Sandalwood News: ಸಿನಿಮಾ ಇಂಡಸ್ಟ್ರಿಯಲ್ಲಿ ತಾಾರತಮ್ಯ ಇದೆಯಾ..? ಇದನ್ನು ನೀವು ಅನುಭವಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಅನಿತಾ ಭಟ್, ತಾರತಮ್ಯ ಎಲ್ಲೆಡೆ ಇದೆ ಎಂದಿದ್ದಾರೆ.
ತಾರತಮ್ಯ ಎಲ್ಲ ಕಡೆಯೂ ಇದೆ. ಬರೀ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ. ಉದಾಹರಣೆಗೆ ನಾನೇ ಆ ತಾರತಮ್ಯವನ್ನು ಅನುಭವಿಸಿದ್ದೇನೆ. ನಮ್ಮ ಜೊತೆ ಕೆಲಸ ಮಾಡುವ ಹಲವರಿಗೆ ಕ್ಯಾರೆವ್ಯಾನ್ ಕೊಡಲಾಗುತ್ತಿತ್ತು. ಆದರೆ ನಮಗೆ ಕೊಡುತ್ತಿರಲಿಲ್ಲ. ನಾವು ಕೇಳಿದಾಗ, ಬೇಡಿಕೆ ಇಟ್ಟಾಗ ಮಾತ್ರ, ನಮಗೆ ಬೇಕಾಗಿದ್ದು ಸಿಗುತ್ತದೆ. ಆದರೆ ಅವರಾಗಿಯೇ ನಮಗೆ ಎಲ್ಲ ಸೌವಲತ್ತು ಒದಗಿಸುತ್ತಾರೆ ಅನ್ನೋದು ಸುಳ್ಳು ಅಂತಾ ಅನಿತಾ ಹೇಳಿದ್ದಾರೆ.
ಇನ್ನು ಸಂಭಾವನೆಯಲ್ಲಿ ತಾರತಮ್ ಇರುವ ಬಗ್ಗೆ ಮಾತನಾಡಿರುವ ಅನಿತಾ, ನಾನು ನಿರ್ಮಾಪಕಿಯಾದ ಬಳಿ ಅರಿತ ವಿಷಯವೇನೆಂದರೆ, ಯಾರು ಹೆಚ್ಚು ಲಾಭ ತರುತ್ತಾರೋ, ಥಿಯೇಟರ್ ಕಡೆಗೆ ವೀಕ್ಷಕರನ್ನು ಕರೆತರುತ್ತಾರೋ, ಅಂಥವರಿಗೆ ಯಾವಾಗಲೂ ಸಂಭಾವನೆ ಹೆಚ್ಚು ನೀಡಲಾಗುತ್ತದೆ. ನಟಿಯರಿಗೆ ಸಂಬಳ ಕಡಿಮೆ, ನಟರಿಗೆ ಸಂಬಳ ಹೆಚ್ಚು ಅನ್ನೋದು ಕೆಲವು ಕಡೆ ಸುಳ್ಳಾಗಬಹುದು. ಏಕೆಂದರೆ, ಪದ್ಮಾವತ್ ಸಿನಿಮಾದಲ್ಲಿ ದೀಪಿಕಾಗೆ ಹೆಚ್ಚು ಸಂಭಾವನೆ ಇತ್ತು. ಅದೇ ಅವರ ಗಂಡ ರಣವೀರ್ ಸಿಂಗ್ ಅವರಿಗೆ ಕಡಿಮೆ ಸಂಭಾವನೆ ಇತ್ತು. ಇದೇ ಉದಾಹರಣೆಯಾಗಿದೆ ಎಂದಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

