Friday, December 27, 2024

Latest Posts

ಮಂಚದ ಮೇಲೆ ಇಂಥ ವಸ್ತುಗಳನ್ನಿಡಬೇಡಿ, ಇಂಥ ತಪ್ಪು ಮಾಡಬೇಡಿ..!

- Advertisement -

ಮಂಚದ ಮೇಲೆ ಕೆಲ ವಸ್ತುಗಳನ್ನಿಟ್ಟರೆ, ಕೆಲ ತಪ್ಪುಗಳನ್ನ ಮಾಡಿದ್ರೆ ಮನೆಗೆ ದರಿದ್ರ ಉಂಟಾಗುತ್ತದೆ. ಯಾವುದು ಆ ವಸ್ತು, ಯಾವ ತಪ್ಪುಗಳನ್ನ ನಾವು ಮಾಡಬಾರದು ಅನ್ನೋದನ್ನ ಹೇಳ್ತೀವಿ.

ಸ್ನಾನ ಮಾಡಿ ಬಂದ ಬಳಿಕ ಮೈ ಒರೆಸಿಕೊಂಡ ಟವಲ್‌ನ್ನ ಮಂಚದ ಮೇಲಿಟ್ಟರೆ, ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಟವೆಲನ್ನ ಆಗಲಿ ಹಸಿ ಬಟ್ಟೆಯನ್ನಾಗಲಿ ಮಂಚದ ಮೇಲೆ ಇರಿಸಕೂಡದು.

ಮಂಚದ ಮೇಲೆ ಕೂತು ತಲೆ ಬಾಚಿಕೊಳ್ಳಬಾರದು. ಅದರಲ್ಲೂ ಮನೆಯ ಒಳಗೆ ತಲೆ ಬಾಚಿಕೊಳ್ಳಲೇಬಾರದು. ಹೊರಗೆ ನಿಂತು ತಲೆ ಬಾಚಿಕೊಂಡು, ಉದುರಿದ ಕೂದಲನ್ನ ಡಸ್ಟ್‌ಬಿನ್‌ನಲ್ಲಿ ಹಾಕಿಯೇ ಒಳಗೆ ಬರಬೇಕು. ಇಲ್ಲವಾದಲ್ಲಿ ಮನೆಯಲ್ಲೆಲ್ಲಾ ಕೂದಲು ಹರಡಿ, ದರಿದ್ರ ತಗಲುತ್ತದೆ.

ಇನ್ನು ಕೆಲ ವಿದ್ಯಾರ್ಥಿಗಳು ಕಂಫರ್ಟೇಬಲ್ ಆಗಿರುತ್ತೆ ಅಂತಾ ಮಂಚದ ಮೇಲೆ ಕುಳಿತು ಪುಸ್ತಕ ಓದುತ್ತಾರೆ. ಆದ್ರೆ ಮಂಚದ ಮೇಲೆ ಕುಳಿತು ವಿದ್ಯಾಭ್ಯಾಸ ಮಾಡುವುದರಿಂದ ಓದಿದ ಯಾವುದೂ ತಲೆಗೆ ಹೋಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ನೆಲದ ಮೇಲೆ ಕೂತು ಓದುವುದು ಒಳಿತು.

ಇನ್ನು ಚಿನ್ನ ಬೆಳ್ಳಿಯನ್ನ ಅಥವಾ ದುಡ್ಡನ್ನ ಬೆಡ್‌ ಮೇಲಿರಿಸಕೂಡದು. ಅಥವಾ ಬೆಡ್ ಅಕ್ಕಪಕ್ಕದಲ್ಲಿ ಕೆಲ ವಸ್ತುಗಳನ್ನ ಇಡಲು ಇರುವ ಜಾಗಗಳಲ್ಲಿ ಚಿನ್ನ ಬೆಳ್ಳಿ ಅಥವಾ ದುಡ್ಡನ್ನ ಇರಿಸಕೂಡದು. ಇದರಿಂದ ಧನನಷ್ಟ ಉಂಟಾಗುತ್ತದೆ.

ಇನ್ನು ಕೊನೆಯದಾಗಿ ಮಂಚದ ಮೇಲೆ ಕುಳಿತು ಊಟ ಮಾಡಕೂಡದು. ಹೀಗೆ ಮಾಡಿದ್ದಲ್ಲಿ, ತಿಂದ ಅನ್ನ ಮೈಗೆ ಹತ್ತುವುದಿಲ್ಲ. ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911

- Advertisement -

Latest Posts

Don't Miss