Web Story: ನಾವು ವಿದೇಶಕ್ಕೆ ಹೋಗಿ, ವಿದ್ಯಾಭ್ಯಾಸ ಮಾಡುವ ಮಕ್ಕಳು ಪಾರ್ಟ್ ಟೈಮ್ ಕೆಲಸ ಮಾಡುವುದನ್ನು ನೋಡಿರುತ್ತೇವೆ. ಏಕೆಂದರೆ, ವಿದೇಶದಲ್ಲಿ ಖರ್ಚು ವೆಚ್ಚ ಹೆಚ್ಚಾಗಿರುವ ಕಾರಣ, ಅಲ್ಲಿ ಕೆಲಸ ಮಾಡಿ, ವಿದ್ಯೆ ಕಲಿಯಲು ಅವಕಾಶವಿದೆ. ಆದರೆ ಚೀನಾದಲ್ಲಿ ಹಾಗಲ್ಲ. ಅಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ಬರೀ ಶಾಲೆ-ಕಾಲೇಜಿಗೆ ಹೋಗಬೇಕು. ಅದನ್ನು ಬಿಟ್ಟು ಕೆಲಸ ಮಾಡಿದರೆ, ಅಂಥವರನ್ನು ಜೈಲಿಗೆ ಹಾಕುತ್ತಾರೆ. ಅಥವಾ ಗಡಿಪಾರು ಮಾಡುತ್ತಾರೆ. ಈ ಬಗ್ಗೆ ಚೀನಾದಲ್ಲಿರುವ ಕನ್ನಡಿಗ ಯ್ಯೂಟ್ಯೂಬರ್ ಸಾಹಿಲ್ ಮಾತನಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಾಹಿಲ್, ಚೀನಾದಲ್ಲಿ ಭಾಷೆಗೆ ಹೆಚ್ಚಿನ ಗೌರವ ನೀಡಲಾಗುತ್ತದೆ. ಪ್ರಪಂಚದ ಎಲ್ಲೆಡೆ ಇಂಗ್ಲೀಷ್ ಮಾತನಾಡಿದರೆ, ಜೀವನ ಸಾಗಿಸಬಹುದು. ಆದರೆ ಚೀನಾದಲ್ಲಿ ಇಂಗ್ಲೀಷ್ ಮಾತನಾಡಿದರೆ, ಯಾರೂ ಕೇರ್ ಮಾಡುವುದಿಲ್ಲ. ಅದೇ ನಾವು ಚೀನಿ ಭಾಷೆ ಕಲಿತು ಮಾತನಾಡಿದರೆ, ಅವರು ಫುಲ್ ಖುಷ್ ಆಗಿ, ತಮ್ಮವರೆಂದೇ ಭಾವಿಸುತ್ತಾರೆ ಅಂತಾ ಹೇಳ್ತಾರೆ ಸಾಹಿಲ್.
ಇನ್ನು ನಾವು ಸ್ಟುಡೆಂಟ್ ವಿಸಾ ಪಡೆದು ಚೀನಾ ದೇಶಕ್ಕ ಹೋಗಿದ್ದಲ್ಲಿ, ಅಂಥವರು ಕೆಲಸ ಮಾಡುವಂತಿಲ್ಲ. ಬರೀ ವಿದ್ಯಾಭ್ಯಾಸದ ಕಡೆ ಮಾತ್ರ ಗಮನ ನೀಡಬೇಕು. ಹಾಗೇನಾದರೂ ನಿಯಮ ಉಲ್ಲಂಘಿಸಿದ್ದಲ್ಲಿ, ಜೈಲಿಗೆ ಕಳುಹಿಸುತ್ತಾರೆ ಅಥವಾ ಗಡಿಪಾರು ಮಾಡುತ್ತಾರೆ ಎಂದು ಚೀನಾ ನಿಯಮ ತಿಳಿಸಿದ್ದಾರೆ ಸಾಹಿಲ್. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




