Sandalwood: ನಟ ಅನಿರುದ್ಧ ಸಂದರ್ಶನದಲ್ಲಿ ಮಾತನಾಡಿದ್ದು, ವಿಷ್ಣುವರ್ಧನ್ ಅವರ ಅಂತ್ಯವಾದಾಗ, ಅವರು ಎಷ್ಟು ಮನನ“ಂದಿದ್ದರು ಅಂತಾ ನೆನಪಿಸಿಕ“ಂಡಿದ್ದಾರೆ.
ಅನಿರುದ್ಧ ಈ ಬಗ್ಗೆ ಮಾತನಾಡಿದ್ದು, ನನಗೆ ಯಾರನ್ನಾದರೂ ಕಳೆದುಕ“ಳ್ಳುವುದು, ಯಾರಿಂದಲಾದರೂ ದೂರಾಗುವುದೆಲ್ಲ ಆಗೋದಿಲ್ಲ. ನಾನು ತುಂಬಾ ಭಾವುಕನಾಗಿಬಿಡುತ್ತೇನೆ. ಅವರನ್ನು ನಾನು ಅಪ್ಪಾಜಿ ಅಂತಲೇ ಕರೆಯುತ್ತಿದ್ದೆ. ಅವರು ತೀರಿಹೋದಾಗ, ನಾನು ತುಂಬಾ ತಿಂಗಳುಗಳ ಕಾಲ ಅತ್ತಿದ್ದೇನೆ. ಎಷ್ಟು ಅತ್ತಿದ್ದೇನೆ ಅನ್ನೋದಕ್ಕೆ ಲೆಕ್ಕವೇ ಇಲ್ಲ. ಅಷ್ಟು ಬಿಕ್ಕಿ ಬಿಕ್ಕಿ ಅತ್ತಿದ್ದೇನೆ ನಾನು ಎಂದು ಅನಿರುದ್ಧ ಹೇಳಿದ್ದಾರೆ.
ಇನ್ನು ಅನಿರುದ್ಧ ಅವರಿಗೆ ಸಿನಿಮಾದಲ್ಲಿ ಅವಕಾಶ ಕಡಿಮೆಯಾದಾಗ ಅಪ್ಪಾಜಿ ಏನು ಹೇಳುತ್ತಿದ್ದರು ಅನ್ನೋ ಪ್ರಶ್ನೆಗೆ ಉತ್ತರಿಸಿದ ಅನಿರುದ್ಧ, ಅವರಿಬ್ಬರೂ ಅದನ್ನು ದಾಟಿಯೇ ಬಂದಿದ್ದು. ಹಾಗಾಗಿ ಅವರು ಬೇಸರ ವ್ಯಕ್ತಪಡಿಸಿಲ್ಲ. ಈ ಕೆಲಸದಲ್ಲಿ ಇದೆಲ್ಲ ಇದ್ದಿದ್ದೇ, ನಿನ್ನ ಪ್ರಯತ್ನ ನೀನು ಮಾಡು ಎಂದು ಅವರಿಬ್ಬರು ಎನಕರೇಜ್ ಮಾಡುತ್ತಿದ್ದರು ಅಂತಾ ಹೇಳಿದ್ದಾರೆ ಅನಿರುದ್ಧ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




