Thursday, November 13, 2025

Latest Posts

ಈ 5 ಸಮಯದಲ್ಲಿ ಬೈಯ್ಯುವುದರಿಂದ ಮಕ್ಕಳ ಮಾನಸಿಕ ನೆಮ್ಮದಿ ಹಾಳಾಗುತ್ತದೆ

- Advertisement -

Life lesson: ಚಿಕ್ಕ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಅವರು ನೋಡಲು ಮತ್ತು ಅವರಿರುವ ರೀತಿ ನೋಡಿದ್ರೆ ತುಂಬಾ ಜೋರು ಅಂತಾ ಅನ್ನಿಸಿದರೂ, ಅವರು ಸೂಕ್ಷ್ಮ ಸ್ವಭಾವದವರು ಆಗಿರುತ್ತಾರೆ. ಹಾಗಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಪೋಷಕರು 5 ಸಮಯದಲ್ಲಿ ಬೈಯ್ಯಬಾರದು. ಅದು ಯಾವ ಸಮಯ ಅಂತಾ ತಿಳಿಯೋಣ.

1. ಬೆಳಿಗ್ಗೆ ಎದ್ದ ತಕ್ಷಣ: ಬೆಳಿಗ್ಗೆ ಎದ್ದ ತಕ್ಷಣ ಮಕ್ಕಳು ನಿದ್ದೆಗಣ್ಣಿನಲ್ಲಿರುತ್ತಾರೆ. ಏನಾಗುತ್ತಿದೆ ಎಂದು ತಿಳಿಯಲು ಎದ್ದು ಸ್ವಲ್ಪ ಸಮಯವಾದ್ರೂ ಬೇಕು. ಹಾಗಾಗಿ ಮಕ್ಕಳನ್ನು ಎಬ್ಬಿಸುವಾಗ, ಪ್ರೀತಿಯಿಂದ ಏಳಿಸಿ. 2 ನಿಮಿಷ ಮಗುವನ್ನು ತಬ್ಬಿ ಮಲಗಿ, ಮುತ್ತು ನೀಡಿ, ಮುದ್ದು ಮಾಡಿ ಎಬ್ಬಿಸಿ. ಆಗ ಮಗು ಖುಷಿ ಖುಷಿಯಾಗಿ ಏಳುತ್ತದೆ. ಮಗು ಅಳುತ್ತ ಎದ್ದರೆ, ಅದರ ಮನಸ್ಸಿನಲ್ಲಿ ಇಡೀ ದಿನ ಬೆಳಿಗ್ಗೆ ಅಮ್ಮ ಅಥವಾ ಅಪ್ಪ ಬೈದಿದ್ದೇ ನೆನಪಿನಲ್ಲಿರುತ್ತದೆ. ಮತ್ತು ಆ ವಿಚಾರ ಆ ಮಗು ಶಾಲೆಯಲ್ಲಿ ಆ್ಯಕ್ಟೀವ್ ಆಗಿರದಂತೆ ಮಾಡುತ್ತದೆ.

2. ಶಾಲೆಗೆ ಹೋಗುವ ವೇಳೆಗೆ: ಶಾಲೆಗೆ ಹೋಗುವ ವೇಳೆ ಮಗು ತನಗೆ ತಂದೆ ತಾಯಿ ಉತ್ತಮವಾಗಿ ಬೀಳ್ಕೋಡಬೇಕು ಎಂದು ಬಯಸುತ್ತದೆ. ನಿಮ್ಮಿಂತ ಸಿಹಿಯಾದ ಮಾತನ್ನು ನಿರೀಕ್ಷಿಸುತ್ತದೆ. ನೀವು ಅದರ ಜತೆ ಪ್ರೀತಿಯಿಂದ ಮಾತನಾಡಿ ಕಳುಹಿಸಿದರೆ, ಮಗು ಶಾಲೆಯಲ್ಲೂ ಆ್ಯಕ್ಟೀವ್ ಆಗಿ, ಖುಷಿ ಖುಷಿಯಾಗಿರುತ್ತದೆ.

3. ಶಾಲೆಯಿಂದ ಬಂದ ತಕ್ಷಣ: ಶಾಲೆಯಿಂದ ಬಂದು ಸುಸ್ತಾಗಿರುವ ಮಗು ಬಯಸೋದು, ನಿಮ್ಮ ಅಪ್ಪುಗೆ, ನಿಮ್ಮ ನಗುಮುಖ. ನಮಗೆ ಎಷ್ಟೇ ದುಃಖ ದುಮ್ಮಾನಗಳಿರಲಿ. ಮಕ್ಕಳು ಶಾಲೆಯಿಂದ ಬಂದ ತಕ್ಷಣ ನಗುಮುಖದಿಂದಲೇ ಅವರನ್ನು ಸ್ವಾಗತಿಸಿ.

4. ರಾತ್ರಿ ಮಲಗುವಾಗ: ರಾತ್ರಿ ಮಲಗುವಾಗ ಮಗುವಿನ ಮನಸ್ಸಿಗೆ ಬೇಸರವಾದರೆ, ಬೆಳಿಗ್ಗೆ ಏಳುವಾಗಲೂ ಮಗು ಅದೇ ಮನಸ್ಸಿನಲ್ಲಿರಿಸಿಕ“ಂಡು ಏಳುತ್ತದೆ. ಹಾಗಾಗಿ ಮಗುವಿನ ಮಾನಸಿಕ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ರಾತ್ರಿ ಮಗುವನ್ನು ಪ್ರೀತಿಯಿಂದ ಮಲಗಿಸಿ.

5. ಮಕ್ಕಳು ಯಾವುದೋ ವಿಷಯಕ್ಕೆ ಬೇಸರದಲ್ಲಿದ್ದಾಗ: ಮಕ್ಕಳು ಯಾವುದೋ ವಿಚಾರಕ್ಕೆ ಬೇಸರದಲ್ಲಿದ್ದರೆ, ಅವರಿಗೆ ಬುದ್ಧಿ ಹೇಳಿ. ಆ ವೇಳೆ ಅವರನ್ನು ಮತ್ತೆ ಬೈಯ್ಯುವುದು ತಪ್ಪು. ಮಕ್ಕಳನ್ನು ಇಡೀ ದಿನ ಪ್ರೀತಿಯಿಂದ ನೋಡಿಕ“ಂಡರೆ ಮಕ್ಕಳು ಹಾಳಾಗುವುದಿಲ್ಲವೇ ಅನ್ನೋದು ನಿಮ್ಮ ಪ್ರಶ್ನೆ ಇರಬಹುದು. ಆ ಪ್ರಶ್ನೆಗೆ ಉತ್ತರ, ಮಕ್ಕಳನ್ನು ಪ್ರೀತಿಯಿಂದ ನೋಡಿಕ“ಂಡರೆ ಅವರು ಹಾಳಾಗುವುದಿಲ್ಲ. ಅಗತ್ಯಕ್ಕಿಂತ ಹೆಚ್ಚು ಸಲುಗೆ ನೀಡಿದಾಗ ಅವರು ಹಾಳಾಗೋದು. ಮತ್ತು ಪ್ರೀತಿಗೂ ಸಲುಗೆಗೂ ತುಂಬಾ ವ್ಯತ್ಯಾಸವಿದೆ.

- Advertisement -

Latest Posts

Don't Miss