Wednesday, October 15, 2025

Latest Posts

ಬೀದಿಗೆ ಬಂತು ಬಿಗ್‌ಬಾಸ್‌ ರಂಜಿತ್ ಮನೆ ರಾಮಾಯಣ

- Advertisement -

ಬಿಗ್ ಬಾಸ್‌ ಮನೆಯಲ್ಲಿ ರಂಜಿತ್, ಲಾಯರ್‌ ಜಗದೀಶ್ ಮಧ್ಯೆ ಗಲಾಟೆ ನಡೆದು, ಇಬ್ಬರೂ ಶೋನಿಂದ ಔಟ್ ಆದರು. ಬಿಗ್‌ಬಾಸ್‌ ಖ್ಯಾತಿಯ ನಟ ರಂಜಿತ್‌, ಕೌಟುಂಬಿಕ ಗಲಾಟೆಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ರಂಜಿತ್ ಹಾಗೂ ಅಕ್ಕನ ಆಸ್ತಿ ಜಗಳ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ರಂಜಿತ್‌ ಭಾವ ಜಗದೀಶ್‌, ಜೀವ ಬೆದರಿಕೆ ಆರೋಪದಡಿ ದೂರು ದಾಖಲಿಸಿದ್ದಾರೆ.

2018ರಿಂದ ಅಮೃತಹಳ್ಳಿಯ ಫ್ಲಾಟ್‌ನಲ್ಲಿ, ರಂಜಿತ್‌ ಅಕ್ಕ ಮತ್ತು ಭಾವ ವಾಸಿಸುತ್ತಿದ್ರು. 2025ರಿಂದ ಅಕ್ಕ-ಭಾವನ ಜೊತೆ ರಂಜಿತ್‌, ಇದೇ ಫ್ಲಾಟ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಇದೀಗ ಮನೆ ನಂದು ಅಂತಾ ಹೇಳಿ, ಅಕ್ಕ-ತಮ್ಮನ ನಡುವೆ ಗಲಾಟೆ ಶುರುವಾಗಿದೆ.

ಫ್ಲಾಟ್‌ನಲ್ಲಿ ಇಬ್ಬರಿಗೂ ಸಮಾನ ಪಾಲು ಬೇಕೆಂದು ವಾದಿಸಿ, ಅಕ್ಕ ಮತ್ತು ರಂಜಿತ್‌ ನಡುವೆ ಜಗಳ ಶುರುವಾಗಿದೆ. ಅಕ್ಕ-ತಮ್ಮ ಇಬ್ಬರೂ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಇದೇ ವಿಚಾರಕ್ಕೆ ರಂಜಿತ್‌ ಅಕ್ಕ ರಶ್ಮಿ ಮತ್ತು ರಂಜಿತ್‌ ಅವರ ಪತ್ನಿ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಹಲ್ಲೆ ನಡೆಸಿದ್ದಾರೆಂಬ ಆರೋಪಗಳಿವೆ.

ಈ ಫ್ಲಾಟ್‌ ರಶ್ಮಿ ಅವರ ಹೆಸರಲ್ಲಿದೆ. ತಮ್ಮ ಮತ್ತು ಆಕೆಯ ಪತ್ನಿ ಫ್ಲಾಟ್‌ ಬಿಟ್ಟು ಹೋಗದ್ದನ್ನ ವಿರೋಧಿಸಿದ್ದಾರೆ. ಆದ್ರೆ ಫ್ಲಾಟ್‌ಗೆ ನಾನೂ ಹಣ ಹಾಕಿದ್ದಾಗಿ ರಂಜಿತ್‌ ಹೇಳ್ತಿದ್ದಾರೆ. ಜೊತೆಗೆ ಇದೇ ಮನೆಯಲ್ಲಿ ಉಳಿಯುವುದಾಗಿ ಹೇಳಿದ್ದಾರೆ. ಆದ್ರೆ, ಅಕ್ಕ ರಶ್ನಿ, ಮನೆ ಖಾಲಿ ಮಾಡಿ, ಇದು ನನ್ನ ಫ್ಲಾಟ್‌ ಎಂದು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ಜೋರಾಗಿದೆ.

ಸದ್ಯ, ಅಮೃತಹಳ್ಳಿ ಠಾಣೆಯಲ್ಲಿ ಇಬ್ಬರ ಹೇಳಿಕೆಗಳನ್ನ ದಾಖಲಿಸಿಕೊಳ್ಳಲಾಗಿದೆ. ಓನರ್‌ಶಿಪ್‌ ವಿಚಾರವನ್ನು ಕೋರ್ಟಲ್ಲಿ ಬಗೆಹರಿಸಿಕೊಳ್ಳಿ ಅಂತಾ ಪೊಲೀಸರು ಸಲಹೆ ಕೊಟ್ಟಿದ್ದಾರಂತೆ.

- Advertisement -

Latest Posts

Don't Miss