟುಗಳಾಗುತ್ತಿರುವುದು ವಿಪರ್ಯಾಸದ ಸಂಗತಿ..
-ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ




