Sandalwood: ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ತಮ್ಮ ಬರ್ತ್‌ಡೇಯನ್ನು ವೃದ್ಧಾಶ್ರಮದಲ್ಲಿ ಆಚರಿಸಿದ್ದಾರೆ. ಉಡುಪಿಯವರಾದ ರಕ್ಷಿತಾ, ಬಿರಿಯಾನಿ ರೆಡಿ ಮಾಡಿಸಿ, ಅದನ್ನು ಕುಂದಾಪುರದ ವೃದ್ಧಾಶ್ರಮಕ್ಕೆ ಹೋಗಿ, ಅಲ್ಲಿ ಎಲ್ಲರಿಗೂ ಬಡಿಸಿ, ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಡಾನ್ಸ್ ಮಾಡಿ, ಎಂಜಾಯ್ ಮಾಡಿ, ತಮ್ಮ ಈ ವರ್ಷದ ಬರ್ತ್‌ಡೇಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಈ ಕಾರಣಕ್ಕೆ ರಕ್ಷಿತಾರ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಿಗ್‌ಬಾಸ್‌ನಲ್ಲಿ ನಾವು ಸರಿಯಾದ ವ್ಯಕ್ತಿಗೆ ಬೆಂಬಲಿಸಿದ್ದೇವೆ. ನಮ್ಮ ಬೆಂಬಲ ವ್ಯರ್ಥವಾಗಲಿಲ್ಲ. ಇದೇ ಬುದ್ಧ ಸದಾ ಇರಲಿ, ದೇವರು ನಿಮಗೆ ಚೆನ್ನಾಗಿಟ್ಟಿರಲಿ ಎಂದು ಜನ ಕಾಮೆಂಟ್ ಮಾಡುವ ಮೂಲಕ ಹರಸಿ ಹಾರೈಸಿದಿದ್ದಾರೆ.
ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧೆ ಮಾಡಿದಾಗ, ಬಂದ ದಿನವೇ ನಾಮಿನೇಟ್ ಆಗಿ ಆಚೆ ಹೋಗಿದ್ದರು. ಈ ಕಾರಣಕ್ಕೆ ಬಿಗ್‌ಬಾಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಜನರ ಈ ಪರಿ ಬೆಂಬಲ ನೋಡಿ, ಬಿಗ್‌ಬಾಸ್ ಕೂಡ ಆಕೆಯನ್ನು ಪುನಃ ಕರೆಸಿತ್ತು. ಬಳಿಕ ರಕ್ಷಿತಾ ಅತ್ಯುತ್ತಮ ಪ್ರದರ್ಶನ ನೀಡಿ, ಗಿಟ್ಟಿಗಿತ್ತಿ ಎನ್ನಿಸಿಕ“ಂಡರು.
ಬಿಗ್‌ಬಾಸ್ ಮುಗಿಯುವ ವೇಳೆಗೆ ರಕ್ಷಿತಾ ಬರೀ ರಾಜ್ಯದ ಜನರ ನೆಚ್ಚಿನ ಮಗುವಾಗುವುದಲ್ಲದೇ, ಬಿಗ್‌ಬಾಸ್ ಸ್ಪರ್ಧಿಗಳಿಗೂ ಅಚ್ಚುಮೆಚ್ಚಾಗಿದ್ದರು. ಕನ್ನಡಿಗರು ಗಿಲ್ಲಿಯ ಜತೆ, ರಕ್ಷಿತಾಗೂ ಹೆಚ್ಚು ವೋಟ್ ಹಾಕಿ, ರನ್ನರ್ ಅಪ್ ಸ್ಥಾನಕ್ಕೇರಿಸಿದ್ದರು. ರಕ್ಷಿತಾ ಕೂಡ ಬಿಗ್‌ಬಾಸ್ ಮುಗಿದ ಬಳಿಕ, ಉತ್ತಮ ಕಾರ್ಯಗಳನ್ನು ಮಾಡಿ, ಗೆಲ್ಲಿಸಿದ್ದು ವ್ಯರ್ಥವಾಗಲಿಲ್ಲ ಅನ್ನೋದನ್ನು ಸಾಬೀತು ಮಾಡುತ್ತಿದ್ದಾರೆ.




