Life Lesson: ಹಿಂದಿನ ಕಾಲದಲ್ಲಿ ತಂದೆ ತಾಯಿ ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದರೆಂದರೆ, ತಂದೆ ಖಳನಾಯಕ ಎನ್ನಿಸುತ್ತಿದ್ದ. ತಾಯಿ ಕರುಣಾಮಯಿ ಆಗಿದ್ದಳು. ಹಾಗಿದ್ದ ಕಾರಣಕ್ಕೆ, ಮಿಲ್ಲೇನಿಯಲ್ಸ್ ಅಂದ್ರೆ 80ರಿಂದ 90ರ ದಶಕದ ಮಕ್ಕಳು ಸ್ವಲ್ಪ ಶಿಸ್ತಿನಿಂದ ಇದ್ದಾರೆ. ಆದರೆ ಇಂದಿನ ಕಾಲದ ಮಕ್ಕಳಿಗೆ ತಂದೆ ತಾಯಿ ಇಬ್ಬರೂ ಅತೀಯಾದ ಪ್ರೀತಿ ಮಾಡಿ, ಸಲುಗೆ ನೀಡಿ ಬೆಳೆಸುತ್ತಿದ್ದಾರೆ. ಆದರೆ ಮಕ್ಕಳ ತಜ್ಞರು ಹೇಳುವುದೇನೆಂದರೆ, ಮಕ್ಕಳನ್ನು ಬೆಳೆಸುವಾಗ ನಾವು ಕೆಲ ರೂಲ್ಸ್ ಫಾಲೋ ಮಾಡಬೇಕು. ಹಾಗಾದ್ರೆ ಯಾವುದು ಆ ರೂಲ್ಸ್ ಅಂತಾ ತಿಳಿಯೋಣ ಬನ್ನಿ..
ರೂಲ್ ನಂಬರ್ 1: ಮಕ್ಕಳು ಕೇಳಿದ್ದನ್ನು ಸುಲಭವಾಗಿ ನೀಡಬೇಡಿ: ಮಕ್ಕಳಿಗೆ ದುಡ್ಡಿನ ಬೆಲೆ, ವಸ್ತುವಿನ ಬೆಲೆ, ಹಸಿವಿನ ಬೆಲೆ, ಬಡತನದ ಬೆಲೆ ತಿಳಿಯಬೇಕು ಅಂದ್ರೆ ಮಕ್ಕಳು ಕೇಳಿದ್ದನ್ನು ತಕ್ಷಣ ತಂಡು ಕ“ಡಬೇಡಿ. ಇಂದಿನ ಕಾಲದ ಪೋಷಕರು ತಾವು ಬಾಲ್ಯದಲ್ಲಿ ಬೇಕಾದ್ದನ್ನೆಲ್ಲ ಪಡೆಯಲಾಾಗಲಿಲ್ಲ. ಹಾಗಾಗಿ ನಮ್ಮ ಮಕ್ಕಳಿಗಾದರೂ ನಾವು ಬೇಕಾದ್ದನ್ನು ನೀಡೋಣವೆಂಬ ಮನಸ್ಥಿತಿ ಇದೆ. ನೀವು ನಿಮ್ಮ ಮಕ್ಕಳಿಗೆ ಅವಶ್ಯಕತೆ ಇರುವುದೆಲ್ಲವನ್ನೂ ನೀಡಿ. ಆದರೆ ಅವರು ಕೇಳಿದ್ದೆಲ್ಲವನ್ನಲ್ಲ. ಇದರಿಂದ ಅವರಿಗೆ ಎಂದಿಗೂ ಹಣ, ಬಡತನ, ಅಪ್ಪ-ಅಮ್ಮ, ಕಷ್ಟದ ಬೆಲೆ ತಿಳಿಯುವುದಿಲ್ಲ.
ರೂಲ್ ನಂಬರ್ 2: ಮಕ್ಕಳ ಮುಂದೆ ನಿಮ್ಮ ಬಿಹೇವಿಯರ್ ಉತ್ತಮವಾಗಿರಲಿ. ಮಕ್ಕಳು ಹೇಳಿದ್ದನ್ನು ಕೇಳುವುದಿಲ್ಲ. ಅಥವಾ ಹೇಳಿದ್ದನ್ನು ಮಾಡುವುದಿಲ್ಲ. ಬದಲಾಗಿ ನಮ್ಮನ್ನು ನೋಡಿ ಬೆಳೆಯುತ್ತದೆ. ಹಾಗಾಗಿ ನೀವು ನಿಮ್ಮ ನಡುವಳಿಕೆಯನ್ನು ಉತ್ತಮವಾಗಿಸಿಕ“ಳ್ಳಬೇಕು. ಬೇಡದ್ದನ್ನು ಮಾತನಾಡುವ ಮುನ್ನ ಯೋಚಿಸಬೇಕು. ಬಾಯಿತಪ್ಪಿ ಕೆಟ್ಟ ಮಾತು ಬಾರದಿರುವ ರೀತಿ ನೋಡಿಕ“ಳ್ಳಬೇಕು. ಇಲ್ಲವಾದಲ್ಲಿ ಮಗು ಕೂಡ ಅದೇ ರೀತಿ ಮಾತನಾಡಲು ಮತ್ತು ನಡೆದುಕ“ಳ್ಳಲು ಶುರು ಮಾಡುತ್ತದೆ. ಹಾಗಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಅಂದ್ರೆ ಪೋಷಕರು ಉತ್ತಮ ನಡುವಳಿಕೆಯಿಂದಿರುವುದು ಮುಖ್ಯವಾಗಿರುತ್ತದೆ.
ರೂಲ್ ನಂಬರ್ 3: ನಿಮ್ಮ ಮಕ್ಕಳನ್ನು ಇತರ ಮಕ್ಕಳ ಜತೆ ಕಂಪೇರ್ ಮಾಡಬೇಡಿ. ನೋಡು ಅವನು ಎಷ್ಟು ಚೆನ್ನಾಗಿ ಓದುತ್ತಾನೆ. ನೋಡು ಅವಳು ಎಷ್ಟು ಜಾಣೆ ಇದ್ದಾಳೆ. ನೀನು ಇದಿಯಾ, ಕೆಲಸಕ್ಕೆ ಬಾರದವ. ಹೀಗೆ ಕೆಲ ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳ ಜತೆ ಕಂಪೇರ್ ಮಾಡುತ್ತಾರೆ. ಅಂದ್ರೆ ಹೋಲಿಸಿ ಮಾತನಾಡುವುದು. ಹೀಗೆ ಮಾಡಿದಾಗ ನಿಮ್ಮ ಮಕ್ಕಳು ಅದನ್ನೇ ಚಾಲೆಂಜ್ ಆಗಿ ತೆಗೆದುಕ“ಳ್ಳುತ್ತಾರೆ ಅನ್ನೋದು ನಿಮ್ಮ ಭ್ರಮೆಯಾಗಿರಬಹುದು. ಆದರೆ ಇದು ಕೆಟ್ಟ ಮತ್ತು ಮೂರ್ಖತನದ ನಡುವಳಿಕೆ. ನಿಮ್ಮ ಮಕ್ಕಳಿಗೆ ತಮ್ಮ ಬಗ್ಗೆಯೇ ಕೀಳು ಭಾವನೆ ಬರುತ್ತದೆ. ಆಗ ನಿಮ್ಮ ಮಗು ಎಂದಿಗೂ ಮುಂದೆ ಬಾರಲು ಸಾಧ್ಯವಿಲ್ಲ.

