Health Tips: ವೈದ್ಯರಾಗಿರುವ ಡಾ.ತನುಜಾ ಅವರು ಈಗಾಗಲೇ ಗ್ಲುಕೋಮಾ ಬಗ್ಗೆ ವಿವರಿಸಿದ್ದಾರೆ. ಹಾಗಾಗಿ ಗ್ಲುಕೋಮಾ ಬಗ್ಗೆ ನಾವು ಯಾವಾಗ ಎಚ್ಚರಿಕೆ ವಹಿಸಬೇಕು, ಏನಿದರ ಲಕ್ಷಣ, ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ.
ವೈದ್ಯರು ಹೇಳುವ ಪ್ರಕಾರ, ಮನೆಯಲ್ಲಿ ಯಾರಿಗಾದರೂ ಗ್ಲುಕೋಮಾ ಆಗಿದ್ದಲ್ಲಿ, ಅನುವಂಶಿಕವಾಗಿ ಆ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ ಮನೆಯಲ್ಲಿ ಅಂಥ ಸಮಸ್ಯೆ ಯಾರಿಗಾದರೂ ಇದ್ದಲ್ಲಿ, ನೀವು ಕೂಡ ಆಗಾಗ ನಿಮ್ಮ ಕಣ್ಣಿನ ತಪಾಸಣೆ ಮಾಡಿಸುವುದು ಉತ್ತಮ ಅಂತಾರೆ ವೈದ್ಯರು.
ಗ್ಲುಕೋಮಾ ಬಂದರೆ, ಅದನ್ನು ನಿರ್ಲಕ್ಷಿಸಿದೆ, ಚಿಕಿತ್ಸೆ ಪಡೆದು, ವೈದ್ಯರು ಹೇಳುವ ಔಷಧಿ ಬಳಸಬೇಕು. ಗ್ಲುಕೋಮಾ ನಿರ್ಲಕ್ಷಿಸಿದರೆ ಕಣ್ಣು ಕುರುಡಾಗಬಹುದು. ಹಾಗಾಗಿ ಜೀವನಪೂರ್ತಿ ವೈದ್ಯರು ಹೇಳುವ ಔಷಧಿಯನ್ನು ನೀವು ಕಣ್ಣಿನ ಹಾಕಬೇಕಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ತಪ್ಪಿಸದೇ, ಅಂಥ ಚಿಕಿತ್ಸೆಗೆ ಸ್ಪಂದಿಸಬೇಕು ಅಂತಾರೆ ವೈದ್ಯರು.
ಬಿಪಿ ಬಂದಾಗ ಹೇಗೆ ನಾವು ಮಾತ್ರೆ ಸೇವಿಸುತ್ತಲೇ ಇರಬೇಕೋ, ಅದೇ ರೀತಿ ಕಣ್ಣಿನ ಡ್ರಾಪ್ಸ್ ಕೂಡ. ಬಿಪಿ ಮಾತ್ರೆ ನಿಲ್ಲಿಸಿದರೆ, ಬಿಪಿ ಹೆಚ್ಚಾಗುವಂತೆ, ಗ್ಲುಕೋಮಾ ಬಂದಾಗ ಐ ಡ್ರಾಪ್ಸ್ ಹಾಕುವುದನ್ನು ಪದೇ ಪದೇ ತಪ್ಪಿಸಿದರೆ, ಕಣ್ಣಿನ ಸಮಸ್ಯೆ ಕೂಡ ಹೆಚ್ಚುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




