Thursday, August 28, 2025

Latest Posts

ದಲಿತರಿಗೆ ಊರೇ ಕಟ್ಟಿಕೊಟ್ಟೆ ನಾನು ದಲಿತ ವಿರೋಧಿ ಅಲ್ಲ – ಜಿಟಿಡಿ

- Advertisement -

ಜೆಡಿಎಸ್‌ ಹಿರಿಯ ಶಾಸಕ ಜಿ.ಟಿ. ದೇವೇಗೌಡರು, ದಲಿತರ ವಿರುದ್ದ ವಿರೋಧಿ ಹೇಳಿಕೆ ನೀಡಿದ್ದಾರೆಂದು ಅವರ ವಿರುದ್ದ ದಲಿತ ಸಂಘಗಳು ಮೈಸೂರಿನಲ್ಲಿ ಪ್ರತಿಭಟನೆ ಮಾಡಿದ್ದವು. ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಇದೀಗ ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಜಿಟಿಡಿ, ವಿಧಾಮಸಭೆ ಅಧಿವೇಶನದಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಮಾತನಾಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಲಾಗಿದೆ. ನಾನು ದಲಿತವಿರೋಧಿಯಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಸಹಕಾರ ಸಂಘಗಳಿಗೆ ಸರ್ಕಾರದಿಂದ ಅನುದಾನ ಬರುವುದಿಲ್ಲ. ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ವುಧಾನಸಭೆಯಲ್ಲಿ ಮಾತನಾಡಲಾಗಿತ್ತು. ಅದನ್ನು, ಸಲಿತ ವಿರೋಧಿ ಎಂದು ಬಿಂಬಿಸಲಾಗಿದೆ. ಆದರೆ, ದಲಿತ ವಿರೋಧಿಯಲ್ಲ. ಸಹಕಾರ ಕ್ಷೇತ್ರದಲ್ಲಿ 1970 ರಿಂದಲೂ ಕೆಲಸ ಮಾಡಿದ್ದೇನೆ. ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಜಿಟಿ ದೇವೇಗೌಡ ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದೇನೆ. ವಿಧಾನಸಭೆ ಅಧಿವೇಶನದಲ್ಲಿ ನಾನು ಹೇಳಿದ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಸರ್ಕಾರದ ಹಸ್ತಕ್ಷೇಪ ಸಹಕಾರ ಕ್ಷೇತ್ರದಲ್ಲಿ ಹೆಚ್ಚಾಗಿದೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಾನು ದಲಿತ ವಿರೋಧಿಯಲ್ಲ. ಸಹಕಾರ ಸಂಘಗಳಿಗೆ ಸರ್ಕಾರದಿಂದ ಅನುದಾನ ಬರುವುದಿಲ್ಲ. ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ, ಈ ರೀತಿ ಮಾಡುವ ಬದಲು ಸಹಕಾರ ಕ್ಷೇತ್ರವನ್ನು ಮುಚ್ಚಿಬಿಡಿ ಎಂದು ಹೇಳಿದ್ದೆ. ದಲಿತರು ಬಂದರೆ ಮುಚ್ಚಬೇಕಾ ಅಂತ ಶಿವರಾಜ್ ತಂಗಡಗಿ ಹೇಳಿದ್ರು.

ನಾನು ನಮ್ಮ ತಂದೆ ಈ ಹಿಂದೆ ದಲಿತರಿಗೆ ಒಂದು ಊರನ್ನೇ ಕಟ್ಟಿಕೊಟ್ಟಿದ್ದೇವೆ . ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿಸಿದ್ದೇನೆ. ನಾನು ಯಾವತ್ತೂ ಜಾತಿ ಮಾಡಿಲ್ಲ.ದಲಿತರನ್ನು ಅಗೌರವದಿಂದ ಕಂಡಿಲ್ಲ.ಆಡಳಿತ ಪಕ್ಷ ತಂದಿದ್ದ ಕಾಯ್ದೆಯನ್ನು ವಿರೋಧ ಮಾಡಿದ್ದೇನೆ.ಅದನ್ನೇ ದಲಿತರ ವಿರೋಧಿ ಎಂಬ ರೀತಿ ಬಿಂಬಿಸಿದ್ದಾರೆ ಎಂದು ಶಾಸಕ ಜಿ ಟಿ ದೇವೇಗೌಡ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss