Chanakya Neeti: ನೀವು ಉದ್ಯೋಗಸ್ಥರಾಗಿದ್ದು, ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕು ಅಂದ್ರೆ ನೀವು ಕೆಲ ವಿಷಯಗಳನ್ನು ತಿಳಿದಿರಬೇಕು. ಬರೀ ಕೆಲಸ ಮಾಡಲು ಬಂದರೆ ಸಾಕಾಗದು. ನೀವು ಆಫೀಸಿನ ವಾತಾವರಣ, ಜನರ ಮನಸ್ಥಿತಿ, ಕೆಲಸದಲ್ಲಿ ಅಭಿವೃದ್ಧಿ ಮಾಡುವ ಬಗ್ಗೆಯೂ ಗಮನ ಹರಿಸಬೇಕು. ಹಾಗಾದ್ರೆ ಈ ಬಗ್ಗೆ ಚಾಣಕ್ಯರು ಏನು ಹೇಳಿದ್ದಾರೆಂದು ತಿಳಿಯೋಣ ಬನ್ನಿ..
ಎಲ್ಲರನ್ನು ನಂಬಬೇಡಿ: ನೀವು ಕೆಲಸ ಮಾಡುವ ಜಾಗದಲ್ಲಿ ಎಲ್ಲರನ್ನೂ ನಂಬಬೇಡಿ. ಏಕೆಂದರೆ, ಕೆಲವರು ನಿಮ್ಮ ಮುಂದೆ ಭಾರೀ ಚಂದದಲ್ಲಿ ಮಾತನಾಡುತ್ತಾರೆ. ನಂಬಿಕಸ್ಥರಂತೆ ಇರುತ್ತಾರೆ. ಆದರೆ ನಿಮ್ಮ ಹಿಂದಿನಿಂದ ಬೇಡದ ರೀತಿಯಲ್ಲಿ ಮಾತನಾಡುತ್ತಾರೆ. ನಿಮ್ಮ ಹೆಸರು ಕೆಡಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ಯಾರನ್ನೂ ನಂಬಿ ನಿಮ್ಮ ಮನಸ್ಸಿನ ಮಾತನ್ನೆಲ್ಲ ಹೇಳಬೇಡಿ. ಕೆಲಸದ ಮಾತನ್ನು ಮಾತ್ರ ಮಾತನಾಡಿ.
ಅನಗತ್ಯ ವಾದ ಮಾಡಬೇಡಿ: ಆಫೀಸಿನಲ್ಲಿ ಯಾವುದಾಾದರೂ ವಿಷಯಕ್ಕೆ ನಿಮ್ಮ ಸೀನಿಯರ್ಸ್ ನಿಮ್ಮ ಬಳಿ ವಾದ ಮಾಡಲು, ನೀವು ಜಗಳ ಮಾಡಲು ಪ್ರೇರೇಪಿಸುವಂತೆ ಮಾಡಬಹುದು. ಅಂಥ ಸಂದರ್ಭದಲ್ಲಿ ನೀವು ತಾಳ್ಮೆಯಿಂದ ಇರುವುದು ತುಂಬಾ ಮುಖ್ಯ. ತಾಳ್ಮೆ ಮೀರಿದರೆ, ಅದನ್ನೇ ನೆಪವಾಗಿರಿಸಿ, ನಿಮ್ಮ ಕೆಲಸಕ್ಕೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ. ಹಾಗಾಗಿ ಅನಗತ್ಯ ವಾದ ಬೇಡಾ.
ಕೆಲಸದ ಕಡೆ ಹೆಚ್ಚು ಗಮನ ಹರಿಸಿ: ನೀವು ಆಫೀಸಿನಲ್ಲಿ ಕೆಲಸದ ಬಗ್ಗೆ ಬಿಟ್ಟರೆ ಬೇರೆ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಬೇಡಿ. ನಿಮ್ಮ ಗಮನವೆಲ್ಲ ಕೆಲಸದ ಮೇಲೆ ಇದ್ದಷ್ಟು, ನಿಮ್ಮ ಅಭಿವೃದ್ಧಿಯಾಗುತ್ತದೆ. ಅಲ್ಲದೇ ಬೇರೆಯವರು ಬಂದು ನಿಮ್ಮ ಬಳಿ ಭಾವನಾತ್ಮಕವಾಗಿ ಮಾತನಾಡಿ, ಅವರ ಕೆಲಸ ಮಾಡಿಸಿಕ“ಳ್ಳಲು ಪ್ರಯತ್ನಿಸಬಹುದು. ಅಂಥ ಸಮಯದಲ್ಲಿ ಭಾವನಾತ್ಮಕವಾಗಿ ಯೋಚಿಸದೇ, ನಿಮ್ಮ ಮನಸ್ಸಿನ ಮಾತು ಕೇಳಿ, ಬುದ್ಧಿ ಉಪಯೋಗಿಸಿ, ಪ್ರತಿಕ್ರಿಯಿಸುವುದು ತುಂಬಾ ಮುಖ್ಯವಾಗಿರುತ್ತದೆ.
ನಿಮ್ಮ ಪರಿಶ್ರಮ ತೋರಿಸಿ: ನಾವು ಮಾಡಿದ ಕೆಲಸವನ್ನು ನಾವು ಎಲ್ಲರೆದುರು ತೋರಿಸಬೇಕು. ಇಲ್ಲದಿದ್ದಲ್ಲಿ, ನಿಮ್ಮ ಕೆಲಸದ ಕ್ರೆಡಿಟ್ ಬೇರೆಯವರು ತೆಗೆದುಕ“ಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀವು ಮಾಡಿದ ಕೆಲಸದ ಬಗ್ಗೆ ನೀವು ಹೇಳಿಕ“ಳ್ಳುವುದರಲ್ಲಿ ತಪ್ಪಿಲ್ಲ.
ಮಾತನಾಡಲು ಹಿಂಜರಿಯಬೇಡಿ: ಆಫೀಸಿನಲ್ಲಿ ಕೆಲಸದ ಬಗ್ಗೆ ಏನೇ ಮಾತನಾಡುವುದಿದ್ದರೂ ಸರಿಯಾದ ರೀತಿಯಲ್ಲಿ ಹೆದರಿಕೆ ಇಲ್ಲದೇ, ಹಿಂಜರಿಕೆ ಇಲ್ಲದೇ ಮಾತನಾಡಿ. ಯಾರು ಆತ್ಮ ವಿಶ್ವಾಸದಿಂದ ಇರುತ್ತಾರೋ, ಅವರು ಜೀವನದಲ್ಲಿ ಬೇಗ ಯಶಸ್ವಿಯಾಗುತ್ತಾರೆ.




