News: ಧುರಂಧರ್- 2 ದಿ ರಿವೇಂಜ್ ಸಿನಿಮಾ ಭಾರತದಲ್ಲಿ ಸಖತ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಸಾವಿರ ಕೋಟಿ ದಾಟಿದ್ದು, ಮುಂದಿನ ವಾರ ಇನ್ನೂ 500 ಕೋಟಿ ಲಾಭವಾಗುವ ಸಾಧ್ಯತೆ ಇದೆ.
ಪಾಕಿಸ್ತಾನದ ಲಿಯಾರಿ ಎಂಬ ಪ್ರದೇಶದಲ್ಲಿ ಯಾವ ರೀತಿಯಾಗಿ ಭಯೋತ್ಪಾದಕರು ಭಾರತವನ್ನು ಮುಗಿಸಲು ಪ್ರಯತ್ನಿಸುತ್ತಾರೆ. ಹಳೆ ನೋಟ್ಗಳನ್ನಿಟ್ಟುಕ“ಂಡು ಹೇಗೆ ಕೆಟ್ಟ ಕೆಲಸ ಮಾಡುತ್ತಾರೆ. ಮತ್ತು ನೋಟ್ ಬ್ಯಾನ್ ಆದ ಬಳಿಕ ಅವರ ಪರಿಸ್ಥಿತಿ ಏನಾಗುತ್ತದೆ..? ಧುರಂಧರ್ ಯಾವ ರೀತಿ ಅಲ್ಲಿರುವ ಪ್ರಸಿದ್ಧ ಭಯೋತ್ಪಾದಕರು ಮತ್ತು ಅವರ ಚೇಲಾಗಳನ್ನ ಫಿನಿಶ್ ಮಾಡಿ ಬರುತ್ತಾನೆ ಅನ್ನೋ ಬಗ್ಗೆ ಸಿನಿಮಾ ಇದೆ.
ಹೀಗಾಗಿ ಮಧ್ಯಪ್ರಾಚ್ಯದ ಕೆಲ ದೇಶಗಳಲ್ಲಿ ಮತ್ತು ಪಾಕಿಸ್ತಾನದಲ್ಲಿ ಈ ಸಿನಿಮಾ ಬ್ಯಾನ್ ಮಾಡಲಾಗಿದೆ. ಆದರೆ ಪೈರಸಿ ಕಾಪಿ ಪಡೆದು, ಭಾರತಕ್ಕಿಂತ ಹೆಚ್ಚಾಗಿ ಪಾಕಿಸ್ತಾನಿಗರೇ ತಮ್ಮ ಹಣೆಬರಹವನ್ನು ಕುತೂಹಲದಿಂದ ವೀಕ್ಷಿಸಿದ್ದಾರೆ. ವಿಷಯ ಏನಪ್ಪಾ ಅಂದ್ರೆ, ಪಾಕಿಸ್ತಾನದ ಕೆಲ ಯುವಕರು ಸಿನಿಮಾ ನೋಡಿದ ಬಳಿಕ, ಅದರ ಕಲೆಕ್ಷನ್ ತಿಳಿದ ಬಳಿಕ, ಆ ಕಲೆಕ್ಷನ್ನಲ್ಲಿ ಪಾಲು ಕೇಳುತ್ತಿದ್ದಾರಂತೆ.
ಧುರಂಧರ್ 2 ಸಾವಿರ ಕೋಟಿ ಗಳಿಸಿದೆ. ಇದರಲ್ಲಿ ನಮಗೆ 3ರಿಂದ 4 ಕೋಟಿ ರೂಪಾಯಿ ನೀಡಿದ್ರೆ, ನಾವು ನಮ್ಮ ಊರಿನ ರಸ್ತೆಗಳನ್ನ ಸರಿ ಮಾಡುತ್ತೇನೆ. ಉತ್ತಮ ರಸ್ತೆ ನಿರ್ಮಾಣ ಮಾಡುತ್ತೇವೆ ಎಂದಿದ್ದಾನೆ. ಇನ್ನೋರ್ವ ಯುವಕ, ಸಾವಿರ ಕೋಟಿ ಕಲೆಕ್ಷನ್ನಲ್ಲಿ 500 ಕೋಟಿ ನಮಗೆ ನೀಡಲಿ. ಏಕೆಂದರೆ, ಲಿಯಾರಿ ಪ್ರದೇಶದ ಬಗ್ಗೆ ಆ ಸಿನಿಮಾ ಇದೆ. ಮತ್ತು ನಾವು ಲಿಯಾರಿ ಪ್ರದೇಶದ ನಿವಾಸಿಗಳು. ಹೀಗಾಗಿ ಅರ್ಧ ಪಾಲು ಲಾಭ ನಮಗೆ ಬೇಕು. ಆದಿತ್ಯಧರ್ ಅರ್ಧ ಕೋಟಿ ಪಡೆಯಲಿ. ಅದರಿಂದಲೇ ನಮ್ಮ ಪ್ರದೇಶದ ರಸ್ತೆ ನಿರ್ಮಾಣವಾಗಲಿ ಎಂದಿದ್ದಾನೆ.
ಈ ಮೂರ್ಖತನದ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಜನ ಪಾಕಿಸ್ತಾನದವರಿಗೆ ಸಖತ್ ಆಗಿಯೇ ರೋಸ್ಟ್ ಮಾಡಿದ್ದಾರೆ. ಹೀಂಗೂ ಜನ ಭಿಕ್ಷೆ ಬೇಡ್ತಾರಾ..? ಇದೂ 1 ರೀತಿನಾ ಅಂತಾ ಓರ್ವ ಪ್ರಶ್ನಿಸಿದ್ದಾನೆ. ಇನ್ನೋರ್ವ ಇವರಿಗೆಲ್ಲ ಭಿಕ್ಷೆ ಬೇಡುವ ಅಭ್ಯಾಸ ಎಂದಿಗೂ ಹೋಗುವುದಿಲ್ಲ ಎಂದಿದ್ದಾನೆ.
Pakistani delulu aawam is saying that Aditya Dhar will earn 1000 Crore from #Dhurandhar2TheRevenge , he should return back 500 crore to Lyari because we don't have good roads here 😭😭😭😂😂😂😂 pic.twitter.com/kBdtGYvPla
— Chota Don (@choga_don) March 27, 2026




