Sandalwood: ನಿರ್ದೇಶಕರಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಅವರು ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿಯನ್ನು ಸಿನಿಮಾ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಶಿಫಾರಸು ಮಾಡಲು ಪತ್ರ ಕೂಡ ಬರೆದಿದ್ದರು. ಇದಕ್ಕೆ ತೇಜಸ್ವಿ ಅವರು ಹೇಗೆ ಪ್ರತಿಕ್ರಿಯಿಸಿದ್ದರು ಅಂತಾ ಅವರೇ ವಿವರಿಸಿದ್ದಾರೆ ನೋಡಿ.
ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿಯನ್ನು ಚಂದ್ರಶೇಖರ್ ಅವರು ಸಿನಿಮಾ ಮಾಡಬೇಕು ಎಂದುಕ“ಂಡಿದ್ದರು. ಅದಕ್ಕೆ ಶಿಫಾರಸ್ಸಿಗಾಗಿ ಅವರು ತೇಜಸ್ವಿ ಅವರಿಗೆ ಪತ್ರ ಕೂಡ ಬರೆದಿದ್ದರು. ಆಗ ತೇಜಸ್ವಿ ಅವರು ಕೂಡ ಆ ಪತ್ರಕ್ಕೆ ಪ್ರತಿಕ್ರಿಯಿಸಿ 1 ಪತ್ರ ಬರೆದಿದ್ದರು.
ನನ್ನ ಕಾದಂಬರಿಯನ್ನು ಸಿನಿಮಾ ಮಾಡಲು ಶಿಫಾರಸ್ಸೆಲ್ಲ ಏಕೆ ಬೇಕು..? ನನ್ನನ್ನು ಎಷ್ಟು ಬಾರಿ ನೋಡಿದ್ದೀಯ, ಪತ್ರಿಕೆ ಆಫೀಸಿನಲ್ಲಿ ಸಿಗುತ್ತಿಯಾ..? ನೇರವಾಗಿ ಬಂದು ಭೇಟಿಯಾಗು. ಸಿನಿಮಾವನ್ನು ಪ್ರೇಕ್ಷಕರು ಮೆಚ್ಚುವಂತೆ ಮಾಡು. ಕಾದಂಬರಿಗೆ ನೀಡಲು ದುಡ್ಡಿಲ್ಲದಿದ್ದರೆ ಬೇಡ, ಹಾಗೆ ತೆಗೆದುಕ“ಂಡು ಹೋಗು. ಚೌಕಾಶಿ ಎಲ್ಲ ಮಾಡೋದು ಬೇಡ. ಚೌಕಾಶಿ ಎಲ್ಲ ಮಾಡೋದಾದ್ರೆ ಬರೋದು ಬೇಡ ಎಂದು ತುಂಬಾ ಪ್ರಾಕ್ಟಿಕಲ್ ಆಗಿ ಪತ್ರ ಬರೆದಿದ್ದರು ಎಂದು ಚಂದ್ರಶೇಖರ್ ಅವರು ಹಳೆ ನೆನಪನ್ನು ಶೇರ್ ಮಾಡಿದ್ದಾರೆ. ಆದರೆ ಈ ಸಿನಿಮಾ ಮಾಡಲು ಚಂದ್ರಶೇಖರ್ ಅವರಿಗೆ ಸಾಧ್ಯವಾಗಲಿಲ್ಲ. ಯಾಕೆ ಅಂತಾ ನಿರ್ದೇಶಕರೇ ವಿವರಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

