Sandalwood: ನಟಿ ಅರುಣಾ ಬಾಲ್ರಾಜ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಈ ಮುಂಚೆ ಬರೀ ಸಿರಿಯಲ್ನಲ್ಲಿ ನಟನೆ ಮಾಡುತ್ತಿದ್ದ ಅರುಣಾ ಅವರಿಗೆ ಗಜ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ಲೋಕಕ್ಕೆ ಬರುವ ಅವಕಾಶ ಸಿಕ್ಕಿತ್ತು. ಈ ಬಗ್ಗೆ ಅರುಣಾ ಅವರೇ ಮಾತನಾಡಿದ್ದಾರೆ.
2006ರಲ್ಲಿ ಅರುಣಾ ಅವರಿಗೆ ಗಜ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದಕ್ಕೂ ಮುನ್ನ ಅರುಣಾ ಅವರು ಪ್ರೇಮಪಿಶಾಚಿಗಳು, ಪುಣ್ಯಕೋಟಿ ಸೇರಿ 50ಕ್ಕೂ ಹೆಚ್ಚು ಸಿರಿಯಲ್ನಲ್ಲಿ ನಟಿಸಿದ್ದರು. ಇಲ್ಲಿಯವರೆಗೆ ಅರುಣಾ ಅವರು 60ಕ್ಕೂ ಹೆಚ್ಚು ಸಿರಿಯಲ್ನಲ್ಲಿ ನಟಿಸಿದ್ದಾರೆ.
ಸಿನಿಮಾಗೆ ಆಫರ್ ನೀಡಿದಾಗ, ಅರುಣಾ ಅವರು ಮುಂಚೆಯೇ ಮಾಡಲ್ಲವೆಂದು ಹೇಳಿದ್ದರಂತೆ. ಆದರೆ ಬಿಸಿ ಬಿಸಿ ಸಿನಿಮಾದಲ್ಲಿ ಶಂಕರ್ರಾವ್ ಅವರ 3ನೇ ಪತ್ನಿಯಾಗಿ ನಟಿಸಿದರು. ಅದಾದ ಬಳಿಕ ಆಗಾಗ ಅರುಣಾ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಬಳಿಕ ಗಜ ಸಿನಿಮಾದಲ್ಲಿ ಅತ್ತಿಗೆಯ ಪಾತ್ರದಲ್ಲಿ ಅರುಣಾ ನಟಿಸಿದರು. ಆಮೇಲೆ ತಾಯಿಯಾಗಿ ನಟಿಸುವ ಅವಕಾಶ ಹೆಚ್ಚಾಗಿ ಸಿಕ್ಕವು. ಇನ್ನು ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




