Horoscope: ಕೆಲವರು ಮೊಂಡು ಸ್ವಭಾವ ತೋರಿಸುವುದನ್ನು ನೀವು ನೋಡಿರಬಹುದು. ಎದುರಿನವರೇ ಮಾತನಾಡಿಸಲಿ, ನಾನು ಹೇಳಿದ್ದೇ ನಡೆಯಬೇಕು, ನನಗೆ ಇದೇ ರೀತಿ ಇರಬೇಕು , ಈ ರೀತಿ ಈಗೋ ತೋರಿಸುವ ಜನರನ್ನು ನೀವು ನೋಡಿರುತ್ತೀರಿ. ಅದೇ ರೀತಿ ನಾವಿಂದು ಸಂಗಾತಿ ಜತೆಗೂ ತಮ್ಮ ಅಹಂ ತೋರಿಸುವ ರಾಶಿಯವರ ಬಗ್ಗೆ ಹೇಳಲಿದ್ದೇವೆ.
ಮೇಷ ರಾಶಿ: ಮೇಷ ರಾಶಿಯವರು ಎಲ್ಲದರಲ್ಲೂ ತಾವೇ ಮುಂದಿರಬೇಕು ಎನ್ನುವವರು. ಅದೇ ರೀತಿ ಛಲ ಬಿಡದೇ, ಹಿಡಿದ ಕೆಲಸ ಮಾಡುವರು. ಆದರೆ ಜಗಳದ ವಿಷಯ ಅಥವಾ ಯಾವುದೇ ವಿಷಯದಲ್ಲಿ ತಮ್ಮ ಮಾತೇ ಮುಂದಿರಬೇಕು ಎಂಬ ಸ್ವಭಾವವನ್ನು ಇವರು ಕೆಲವು ಬಾರಿ ತೋರಿಸುತ್ತಾರ.
ಮಿಥುನ ರಾಶಿ: ಮಿಥುನ ರಾಶಿಯವರು ಉತ್ತಮ ಸ್ವಭಾವದವರು. ಇವರಿಗೆ ಜಗಳ, ಮನಸ್ತಾಪಗಳು ಇಷ್ಟವಾಗೋದಿಲ್ಲ. ಇವರು ಸದಾ ಎಲ್ಲರ ಜತೆ ನಗು ನಗುತ್ತ ಇರಲು ಬಯಸುತ್ತಾರೆ. ಆದರೆ ಇವರ ಗೌರವಕ್ಕೆ ಧಕ್ಕೆ ಬಂದರೆ, ಇವರು ಎಂದಿಗೂ ಸುಮ್ಮನಿರುವವರಲ್ಲ. ಅದೇ ರೀತಿ ಹಾಗೆ ಮನಸ್ಸಿಗೆ ನೋವು ಮಾಡಿದವರು ಜೀವನ ಸಂಗಾತಿಯಾದರೂ ಸಹ, ಅಂಥವರ ಎದುರು ಮಿಥುನ ರಾಶಿಯವರು ಬಗ್ಗುವುದಿಲ್ಲ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಕೋಪ ಹೆಚ್ಚು. ಗಂಭೀರ ಸ್ವಭಾವದವರು. ಇವರು ಸಂಬಂಧಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ಆದರೆ ಇವರಿಗೆ ಅಹಂ ಹೆಚ್ಚು. ಅದೇ ಅಹಂ ಸಂಬಂಧಗಳನ್ನು ಸಹ ಕಡಿದು ಹಾಕುವ ಸಾಧ್ಯತೆ ಹೆಚ್ಚು.
ಸಿಂಹ ರಾಶಿ: ನಾಯಕತ್ವ ಸ್ವಭಾವವುಳ್ಳ ಸಿಂಹ ರಾಶಿಯವರು ಅಹಂ ಇರುವವರಾಾಗಿರುತ್ತಾರೆ. ಎಲ್ಲದರಲ್ಲೂ ತಾವೇ ಮುಂದಿರಬೇಕು ಎಂದುಕ“ಳ್ಳುತ್ತಾರೆ. ಆದರೆ ಅವರು ಅಂದುಕ“ಂಡಿದ್ದನ್ನು ಸಾಧಿಸಲು ಸಾಧ್ಯವಾಗದಿದ್ದಲ್ಲಿ, ಅವರದನ್ನು ಸಹಿಸುವುದಿಲ್ಲ.