Web News: ಖ್ಯಾತ ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರು ಚೀನಾಗೆ ಹೋಗಿ, ಅದೆಷ್ಟು ಕಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ.
ಏಕೆಂದರೆ ಯಾರೇ ಆಗಲಿ, ಮಧ್ಯಮ ವರ್ಗದವರು ಪರದೇಶಕ್ಕೆ ಹೋಗಿ, ಅಲ್ಲಿ ಜೀವನ ಸಾಗಿಸುವುದು ಸುಲಭದ ವಿಷಯವೇ ಅಲ್ಲ. ಅಲ್ಲಿನ ರೀತಿ ನೀತಿ, ಭಾಷೆ, ವಿದ್ಯಾಭ್ಯಾಸದ ಜವಾಬ್ದಾರಿ ಎಲ್ಲವೂ ಆ ವ್ಯಕ್ತಿಯ ಮೇಲಿರುತ್ತದೆ. ಅದೇ ರೀತಿ ಹಿಂದಿರುಗಿ ಭಾರತಕ್ಕೆ ಹೋಗುವ ಅಂತಾ ಅನ್ನಿಸಿದರೂ, ಅಪ್ಪ ಮಾಡಿದ ಸಾಲ ನೆನೆದು ಸುಮ್ಮನಿರುತ್ತಿದ್ದರು ಸಾಹಿಲ್. ಎಷ್ಟೋ ಸಲ ನಾನು ಕಣ್ಣೀರು ಹಾಕಿದ್ದೇನೆ. ಯಾಕಾದ್ರೂ ಇಲ್ಲಿಗೆ ಬಂದೆ ಅಂತಾ ಹಲವು ಬಾರಿ ಅನ್ನಿಸಿತ್ತು ಅಂತಾ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ ಸಾಹಿಲ್.
ಅಲ್ಲದೇ, ಚೀನಾಕ್ಕೆ ಹೋದಾಗ, ಅಲ್ಲಿ ಕಾಲೇಜಿನಲ್ಲಿ ಮಾತ್ರ ಇಂಗ್ಲೀಷ್ ಮಾತನಾಡಲು ಅವಕಾಶವಿತ್ತು. ಕಾಲೇಜಿಂದ ಆಚೆ ಬಂದಾಗ, ಚೀನಾ ಭಾಷೆಯೇ ಮಾತನಾಡಬೇಕಿತ್ತು. ಚೀನಾ ಭಾಷೆ ಮಾತನಾಡದಿದ್ದಲ್ಲಿ, ಯಾರೂ ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಅಲ್ಲದೇ, ಹಣದ ಸಮಸ್ಯೆ ಇತ್ತು. ಅಪ್ಪ ಪ್ರತೀ ತಿಂಗಳು ಹೇಗೋ ಅಡ್ಜಸ್ಟ್ ಮಾಡಿ 10 ಸಾವಿರ ಕಳುಹಿಸುತ್ತಿದ್ದರು.
ಆಗಲೇ, ನಾನು ಬೇಗ ವಿದ್ಯೆ ಕಲಿತು, ಕೆಲಸ ಮಾಡಿ, ಅಪ್ಪನಿಂದ ಹಣ ಪಡೆಯುವುದನ್ನು ನಿಲ್ಲಿಸಬೇಕು ಎಂದು ನಿರ್ಧರಿಸಿದೆ. ಇದೀಗ ಚೀನಾದಲ್ಲಿ ನನ್ನದೇ ಸ್ವಂತ ಕಂಪನಿ ಇದೆ ಎಂದು ತಮ್ಮ ಸಾಧನೆಯ ಬಗ್ಗೆ ಮಾತನಾಡಿದ್ದಾರೆ ಸಾಹಿಲ್.




