Sandalwood: ನಟ ದುನಿಯಾ ವಿಜಿ ಸಂದರ್ಶನದಲ್ಲಿ ಮಾತನಾಡಿದ್ದು, ಕೆಲವು ಸಿನಿಮಾಗಳನ್ನು ಓಟಿಟಿಯಲ್ಲಿ ತೆಗೆದುಕ“ಳ್ಳುತ್ತಿಲ್ಲ. ಹಲವು ಕನ್ನಡ ಸಿನಿಮಾಗಳನ್ನು ದೂರ ಇರಿಸಿದ್ದಾರೆ. ಆದರೆ ಕೆಲವು ರಾಂಗ್ ಸಿನಿಮಾಗಳನ್ನು ಹಾಕಲಾಗಿದೆ. ಈ ಬಗ್ಗೆ ವಿಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ಸ್ಟಾರ್ ನಟರುಗಳು ಈ ಬಗ್ಗೆ ಧ್ವನಿ ಎತ್ತಿದರೆ, ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಗಾಗಿ ಕೆಲವು ಪ್ರಸಿದ್ಧರು ಕೂಡ ಈ ಬಗ್ಗೆ ಮಾತನಾಡಬೇಕಾಗಿದೆ. ಅನ್ಯೋನ್ಯತೆ ಇದ್ದರೂ ಕೂಡ, ಇಂಥ ಸಮಸ್ಯೆ ಬರುತ್ತಿರುವುದು ಬೇಸರದ ಸಂಗತಿ ಎಂದಿದ್ದಾರೆ ದುನಿಯಾ ವಿಜಿ.
ಇನ್ನು ಆಧ್ಯಾತ್ಮದಲ್ಲಿ ನಂಬಿಕೆ ಇರಿಸಿರುವ ವಿಜಿ, ಮನಸ್ಸಿನಲ್ಲಿ ತಳಮಳವಿದ್ದಾಗ, ಯಾರಿಗೂ ಹೇಳದೇ, ಏಕಾಂಗಿಯಾಗಿ ಬೇರೆ ಜಾಗಕ್ಕೆ ಹೋಗಿಬಿಡುತ್ತಾರೆ. ತಮ್ಮ ಜೀವನದ ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕ“ಳ್ಳುತ್ತಾರಂತೆ. ಇಂಥ ಹಲವು ಕುತೂಹಲಕಾರಿ ಮಾಹಿತಿಗಾಗಿ ವೀಡಿಯೋ ನೋಡಿ.




